ETV Bharat / bharat

ಕೋವಿಡ್ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ‘ಕೋರ್ಟ್​​’ ನಟ ವೀರ ಸಾಥೀದಾರ್ ಇನ್ನಿಲ್ಲ - ರಾಷ್ಟ್ರ ಪ್ರಶಸ್ತಿ

ಆಸ್ಪತ್ರೆ ಮೂಲಗಳು ಹೇಳುವಂತೆ ನ್ಯುಮೋನಿಯಾದಿಂದಾಗಿ ಉಸಿರಾಟ ಸಮಸ್ಯೆಗೆ ಒಳಗಾಗಿದ್ದ ನಟ ವೀರ​​​ ಸಾಥೀಕರ್​ ಚಿಕಿತ್ಸೆ ಮಧ್ಯೆಯೇ ಹೃದಯಾಘಾತದಿಂದ ಮುಂಜಾನೆ 3.42ಕ್ಕೆ ನಿಧನರಾಗಿದ್ದಾರೆ.

Vira Sathidar
ವೀರ ಸಾಥೀದಾರ್
author img

By

Published : Apr 13, 2021, 3:51 PM IST

ನಾಗ್ಪುರ ( ಮಹಾರಾಷ್ಟ್ರ): ನಟ ಹಾಗೂ ಹೋರಾಟಗಾರ ವೀರ ಸಾಥೀದಾರ್ ಕೊರೊನಾ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇವರ ನಟನೆಯ ‘ಕೋರ್ಟ್​’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತಲ್ಲದೇ ಉತ್ತಮ ನಟ ಎಂಬ ಹೆಗ್ಗಳಿಕೆ ಪಡೆದಿದ್ದರು.

62 ವರ್ಷದ ಸಾಥೀದಾರ್ ಕೊರೊನಾದಿಂದ ಗುಣಮುಖರಾದ ಬಳಿಕ ನಾಗ್ಪುರದ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್​ ನಂತರದ ಚಿಕಿತ್ಸೆಗೆ ಒಳಗಾಗಿದ್ದರು.

ಆಸ್ಪತ್ರೆ ಮೂಲಗಳು ಹೇಳುವಂತೆ ನ್ಯುಮೋನಿಯಾದಿಂದಾಗಿ ಉಸಿರಾಟ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಅವರಿಗೆ ವಿಶೇಷ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ನೀಡುತ್ತಿರುವಾಗಲೇ ಹೃದಯಾಘಾತದಿಂದ ಅವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೋರ್ಟ್​ ಚಿತ್ರದ ನಿರ್ದೇಶಕ ಚೈತನ್ಯ ತಮ್ಹಾನೆ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರು ಕೃತಕ ಉಸಿರಾಟದ ಸಹಾಯದಿಂದ ಬದುಕಿದ್ದರು. ಕೋವಿಡ್ ಬಳಿಕ ವೆಂಟಿಲೇಟರ್​​​ನಲ್ಲಿದ್ದರು. ಇದೊಂದು ದುರದೃಷ್ಟಕರ ಸುದ್ದಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.