ETV Bharat / bharat

ಆಸ್ಪತ್ರೆಗೆ ಸಿಎಂ ಭೇಟಿ: ಚಿಕಿತ್ಸೆ ಸಿಗದೇ ಆಸ್ಪತ್ರೆ ಹೊರಗೆ ನರಳಾಡಿದ ಕೋವಿಡ್ ರೋಗಿಗಳು

author img

By

Published : Apr 29, 2021, 5:09 PM IST

Updated : Apr 29, 2021, 5:30 PM IST

ಸರ್ಕಾರಿ ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದರಿಂದ ಅನೇಕ ರೋಗಿಗಳು ಚಿಕಿತ್ಸೆಗೋಸ್ಕರ ಹೊರಗಡೆ ಕಾಯ್ದಿರುವ ಘಟನೆ ನಡೆದಿದೆ.

jind civil hospital manohar lal visit
jind civil hospital manohar lal visit

ಜಿಂದ್​(ಹರಿಯಾಣ): ಜಿಂದ್​ನಲ್ಲಿನ ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಈ ವೇಳೆ ಕೊರೊನಾ ರೋಗಿಗಳು ಚಿಕಿತ್ಸೆಗೋಸ್ಕರ ಗಂಟೆಗೂ ಅಧಿಕ ಕಾಲ ಕಾಯ್ದಿರುವ ಘಟನೆ ನಡೆದಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​ ಜಿಂದ್​​ನಲ್ಲಿರುವ ಸಿವಿಲ್​​ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಅವರೊಂದಿಗೆ ಅಧಿಕಾರಿಗಳು ಮತ್ತು ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿ ಸಹ ಇದ್ದರು. ಹೀಗಾಗಿ ಆಸ್ಪತ್ರೆಯ ಎಲ್ಲ ಗೇಟ್​ ಬಂದ್​ ಮಾಡಲಾಗಿತ್ತು. ಇದರಿಂದಾಗಿ ಅನೇಕ ರೋಗಿಗಳು ಗೇಟ್​ ಹೊರಗಡೆ ಕಾಯ್ದಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಕೆಲ ರೋಗಿಗಳು ನರಳಾಟ ನಡೆಸಿರುವ ಘಟನೆ ನಡೆದಿದೆ.

ಸಿವಿಲ್​​ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​

ಸುಮಾರು ನಿಮಿಷಗಳ ಕಾಲ ಅಲ್ಲಿನ ವೈದ್ಯರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿರುವ ಕಾರಣ ರೋಗಿಗಳು ಹೊರಗಡೆ ಕಾಯ್ದಿದ್ದಾರೆ. ಈ ವೇಳೆ, ಕೆಲ ರೋಗಿಗಳು ಅನೇಕ ಸಲ ಬಂದ್​ ಮಾಡಿದ್ದ ಬಾಗಿಲು ತಟ್ಟಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಕೊರೊನಾ ಅಟ್ಟಹಾಸಕ್ಕೆ ಚಿದಂಬರಂ ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಬಲಿ

ಕೆಲ ರೋಗಿಗಳ ಪರಿಸ್ಥಿತಿ ಹದಗೆಡಲು ಪ್ರಾರಂಭಿಸುತ್ತಿದ್ದಂತೆ ಹೊರಗಡೆ ಕಾಯುತ್ತಿದ್ದ ಅನೇಕರು ಬಾಗಿಲು ಬಡಿಯಲು ಶುರು ಮಾಡಿದ್ದಾರೆ. ನಂತರ ಪೊಲೀಸರು ಬಾಗಿಲು ತೆರೆದಿದ್ದಾರೆ.

Last Updated : Apr 29, 2021, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.