ತಿರುನಂತಪುರ(ಕೇರಳ): ಕೊರೊನಾ ಪ್ರಕರಣಗಳ ಸಂಖ್ಯೆ ಕೇರಳದಲ್ಲಿ ಮಿತಿ ಮೀರಿವೆ. ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುಪಾಲು ಕೊರೊನಾ ಸೋಂಕಿತರು ಕೇರಳದಲ್ಲಿ ಕಂಡು ಬರುತ್ತಿದ್ದು, ಆತಂಕ ಮೂಡಿಸಿದೆ.
ಕೇರಳದಲ್ಲಿ ಪಾಸಿಟಿವಿಟಿ ದರ ಶೇಕಡಾ 19.03ರಷ್ಟಿದೆ. ಹಿಂದಿನ ದಿನ ಅಂದರೆ ಬುಧವಾರ 24,296 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಇಂದು ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.
ಕೊರೊನಾ ಹರಡದಂತೆ ತಡೆಯಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 4,70,860 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 4,44,278 ಮಂದಿಗೆ ಹೋಮ್ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗಿದೆ. 26, 582 ಮಂದಿಗೆ ಆಸ್ಪತ್ರೆಗೆ ಕ್ವಾರಂಟೈನ್ ಮಾಡಲಾಗಿದೆ.
ದೇಶದ ಕೋವಿಡ್ ಅಂಕಿ ಅಂಶಗಳಿಗೆ ಕೇರಳ ಕೋವಿಡ್ ಅಂಶಗಳ ಹೋಲಿಕೆ ಹೀಗಿದೆ.
ಕೋವಿಡ್ ಅಂಕಿ-ಅಂಶಗಳು | ದೇಶ | ಕೇರಳ |
ಹೊಸ ಸೋಂಕಿತರು | 46,164 | 31,445 |
ಹೊಸ ಚೇತರಿಕೆ | 34,159 | 20,271 |
ಇಂದು ಮೃತಪಟ್ಟವರು | 607 | 215 |
ಒಟ್ಟು ಪ್ರಕರಣಗಳು | 3,25,58,530 | 3827688 |
ಒಟ್ಟು ಸಾವನ್ನಪ್ಪಿದವರು | 436365 | 19,972 |
ಒಟ್ಟು ಚೇತರಿಕೆ ಕಂಡವರು | 3,17,88,440 | 3692628 |
ಒಟ್ಟು ಸಕ್ರಿಯ ಸೋಂಕಿತರು | 3,33,725 | 1,70,292 |
ಕೇರಳದಲ್ಲಿ ಕೋವಿಡ್ ಹೆಚ್ಚಳ ಕಾರಣ..
ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದರೂ, ಅಲ್ಲಿನ ಸರ್ಕಾರ ಬಕ್ರಿದ್ ಮತ್ತು ಓಣಂ ಹಬ್ಬಗಳ ಮೇಲೆ ನಿಷೇಧ ಹೇರಲಿಲ್ಲ. ಹಬ್ಬಗಳನ್ನು ಆಚರಿಸಲು ಅನುಮತಿ ನೀಡಲಾಗಿತ್ತು. ಇದೇ ಕಾರಣದಿಂದ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಗೆ ಕಾರಣ ಎನ್ನಲಾಗಿದೆ.