ETV Bharat / bharat

ಕೋವಿಡ್ ಎದುರಿಸಲು ನೇಪಾಳಕ್ಕೆ ವೆಂಟಿಲೇಟರ್, ಆಂಬುಲೆನ್ಸ್​ಗಳನ್ನು ಕಳುಹಿಸಿದ ಭಾರತ - Nepali Army General Purna Chandra Thapa

ಉಭಯ ರಾಷ್ಟ್ರಗಳ ನಡುವಿನ ಒಗ್ಗಟ್ಟಿನ ಮತ್ತು ನಿಕಟ ಸಹಕಾರದ ಸಂಕೇತವಾಗಿ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ನೇಪಾಳಕ್ಕೆ ಭಾರತ ಸಹಾಯಹಸ್ತ ಚಾಚಿದೆ.

India provides ventilators, ambulances to Nepal
ನೇಪಾಳಕ್ಕೆ ವೆಂಟಿಲೇಟರ್, ಆಂಬುಲೆನ್ಸ್​ಗಳನ್ನ ಕಳುಹಿಸಿದ ಭಾರತ
author img

By

Published : Jun 11, 2021, 3:19 PM IST

ನವದೆಹಲಿ: ಭೀಕರ ಕೊರೊನಾ ಎರಡನೇ ಅಲೆಯ ನಡುವೆಯೂ ಭಾರತ ತನ್ನ ನೆರೆಯ ರಾಷ್ಟ್ರ ನೇಪಾಳಕ್ಕೆ ವೆಂಟಿಲೇಟರ್‌ಗಳು ಮತ್ತು ಆಂಬುಲೆನ್ಸ್‌ಗಳು ಸೇರಿದಂತೆ ವೈದ್ಯಕೀಯ ನೆರವು ನೀಡಿದ್ದು, ವೈರಸ್​ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುತ್ತಿದೆ.

ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರಿಗೆ ವೈದ್ಯಕೀಯ ಸಾಮಗ್ರಿಗಳನ್ನು ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಇಂದು ಹಸ್ತಾಂತರಿಸಿದ್ದಾರೆ.

  • Fighting COVID-19 Together 🇮🇳🇳🇵. As a gesture of solidarity & close cooperation, medical equipment including Ventilators & Ambulances was handed over today by Ambassador Kwatra to General Purna Chandra Thapa, Chief of the Nepali Army. @MEAIndia @PMOIndia @thenepalesearmy pic.twitter.com/O4ve3IMbJ4

    — IndiaInNepal (@IndiaInNepal) June 11, 2021 " class="align-text-top noRightClick twitterSection" data=" ">

"ಭಾರತ ಮತ್ತು ನೇಪಾಳ ಒಟ್ಟಾಗಿ ಕೋವಿಡ್​-19 ವಿರುದ್ಧ ಹೋರಾಡುತ್ತಿವೆ. ಉಭಯ ರಾಷ್ಟ್ರಗಳ ನಡುವಿನ ಒಗ್ಗಟ್ಟಿನ ಮತ್ತು ನಿಕಟ ಸಹಕಾರದ ಸಂಕೇತವಾಗಿ, ವೆಂಟಿಲೇಟರ್‌ಗಳು ಮತ್ತು ಆಂಬ್ಯುಲೆನ್ಸ್‌ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಇಂದು ರಾಯಭಾರಿ ಕ್ವಾತ್ರಾ ಅವರು ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾಗೆ ಹಸ್ತಾಂತರಿಸಿದರು" ಎಂದು ನೇಪಾಳದ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Coronavirus in India: ದೇಶದಲ್ಲಿ 91,702 ಮಂದಿಗೆ ಕೊರೊನಾ; 3,403 ಮಂದಿ ಬಲಿ

ನೇಪಾಳದಲ್ಲಿ ಈವರೆಗೆ 6 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ದೇಶಕ್ಕೆ ಯುರೋಪಿಯನ್ ರಾಷ್ಟ್ರಗಳು ನೆರವು ಮುಂದುವರೆಸಿವೆ. ಲಸಿಕೆಗಳ ಅಭಾವದಿಂದಾಗಿ ವ್ಯಾಕ್ಸಿನೇಷನ್​ ಡ್ರೈವ್ ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.