ETV Bharat / bharat

ಅಕ್ಟೋಬರ್‌ನಲ್ಲಿ ಕೋವಿಡ್‌ 3ನೇ ಅಲೆ ಹೆಚ್ಚು ಬಾಧಿಸುವ ಸಾಧ್ಯತೆ: ಎನ್‌ಐಡಿಎಂ

author img

By

Published : Aug 23, 2021, 2:20 PM IST

ಮುಂದಿನ ಅಕ್ಟೋಬರ್‌ನಲ್ಲಿ ಕೋವಿಡ್‌ 3ನೇ ಅಲೆ ದೇಶವನ್ನು ಸಾಕಷ್ಟು ಕಾಡುವ ಸಾಧ್ಯತೆ ಇದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ(NIDM) ಎಚ್ಚರಿಸಿದೆ.

COVID-19 third wave peak likely in October: NIDM report
ಅಕ್ಟೋಬರ್‌ನಲ್ಲಿ ಕೋವಿಡ್‌ 3ನೇ ಅಲೆ ಹೆಚ್ಚು ಬಾಧಿಸುವ ಸಾಧ್ಯತೆ - ಎನ್‌ಐಡಿಎಂ ಎಚ್ಚರಿಕೆ

ನವದೆಹಲಿ: ಅಕ್ಟೋಬರ್‌ನಲ್ಲಿ ಕೋವಿಡ್‌ 3ನೇ ಅಲೆ ಹೆಚ್ಚು ಬಾಧಿಸಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NIDM) ಎಚ್ಚರಿಕೆ ನೀಡಿದೆ. ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಬರುವ ಎನ್ಐಡಿಎಂ, 40 ತಜ್ಞರ ಅಭಿಪ್ರಾಯ ಸಂಗ್ರಹದ ಸಮೀಕ್ಷೆ ಆಧಾರದಲ್ಲಿ ಈ ಮುನ್ಸೂಚನೆ ಕೊಟ್ಟಿದೆ. ಮೂರನೇ ಅಲೆ 2021ರ ಜುಲೈ 15 ಹಾಗೂ ಅಕ್ಟೋಬರ್ 13ರ ನಡುವೆ ದೇಶವನ್ನು ಹೆಚ್ಚಾಗಿ ಕಾಡಲಿದೆ ಎಂದು ಭವಿಷ್ಯ ನುಡಿದಿದೆ.

ಡೆಲ್ಟಾ-ಪ್ಲಸ್ ವೇರಿಯೆಂಟ್ ಮೂರನೇ ಅಲೆಯ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಡೆಲ್ಟಾ-ಪ್ಲಸ್ ರೂಪಾಂತರಿ B.1.617.2 (ಡೆಲ್ಟಾ ರೂಪಾಂತರ) ಎರಡನೇ ಅಲೆಯ ಉಲ್ಬಣಕ್ಕೂ ಕಾರಣವಾಗಿತ್ತು. ಈ ಹೊಸ ರೂಪಾಂತರಿ ಉಪ-ವಂಶಾವಳಿಯಾಗಿದ್ದು ಅದು ಸ್ಪೈಕ್ ಪ್ರೊಟೀನ್ ರೂಪಾಂತರ 'K417N' ಅನ್ನು ಪಡೆದುಕೊಂಡಿದೆ ಎಂದು ಹೇಳಿದೆ.

ಇದನ್ನೂ ಓದಿ: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ದೇಶದಲ್ಲಿ ನಿನ್ನೆ 44 ಸಾವಿರ ಮಂದಿ ಚೇತರಿಕೆ

ಡೆಲ್ಟಾ ಪ್ಲಸ್ ರೂಪಾಂತರವನ್ನು ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೆಸರಿಸಲು ಈಗ ಸಾಕಷ್ಟು ಪುರಾವೆಗಳಿಲ್ಲದಿದ್ದರೂ, ಎನ್‌ಸಿಡಿಸಿ ಪ್ರಕಾರ, 2021ರ ಆಗಸ್ಟ್‌ 2ರ ವೇಳೆಗೆ ದೇಶದ 16 ರಾಜ್ಯಗಳಲ್ಲಿ ಮಾಡಿರುವ 58,240 ಪರೀಕ್ಷೆಗಳಲ್ಲಿ 70 ಪ್ರಕರಣಗಳು ಪತ್ತೆಯಾಗಿವೆ.

ಇನ್ನು ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಪ್ರಸ್ತುತ ಹೊಸ ಡೆಲ್ಟಾ ಪ್ಲಸ್ ರೂಪಾಂತರವು ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಜೈವಿಕ ಪುರಾವೆಗಳಿಲ್ಲ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.