ಚೆನ್ನೈ (ತಮಿಳುನಾಡು): 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು 2009ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿ, ಎಐಎಡಿಎಂಕೆ ಅಭ್ಯರ್ಥಿ ರಾಜ ಕಣ್ಣಪ್ಪನ್ ವಿರುದ್ಧ 3,354 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಇದನ್ನೂ ಓದಿ: 'ದ್ವೇಷ ಭಾಷಣ' ಆರೋಪದಡಿ ಸಂಸದ ಅಕ್ಬರ್ ಲೋನೆ ಪುತ್ರ ಅರೆಸ್ಟ್
ಚಿದಂಬರಂ ಅವರು ಮತದಾರರಿಗೆ ಹಣ ಹಂಚಿ ಗೆದ್ದಿದ್ದಾರೆ, ಕೇಂದ್ರ ಗೃಹ ಸಚಿವರಾದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಾಜ ಕಣ್ಣಪ್ಪನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಸಾಕ್ಷ್ಯ ಕುರಿತ ವಿಚಾರಣೆ ಕಳೆದ ಅಕ್ಟೋಬರ್ನಲ್ಲಿ ಮುಕ್ತಾಯವಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾಯಾಧೀಶೆ ಪುಷ್ಪಾ ಸತ್ಯ ನಾರಾಯಣ, 2009ರ ಲೋಕಸಭಾ ಚುನಾವಣೆಯಲ್ಲಿ ಚಿದಂಬರಂ ಅವರ ಗೆಲುವು ಮಾನ್ಯ ಎಂದು ತೀರ್ಪು ನೀಡಿದ್ದಾರೆ.