ಮಹಾರಾಷ್ಟ್ರ : ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಜಿಆರ್‌ಪಿ ಕಾನ್ಸ್ಟೇಬಲ್ ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕಾನ್ಸ್ಟೇಬಲ್ ಹೃಷಿಕ್ಷ ಮಾನೆ ಎಂಬುವವರು ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ವೇಳೆ, ಯುವಕ ಅನೇಕ ಗಂಟೆಗಳಿಂದ ನಿಲ್ದಾಣದಲ್ಲಿ ಓಡಾಡುತ್ತಿದ್ದು ದ್ದನ್ನು ಗಮನಿಸಿದ್ದರು. ಯುವಕನ ನಡವಳಿಕೆ ಮೇಲೆ ಅನುಮಾನಗೊಂಡು ಆತನ ಮೇಲೆ ನಿಗಾ ಇಟ್ಟಿದ್ದರು. ಹೀಗಿರುವಾಗ ಮಧ್ಯಾಹ್ನ 2:30ರ ಗಂಟೆ ಸುಮಾರಿಗೆ ಯುವಕ ಪ್ಲಾಟ್ಫಾರ್ಮ್ನಿಂದ ರೈಲ್ವೆ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನು.
ಇದನ್ನು ಗಮನಿಸುತ್ತಲೇ ಇದ್ದ ಕಾನ್ಸ್ಟೇಬಲ್, ತಕ್ಷಣ ರೈಲ್ವೆ ಹಳಿಗೆ ಹಾರಿ ಯುವಕನನ್ನು ಪಕ್ಕದ ಹಳಿಗೆ ತಳ್ಳಿ ಯುವಕನನ್ನು ರಕ್ಷಿಸಿದ್ದಾರೆ. ಘಟನೆ ಕುರಿತಾದ ವಿಡಿಯೋ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಪಶ್ಚಿಮ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಾನ್ಸ್ಟೇಬಲ್ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ