ETV Bharat / bharat

COVID-19 ಲಸಿಕೆಯು ದೇಶದ ಯುವ ಜನತೆಯಲ್ಲಿ ಹಠಾತ್ ಸಾವಿನ ಅಪಾಯ ಹೆಚ್ಚಿಸಿಲ್ಲ: ಐಸಿಎಂಆರ್​ - ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

ಕೋವಿಡ್​-19 ಲಸಿಕೆ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಕಲ್ಪನೆಗೆ ವಿರುದ್ಧವಾಗಿದೆ. ಲಸಿಕೆಯನ್ನು ಸ್ವೀಕರಿಸುವುದರಿಂದ ಹಠಾತ್ ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಐಸಿಎಂಆರ್​ ಅಧ್ಯಯನದಿಂದ ತಿಳಿದು ಬಂದಿದೆ.

COVID 19
ಕೋವಿಡ್​-19
author img

By ETV Bharat Karnataka Team

Published : Nov 21, 2023, 1:59 PM IST

ನವದೆಹಲಿ: ಕೋವಿಡ್-19 ಲಸಿಕಾಕರಣದಿಂದ ಭಾರತದಲ್ಲಿ ಯುವ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ತಿಳಿಸಿದೆ. '' ಹಿಂದೆ, ಕುಟುಂಬಗಳಲ್ಲಿ ಕೋವಿಡ್ -19 ನಿಂದ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, ಹಠಾತ್ ಸಾವಿನ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವಿತ್ತು. ಇದಕ್ಕೆ ಕುಟುಂಬದಲ್ಲಿ ವಂಶಪಾರಂಪರಿಕವಾಗಿ ಬಂದಿರುವ ಆರೋಗ್ಯ ಸಮಸ್ಯೆಗಳು ಮತ್ತು ಇಂದಿನ ಬದಲಾದ ಜೀವನಶೈಲಿಯ ಅಂಶಗಳಿಂದ ಹಠಾತ್ ಸಾವಿನ ಅಪಾಯ ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ. ಆದ್ರೆ, ವ್ಯಾಕ್ಸಿನೇಷನ್ ಕೊರೊನಾ ಸೋಂಕಿನ ಅಪಾಯ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಕೋವಿಡ್​-19 ಲಸಿಕೆಯು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಐಸಿಎಂಆರ್ ಅಧ್ಯಯನ ಸ್ಪಷ್ಟಪಡಿಸಿದೆ.

ಕೋವಿಡ್ ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದಾರೆ. "ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ಹಠಾತ್ ಮರಣಕ್ಕೆ ಸಂಬಂಧಿಸಿದ ಅಂಶಗಳು" ಎಂಬ ಶೀರ್ಷಿಕೆಯ ಅಧ್ಯಯನವು, ವ್ಯಾಕ್ಸಿನೇಷನ್ ಯಾವುದೇ ರೀತಿಯಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎನ್ನುವುದನ್ನು ಕಂಡುಹಿಡಿದಿದೆ.

  • "COVID-19 vaccination did not increase the risk of unexplained sudden death among young adults in India. Past COVID-19 hospitalization, family history of sudden death and certain lifestyle behaviours increased the likelihood of unexplained sudden death," says ICMR Study pic.twitter.com/pmeh0et1On

    — ANI (@ANI) November 21, 2023 " class="align-text-top noRightClick twitterSection" data=" ">

ಐಸಿಎಂಆರ್ ಅಧ್ಯಯನವನ್ನು ಉಲ್ಲೇಖಿಸಿ ಗುಜರಾತ್‌ನಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ''ತೀವ್ರವಾದ ಕೋವಿಡ್ ಸಮಸ್ಯೆಗಳನ್ನು ಹೊಂದಿರುವ ಜನರು ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಸಮಸ್ಯೆಗಳನ್ನು ತಡೆಯಲು ಪ್ರಯತ್ನಗಳನ್ನು ಮುಂದುವರಿಸಬೇಕು. ಅಂತಹ ಜನರು ಒಂದು ಅಥವಾ ಎರಡು ವರ್ಷಗಳ ಕಾಲ ತುಂಬಾ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು ಮುಖ್ಯ'' ಎಂದು ಸಲಹೆ ನೀಡಿದರು.

ಭಾರತದಲ್ಲಿ ಆರೋಗ್ಯವಂತ ಯುವ ವಯಸ್ಕರಲ್ಲಿ ಹಠಾತ್ ಹೆಚ್ಚಳದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ನಡೆಸಿದ ಅಧ್ಯಯನವು, 18-45 ವರ್ಷ ವಯಸ್ಸಿನ ಆರೋಗ್ಯವಂತ ಜನರ ಡೇಟಾವನ್ನು ಗಮನಿಸಿದೆ. ಅವರು ಕೋವಿಡ್‌ಗೆ ಮೊದಲು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿಲ್ಲ. ಆದ್ರೆ, 2021 ಅಕ್ಟೋಬರ್​ ಮತ್ತು ಮಾರ್ಚ್​ 2023ರ ನಡುವೆ ಅವರು ಹಠಾತ್ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಹೆಚ್ಚಿನವರು ಕೆಲವು ರೀತಿಯ ಮೆಡಿಕಲ್​ ಹಿಸ್ಟರಿ ಗಮನಿಸಿದರೆ, ಧೂಮಪಾನ, ಆಲ್ಕೋಹಾಲ್ ಸೇವನೆ ಅಥವಾ ಹೆಚ್ಚಿನ ತೀವ್ರತೆಯ ದೈಹಿಕ ಚಟುವಟಿಕೆಗಳ ಅಭ್ಯಾಸವನ್ನು ಹೊಂದಿದ್ದಾರೆಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅಧ್ಯಯನಗಳ ವಿಶ್ಲೇಷಣೆಯನ್ನು ಗಮನಿಸಿದೆ, ಕೋವಿಡ್-19 ವ್ಯಾಕ್ಸಿನೇಷನ್ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಿಲ್ಲ ಎಂದು ಆರೋಗ್ಯ ತಜ್ಞರು ವರದಿ ನೀಡಿದ್ದಾರೆ. ವಾಸ್ತವವಾಗಿ, ವ್ಯಾಕ್ಸಿನೇಷನ್ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಕಡಿಮೆ ಮಾಡಿದೆ. ಕೋವಿಡ್​-19 ನ ತೀವ್ರತರವಾದ ಪ್ರಕರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿಗೆ ಸ್ವಲ್ಪ ಮೊದಲು ಅತಿಯಾದ ಮದ್ಯಪಾನ ಮತ್ತು ತೀವ್ರವಾದ ದೈಹಿಕ ಚಟುವಟಿಕೆಯಂತಹ ಕೆಲವು ನಡವಳಿಕೆಗಳು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವ ಅಂಶಗಳಾಗಿವೆ ಎಂದು ವಿವರಿಸಲಾಗಿದೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ: 41 ಕಾರ್ಮಿಕರ ರಕ್ಷಣೆಗೆ ಸಮರೋಪಾದಿಯ ರಕ್ಷಣಾ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.