ETV Bharat / bharat

ಕೋವಿಡ್​ ಹರಡುವಿಕೆಗೆ ಜನರ ನಿರ್ಲಕ್ಷ್ಯವೇ ಕಾರಣ: ಸಚಿವ ಡಾ.ಹರ್ಷವರ್ಧನ್ - ಅಂತರ್​ ರಾಷ್ಟ್ರೀಯ ಮಾಸ್ಕ್ ದಿನಾಚರಣೆ

ಕಳೆದ ವರ್ಷ ಕೋವಿಡ್​​ ನಿಯಂತ್ರಣಕ್ಕೆ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಎನ್ನದೇ ಕಾರ್ಯ ನಿರ್ವಹಿಸಿತು. ಈ ವರ್ಷದ ಆರಂಭದಲ್ಲಿ ಲಸಿಕೆಗಳನ್ನು ಹಾಕುವ ಪ್ರಕ್ರಿಯೆ ಶುರು ಮಾಡಿದೆವು. ಆದರೂ, ಜನತೆ ನಿರ್ಲಕ್ಷ್ಯ ತೋರಿದ್ದು, ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣರಾದರು.

vardhan
ಡಾ.ಹರ್ಷವರ್ಧನ್
author img

By

Published : Jun 18, 2021, 8:50 PM IST

ನವದೆಹಲಿ: ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದರೂ, ಜನತೆ ಮಾರ್ಗಸೂಚಿಗಳನ್ನು ಅನುಸರಿಸಲಿಲ್ಲ. ಇದರಿಂದಾಗಿ ಏಕಾಏಕಿ ಕೋವಿಡ್ ಪ್ರಕರಣಗಳು ಹೆಚ್ಚಳವಾದವು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಅಂತಾರಾಷ್ಟ್ರೀಯ ಮಾಸ್ಕ್ ದಿನಾಚರಣೆ ಹಿನ್ನೆಲೆ, ಕೇಂದ್ರ ಆರೋಗ್ಯ ಸಚಿವಾಲಯದ ಸಿಬ್ಬಂದಿಗೆ ಮಾಸ್ಕ್ ವಿತರಿಸಿದ ಬಳಿಕ ಮಾತನಾಡಿದ ಅವರು, ಕೈಗಾರಿಗಳು ಮತ್ತು ಕಾರ್ಪೊರೇಟ್​ ಸಂಸ್ಥೆಗಳ ಮಾಲೀಕರು ನಿಯಮಗಳನ್ನು ಅನುಸರಿಸಿ ಕೊರೊನಾ ಚೈನ್​ ಅನ್ನು ತುಂಡರಿಸಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವುದು ಆರೋಗ್ಯ ಸಚಿವಾಲಯದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.

ಕಳೆದ ವರ್ಷ ಕೋವಿಡ್​​ ನಿಯಂತ್ರಣಕ್ಕೆ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಎನ್ನದೇ ಕಾರ್ಯ ನಿರ್ವಹಿಸಿತು. ಈ ವರ್ಷದ ಆರಂಭದಲ್ಲಿ ಲಸಿಕೆಗಳನ್ನು ಹಾಕುವ ಪ್ರಕ್ರಿಯೆ ಶುರು ಮಾಡಿದೆವು. ಆದರೂ, ಜನತೆ ನಿರ್ಲಕ್ಷ್ಯ ತೋರಿದ್ದು, ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣರಾದರು.

ದೇಶದ ಬಹುತೇಕ ರಾಜ್ಯಗಳನ್ನು ಅನ್ಲಾಕ್ ಮಾಡಲಾಗಿದೆ ಆದರೆ, ಈಗಲೂ ನಾವು ನಿರ್ಲಕ್ಷ್ಯ ತೋರುವಂತಿಲ್ಲ. ಎಷ್ಟೇ ರೂಪಾಂತರ ವೈರಸ್​ಗಳು ಬಂದರೂ ಅವುಗಳನ್ನು ಹೊಡೆದೋಡಿಸಲು ನಮ್ಮ ಬಳಿಯಿರುವ ಏಕೈಕ ಅಸ್ತ್ರ ಮಾಸ್ಕ್​​. ಇದು ಅತ್ಯಂತ ಶಕ್ತಿಯುತ ಆಯುಧವಾಗಿದೆ ಎಂದರು.

ಇದನ್ನೂ ಓದಿ:Positive : ಲಸಿಕೆ ಹಾಕಿಸಿಕೊಂಡವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80% ಕಡಿಮೆ - ಡಾ.ವಿ ಕೆ ಪಾಲ್‌

ದೇಶದ ಪ್ರತಿಯೊಬ್ಬರಿಗೂ ಮಾಸ್ಕ್​​​ ಬಳಕೆಯ ಅಗತ್ಯತೆಗಳನ್ನು ಮನವರಿಕೆ ಮಾಡಿಕೊಡಬೇಕಿದೆ. ಜತೆಗೆ ಲಸಿಕೆ ಪಡೆಯುವಂತೆ ಜನತೆಗೆ ಅರಿವು ಮೂಡಿಸಬೇಕಿದೆ. ಭಾರತ ಸರ್ಕಾರವು ಈಗಾಗಲೇ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ಮುಂದಾಗಿರೋದು ಸಂತಸದ ಸಂಗತಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.