ಆಂಧ್ರ ಪ್ರದೇಶ: ವಾಷಿಂಗ್ ಮೆಷಿನ್‌ನಿಂದ ಬರುವ ತ್ಯಾಜ್ಯ ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಎಂಬಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಕದಿರಿ ಪಟ್ಟಣದ ಮಶಾನಪೇಟೆಯಲ್ಲಿ ಪದ್ಮಾವತಿ ಎಂಬ ಮಹಿಳೆ ವಾಸವಾಗಿದ್ದಳು. ಆಕೆಯ ಮನೆಯಲ್ಲಿದ್ದ ವಾಷಿಂಗ್ ಮೆಷಿನ್‌ನ ತ್ಯಾಜ್ಯ ನೀರು ಪಕ್ಕದ ವೇಮಣ್ಣ ನಾಯ್ಕರ ಮನೆಗೆ ಹೋಗಿದೆ. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ತೀವ್ರ ವಾಗ್ವಾದ ನಡೆದು ಘರ್ಷಣೆಯಾಗಿದೆ. ಈ ವೇಳೆ ವೇಮಣ್ಣ ನಾಯ್ಕ್ ಕುಟುಂಬಸ್ಥರು ಪದ್ಮಾವತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಆಕೆಯ ಮುಖ ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ವಿಷಯ ತಿಳಿದ ಸ್ಥಳೀಯರು ಕೂಡಲೇ ಸಂತ್ರಸ್ತೆಯನ್ನು ಕದಿರಿ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪದ್ಮಾವತಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಕದಿರಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲವ್ ಮ್ಯಾಟರ್.. ಡೆಂಟಲ್ ವಿದ್ಯಾರ್ಥಿನಿಯನ್ನು ಬ್ಲೇಡ್ನಿಂದ ಕತ್ತು ಕೊಯ್ದು ಟೆಕ್ಕಿ