ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ ಸರ್ಕಾರದ ಮನವಿಯ ನಂತರ ರೈಲ್ವೆ ಇಲಾಖೆ ಶುಕ್ರವಾರ ಕ್ರೈಯೋಜೆನಿಕ್ ಟ್ಯಾಂಕರ್‌ಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ನೀತಿಯನ್ನು ರೂಪಿಸಿತು.
ಶುಕ್ರವಾರ ತಡರಾತ್ರಿ ಸಾರ್ವಜನಿಕವಾಗಿ ಪ್ರಕಟವಾದ ಈ ನೀತಿಯಲ್ಲಿ ಕ್ರೈಯೊಜೆನಿಕ್ ಟ್ಯಾಂಕರ್‌ಗಳನ್ನು ಪಾವತಿಸಿದ ರೋಲ್ ಆನ್ - ರೋಲ್ (ರೋ-ರೋ) ಸೇವೆಯಂತೆ ರಾಜ್ಯಗಳ ವಿವಿಧ ಸ್ಥಳಗಳಿಗೆ ಸಾಗಿಸಲಾಗುವುದು ಎಂದು ಹೇಳಲಾಗಿದೆ.
ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಮಹಾರಾಷ್ಟ್ರದ ಆರೋಗ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ವಿಷಯವನ್ನು ಪರಿಶೀಲಿಸಲಾಗಿದೆ. ಕ್ರೈಯೊಜೆನಿಕ್ ಕಂಟೇನರ್‌ಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಪ್ರಾಧಿಕಾರವು ಅನುಮೋದನೆ ನೀಡಿದೆ ಎಂದು ರೈಲ್ವೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ರೋ-ರೋ ಸೇವೆಯಲ್ಲಿ ಲೋಡ್ ಮಾಡಬೇಕಾದ ದ್ರವ ಆಮ್ಲಜನಕ ಟ್ರಕ್‌ಗಳ ಜೊತೆಯಲ್ಲಿರುವ ಸಿಬ್ಬಂದಿಗೆ ಪ್ರಯಾಣಕ್ಕಾಗಿ ಎರಡನೇ ದರ್ಜೆಯ ಟಿಕೆಟ್ ವಿಧಿಸಲಾಗುವುದು ಮತ್ತು ಟ್ರಕ್‌ನ ಜೊತೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,34,692 ಜನರಿಗೆ ಕೊರೊನಾ ದೃಢ.. 1,23,354 ಮಂದಿ ಗುಣಮುಖ
ಈ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಇದೆ ಎಂದು ಹೇಳಿದ್ದರು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವನ್ನು ಕೋರಿದ್ದರು.