ETV Bharat / bharat

ಇದು ಶತಮಾನಕ್ಕೆ ಒಮ್ಮೆ ಬರುವ ಬಿಕ್ಕಟ್ಟು, ಒಗ್ಗೂಡಿ ಎದುರಿಸೋಣ: ಸಚಿವರ ಸಭೆಯಲ್ಲಿ ನಮೋ ಕರೆ - ಭಾರತ ಕೋವಿಡ್ ನ್ಯೂಸ್​

ಈಗಿನ ಸಾಂಕ್ರಾಮಿಕವು ‘ಶತಮಾನಕ್ಕೆ ಒಮ್ಮೆ ಬರುವ ಬಿಕ್ಕಟ್ಟು’. ಇದು ಜಗತ್ತಿಗೆ ದೊಡ್ಡ ಸವಾಲು ಎಸೆದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರ ಸಾಮೂಹಿಕ ಪ್ರಯತ್ನದ ಆಧಾರದ ಮೇಲೆ ಕೋವಿಡ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಟೀಮ್ ಇಂಡಿಯಾ ವಿಧಾನ ಪ್ರತಿಪಾದಿಸಿತು.

PM Modi
PM Modi
author img

By

Published : Apr 30, 2021, 7:21 PM IST

ನವದೆಹಲಿ: ದೇಶದಲ್ಲಿನ ಕೋವಿಡ್-19 ಎರಡನೇ ಅಲೆಯಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರ ಮಟ್ಟದ ಪರಿಷತ್ತಿನ ಸಭೆ ನಡೆಸಿದರು.

ಈಗಿನ ಸಾಂಕ್ರಾಮಿಕವು ‘ಶತಮಾನಕ್ಕೆ ಒಮ್ಮೆ ಬರುವ ಬಿಕ್ಕಟ್ಟು’. ಇದು ಜಗತ್ತಿಗೆ ದೊಡ್ಡ ಸವಾಲು ಎಸೆದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರ ಸಾಮೂಹಿಕ ಪ್ರಯತ್ನದ ಆಧಾರದ ಮೇಲೆ ಕೋವಿಡ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಟೀಮ್ ಇಂಡಿಯಾ ವಿಧಾನ ಪ್ರತಿಪಾದಿಸಿತು.

ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಎಲ್ಲ ಅಂಗಗಳು ಒಗ್ಗಟ್ಟಿನಿಂದ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿವೆ. ತಮ್ಮ- ತಮ್ಮ ವಲಯದ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ನೆರವಾಗಿ, ಅವರ ಪ್ರತಿಕ್ರಿಯೆ ಪಡೆಯುತ್ತಿರುವಂತೆ ಸಚಿವರಿಗೆ ಪ್ರಧಾನಿ ಆಗ್ರಹಿಸಿದರು.

ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಪರಿಹರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಕಳೆದ 14 ತಿಂಗಳುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರು ಮಾಡಿದ ಎಲ್ಲ ಪ್ರಯತ್ನಗಳನ್ನೂ ಮಂತ್ರಿ ಪರಿಷತ್ತು ಪರಾಮರ್ಶಿಸಿತು.

ಆಸ್ಪತ್ರೆ ಹಾಸಿಗೆಗಳು, ಪಿಎಸ್​ಎ ಆಮ್ಲಜನಕ ಸೌಲಭ್ಯಗಳು, ಆಮ್ಲಜನಕ ಉತ್ಪಾದನೆ, ಸಂಗ್ರಹಣೆ ಮತ್ತು ಸಾಗಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ, ಅಗತ್ಯ ಔಷಧಗಳ ಲಭ್ಯತೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವ ರೂಪದಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯಗಳ ಸಮನ್ವಯದೊಂದಿಗೆ ಕೇಂದ್ರ ಸರ್ಕಾರವು ಮಾಡಿದ ಪ್ರಯತ್ನಗಳನ್ನೂ ಸಭೆಗೆ ವಿವರಿಸಲಾಯಿತು. ಅವುಗಳ ಪೂರೈಕೆ ಮತ್ತು ಲಭ್ಯತೆ ಮತ್ತಷ್ಟು ಹೆಚ್ಚಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಹ ಗಮನಸೆಳೆಯಲಾಯಿತು. ದುರ್ಬಲ ವರ್ಗದ ಜನರಿಗೆ ಆಹಾರ - ಧಾನ್ಯಗಳನ್ನು ಒದಗಿಸುವ ಮತ್ತು ಜನ್ ಧನ್ ಖಾತೆದಾರರಿಗೆ ಹಣಕಾಸಿನ ನೆರವು ನೀಡುವ ಕ್ರಮಗಳನ್ನು ಸಹ ಸೂಚಿಸಲಾಯಿತು.

ಭಾರತವು ಎರಡು ಲಸಿಕೆಗಳನ್ನು ಯಶಸ್ವಿಯಾಗಿ ಉತ್ಪಾದಿಸುತ್ತಿದ್ದು, ಇನ್ನೂ ಹಲವು ಅನುಮೋದನೆ ಮತ್ತು ಪರಿಚಯಿಸುವ ವಿವಿಧ ಹಂತಗಳಲ್ಲಿವೆ ಎಂಬುದನ್ನು ಸಹ ಸಭೆಯಲ್ಲಿ ಉಲ್ಲೇಖಿಸಲಾಯಿತು. ಇಲ್ಲಿಯವರೆಗೆ 15 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.

ಸಚಿವರ ಪರಿಷತ್ತು ಕೋವಿಡ್ ಸೂಕ್ತ ನಡವಳಿಕೆ ಮಾಸ್ಕ್ ಧಾರಣೆ, 6 ಅಡಿಗಳ ದೈಹಿಕ ಅಂತರ ಮತ್ತು ಪದೇ ಪದೇ ಕೈ ತೊಳೆಯುವುದರ ಮಹತ್ವವನ್ನು ಒತ್ತಿ ಹೇಳಿತು. ಮುಂದಿರುವ ಬೃಹತ್ ಸವಾಲು ಎದುರಿಸಲು ಸಮಾಜದ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಪುನರುಚ್ಚರಿಸಿದ ಮಂತ್ರಿ ಪರಿಷತ್ತು, ದೇಶ ಈ ಸಂದರ್ಭಕ್ಕೆ ಸೂಕ್ತವಾಗಿ ನಿಂತು ವೈರಾಣುವನ್ನು ಮಣಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ಪ್ರಧಾನಿ ಮೋದಿ ವಹಿಸಿದ್ದರು, ಸಚಿವರು, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್ ಕೋವಿಡ್ 19 ಸಾಂಕ್ರಾಮಿಕದ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.