ನವದೆಹಲಿ: ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್, ಡೆಲ್ಟಾ ವಿರುದ್ಧ ಕೊವ್ಯಾಕ್ಸಿನ್ ಬೂಸ್ಟರ್ ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ಭಾರತ್ ಬಯೋಟೆಕ್ ಪ್ರಕಟಣೆ ಹೊರಡಿಸಿದೆ.
ಕೊವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಶಾಟ್ ನೀಡಲಾಗುತ್ತಿದ್ದು, ಈಗಾಗಲೇ ಇದನ್ನು ಪಡೆದುಕೊಂಡಿರುವ ಜನರಲ್ಲಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಹೆಚ್ಚಾಗಿದೆ ಎಂದು ತಿಳಿಸಿದೆ.
ಅಮೆರಿಕದ ಎಮೋರಿ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನದ ಫಲಿತಾಂಶವನ್ನು ಇದೀಗ ಭಾರತ್ ಬಯೋಟೆಕ್ ತನ್ನ ಟ್ವಿಟರ್ ಅಕೌಂಟ್ನಲ್ಲಿ ಪ್ರಕಟಿಸಿದ್ದು, ಕೋವಿಡ್ನ ಎರಡು ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದಿದೆ.
-
COVAXIN® (BBV152) Booster Shown to Neutralize Both Omicron and Delta Variants of SARS-CoV-2#bbv152 #COVAXIN #BharatBiotech #COVID19Vaccine #omicron #deltavariant #SARS_CoV_2 #covaxinapproval #boosterdose #pandemic pic.twitter.com/0IgFmm13rS
— BharatBiotech (@BharatBiotech) January 12, 2022 " class="align-text-top noRightClick twitterSection" data="
">COVAXIN® (BBV152) Booster Shown to Neutralize Both Omicron and Delta Variants of SARS-CoV-2#bbv152 #COVAXIN #BharatBiotech #COVID19Vaccine #omicron #deltavariant #SARS_CoV_2 #covaxinapproval #boosterdose #pandemic pic.twitter.com/0IgFmm13rS
— BharatBiotech (@BharatBiotech) January 12, 2022COVAXIN® (BBV152) Booster Shown to Neutralize Both Omicron and Delta Variants of SARS-CoV-2#bbv152 #COVAXIN #BharatBiotech #COVID19Vaccine #omicron #deltavariant #SARS_CoV_2 #covaxinapproval #boosterdose #pandemic pic.twitter.com/0IgFmm13rS
— BharatBiotech (@BharatBiotech) January 12, 2022
ಈ ಹಿಂದಿನ ಅಧ್ಯಯನಗಳ ಪ್ರಕಾರ ಅಲ್ಫಾ, ಬೀಟಾ, ಡೆಲ್ಟಾ ಹಾಗು ಝೀಟಾ ಸೇರಿದಂತೆ ಕೋವಿಡ್ನ ರೂಪಾಂತರಿಗಳ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಹೋರಾಡಿದ್ದು, ಇದೀಗ ಕೋವಿಡ್ನ ಬೂಸ್ಟರ್ ಲಸಿಕೆ ಪ್ರಯೋಜನಕಾರಿಯಾಗಿದೆ ಎಂದಿದೆ.
ಭಾರತ್ ಬಯೋಟೆಕ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ ಮಾತನಾಡಿ, 'ಕೋವ್ಯಾಕ್ಸಿನ್ ಲಸಿಕೆಯಲ್ಲಿ ನಿರಂತರ ಆವಿಷ್ಕಾರ ಮುಂದುವರೆದಿದ್ದು, ಒಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಹೋರಾಡುವ ಲಸಿಕೆಯ ಮೌಲ್ಯಮಾಪನ ಮುಂದುವರೆಯಲಿದೆ' ಎಂದರು.
ಭಾರತದಲ್ಲಿ ಕಳೆದ ಕೆಲ ವಾರಗಳಿಂದ ಕೊರೊನಾ ವೈರಸ್, ಒಮಿಕ್ರಾನ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಬೂಸ್ಟರ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.