ETV Bharat / bharat

ನೆಗಡಿ, ಕೆಮ್ಮಿನಂತೆ ಉಳಿದು ಬಿಡಲಿದೆ ಕೊರೊನಾ ವೈರಸ್​: ಅಧ್ಯಯನ

author img

By

Published : May 21, 2021, 5:19 PM IST

ಮಹಾಮಾರಿ ಕೊರೊನಾ ವೈರಸ್​ ಭವಿಷ್ಯದಲ್ಲಿ ನೆಗಡಿ, ಕೆಮ್ಮಿನಂತೆ ಉಳಿದುಕೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

corona
corona

ನವದೆಹಲಿ: ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಬರುವ ದಿನಗಳಲ್ಲಿ ಕೆಮ್ಮು ಮತ್ತು ನೆಗಡಿಯಂತೆ ಸಾಮಾನ್ಯವಾಗಿ ಉಳಿದು ಬಿಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ವೈರಸ್​ ಜರ್ನಲ್​​ನಲ್ಲಿ ಪ್ರಕಟವಾದ ಸಂಶೋಧನೆ ಮತ್ತು ಗಣಿತದ ಮಾದರಿ ಆಧರಿಸಿ ಈ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ಕೋವಿಡ್ ಸಾಂಕ್ರಾಮಿಕ​​ ಕಾಲಾನಂತರದಲ್ಲಿ ನಮ್ಮ ದೇಹದಲ್ಲಿನ ಸ್ಥಿತಿಗತಿಗಳಲ್ಲೂ ಬದಲಾವಣೆ ಮಾಡುತ್ತದೆ ಎಂದು ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ಯುಟಾ ವಿಶ್ವವಿದ್ಯಾಲಯದ ಗಣಿತ ಮತ್ತು ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಫ್ರೆಡ್​ ಆಡ್ಲರ್​​ ಮಾತನಾಡಿದ್ದು, ಕೊರೊನಾ ಸಂಭವನೀಯ ಭವಿಷ್ಯದ ಬಗ್ಗೆ ತಿಳಿಸುತ್ತದೆ. ಆದರೆ, ಈಗಲೇ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಶಕದಲ್ಲಿ ಕೋವಿಡ್​ ತೀವ್ರತೆ ಕಡಿಮೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೊರೊನಾಗೆ ಆರ್ಯುವೇದ ಔಷಧಿ ಕೊಳ್ಳಲು ಮುಗಿಬಿದ್ದ ಜನ.. ಆಂಧ್ರ ಸಿಎಂ ಜಗನ್‌ ಅದಕ್ಕೆ ಹೀಗಂದರು..

ವೈರಸ್​​ನಲ್ಲಿನ ಬದಲಾವಣೆಗಳಿಗಿಂತ ನಮ್ಮ ದೇಹದಲ್ಲಿನ ರೋಗನಿರೋಧಕ ಪ್ರಕ್ರಿಯೆ ಬದಲಾಗಲಿದ್ದು, ಕೋವಿಡ್​ ಕೂಡ ನೆಗಡಿ, ಕೆಮ್ಮಿನ ರೀತಿ ಇರಲಿದೆ ಎಂದಿದ್ದಾರೆ. SARS-COV-2 ವೈರಸ್‌ ಕೂಡ ಕೊರೊನಾ ವೈರಸ್​​ನಂತೆ ಹರಡಿದರೂ, ಅದರಿಂದ ಮಾನವರಿಗೆ ಇದೀಗ ಅಪಾಯ ಕಡಿಮೆ. ಇದೇ ರೀತಿ ಮುಂದಿನ ದಿನಗಳಲ್ಲೂ ಕೋವಿಡ್​ ಉಳಿದುಕೊಳ್ಳಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.