ETV Bharat / bharat

ಹನಿಮೂನ್​ಗೆ ತೆರಳಿದ್ದವರು ಕತಾರ್​​ನಲ್ಲಿ ಅರೆಸ್ಟ್​​​​​​: ದಂಪತಿಗೆ ಮೋಸ ಮಾಡಿದ್ದು ಯಾರು ಗೊತ್ತಾ? - ಬ್ಯಾಗ್‌ನಲ್ಲಿ ಮಾದಕವಸ್ತುಗಳು

ಕತಾರ್​ ನ್ಯಾಯಾಲಯವು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಭಾರತ ಸರ್ಕಾರದ ಹಸ್ತಕ್ಷೇಪದ ನಂತರ, ದಂಪತಿಯನ್ನು ಬಿಡುಗಡೆ ಮಾಡಲಾಗಿತ್ತು.

Exclusive: Couple Jailed In Qatar in drug trafficking charges finally returns home
ಹನಿಮೂನ್​ಗೆ ತೆರಳಿದ್ದವರು ಕತಾರ್​​ನಲ್ಲಿ ಅರೆಸ್ಟ್
author img

By

Published : Apr 19, 2021, 5:21 PM IST

Updated : Apr 19, 2021, 5:37 PM IST

ಮುಂಬೈ: 2019 ರಲ್ಲಿ ಮಾದಕ ದ್ರವ್ಯ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ಮುಂಬೈ ಮೂಲದ ಶಾರಿಕ್ ಖುರೇಷಿ ಮತ್ತು ಅವರ ಪತ್ನಿ ಒನಿಬಾ ಅವರು ತಮ್ಮ ಮಗಳೊಂದಿಗೆ ಜೈಲಿನಿಂದ ಮನೆಗೆ ಮರಳಿದ್ದಾರೆ.

ಕತಾರ್​ ನ್ಯಾಯಾಲಯವು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಭಾರತ ಸರ್ಕಾರದ ಮಧ್ಯೆಪ್ರವೇಶದ ನಂತರ, ದಂಪತಿಯನ್ನು ಬಿಡುಗಡೆ ಮಾಡಲಾಯಿತು. ಈ ಹಿನ್ನೆಲೆ 2021 ರ ಏಪ್ರಿಲ್ 15 ರಂದು ಭಾರತಕ್ಕೆ ಮರಳಿದರು.

ದಂಪತಿಗೆ ಮೋಸ ಮಾಡಿದ್ದು ಯಾರು ಗೊತ್ತಾ?

ಸಂಬಂಧಿಯೊಬ್ಬರು ಅವರ ಬ್ಯಾಗ್‌ನಲ್ಲಿ ಮಾದಕವಸ್ತುಗಳನ್ನು ಅವರ ಅರಿವಿಲ್ಲದೇ ಇಟ್ಟಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದ ನಂತರ ದಂಪತಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.

ಈ ಸಂಬಂಧ ಈಟಿವಿ ಭಾರತದ ಜೊತೆ ಮಾತನಾಡಿದ ದಂಪತಿ, ಆಪ್ತರೊಬ್ಬರು ತಮ್ಮನ್ನು ಹೇಗೆ ಮೋಸಗೊಳಿಸಿದರು ಎಂದು ವಿವರಿಸಿದ್ದಾರೆ. ಇವರ ಮಲತಾಯಿ ಕತಾರ್‌ಗೆ ಹನಿಮೂನ್​ಗೆ ಹೋಗಲು ಉಡುಗೊರೆಯಾಗಿ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಿದ್ದರು. ಜೊತೆಗೆ ಒಂದು ಬ್ಯಾಗ್​ಕೂಡ ಕೊಟ್ಟು ಅದರೊಂದಿಗೆ ಪ್ರಯಾಣ ಬೆಳೆಸಲು ಸೂಚಿಸಿದ್ದರು. ಈ ಪ್ರವಾಸವನ್ನು ಜುಲೈ 2019 ರಲ್ಲಿ ಈ ದಂಪತಿ ಕೈಗೊಂಡಿದ್ದರು.

ದಂಪತಿ ಮುಂಬೈ ವಿಮಾನ ನಿಲ್ದಾಣವನ್ನು ಹಾದು ಹೋದರಾದರೂ ಕತಾರ್ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಅವರ ಬ್ಯಾಗ್​ನಲ್ಲಿ ಮಾದಕ ವಸ್ತುಗಳು ಕಂಡು ಬಂದಿದೆ. ಈ ಕಾರಣಕ್ಕಾಗಿ ಪಾಪ ಯಾರೋ ಮಾಡಿದ ತಪ್ಪಿಗೆ ಹನಿಮೂನ್​ಗೆ ಹೋದ ದಂಪತಿಗಳು ಜೈಲಿಗೆ ಹೋಗುವಂತೆ ಆಯಿತು.

ಹೆಚ್ಚಿನ ಓದಿಗೆ: ಹನಿಮೂನ್​ಗೆ ತೆರಳಿದ್ದವರು ಕತಾರ್​​ನಲ್ಲಿ ಅರೆಸ್ಟ್​​​​​​.. 2 ವರ್ಷದ ನಂತ್ರ ಮುಂಬೈಗೆ ಬಂದ ಜೋಡಿ!

ಕತಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖುರೇಷಿ ಮತ್ತು ಒನಿಬಾ ಅವರನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಯಿತು. ಒಂದೂವರೆ ವರ್ಷದ ಸುದೀರ್ಘ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ನ್ಯಾಯಾಲಯ ದಂಪತಿಗೆ 10 ವರ್ಷಗಳ ಜೈಲು ಶಿಕ್ಷೆ ನೀಡಿತ್ತು. ಈ ಹಿನ್ನೆಲೆ ಖುರೇಷಿಯ ಕುಟುಂಬವು ಎಲ್ಲಾ ರೀತಿಯ ಶತ ಪ್ರಯತ್ನಗಳನ್ನು ಮಾಡಿ ಹಾಗೂ ಬಿಡುಗಡೆಗಾಗಿ ಭಾರತ ಸರ್ಕಾರವನ್ನು ಮನವಿ ಮಾಡಿಕೊಂಡಿತ್ತು. ಈ ಶ್ರಮದಿಂದ ಅವರು ಭಾರತಕ್ಕೆ ಮರಳಿದ್ದಾರೆ.

ಶರಿಕ್ ತಮ್ಮ ಮಲತಾಯಿ ಜೊತೆ ಮಾತನಾಡಿದ್ದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದರು. ಅದು ಅವರು ನಿರಪರಾಧಿ ಎಂದು ಸಾಬೀತುಪಡಿಸುವ ಸಾಧನವಾಯಿತು.

Last Updated : Apr 19, 2021, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.