ನವದೆಹಲಿ : 2021ರ ಡಿಸೆಂಬರ್ ತಿಂಗಳ ಅಖಿಲ ಭಾರತ ಗ್ರಾಹಕ ಬೆಲೆಯ ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕರ ಸೂಚ್ಯಂಕ ತಲಾ 5 ಅಂಕಗಳಷ್ಟು ಏರಿಕೆ ಕಂಡಿದೆ. ಈ ಮೂಲಕ ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 1097ಕ್ಕೆ ಮತ್ತು ಗ್ರಾಮೀಣ ಕಾರ್ಮಿಕರ ಸೂಚ್ಯಂಕ 1106ಕ್ಕೆ ತಲುಪಿದೆ.
ಗ್ರಾಹಕ ಬೆಲೆ ಸೂಚ್ಯಂಕ ಹೆಚ್ಚಳವಾಗಲು ಇಂಧನ ಮತ್ತು ಇತರ ವಲಯಗಳಲ್ಲಿ ಬೆಲೆ ಹೆಚ್ಚಳ ಕಾರಣ ಎನ್ನಲಾಗುತ್ತಿದೆ. ಅಂದರೆ ಸೀಮೆ ಎಣ್ಣೆ, ಔಷಧ, ಉರುವಲು, ಬಸ್ ದರ, ಸೋಪ್, ಬಟ್ಟೆ ತೊಳೆಯುವ ಸಾಬೂನು ಮುಂತಾದವುಗಳ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಕಾರ್ಮಿಕ ಇಲಾಖೆ ಹೇಳಿದೆ.
ಸೂಚ್ಯಂಕ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೃಷಿ ಕಾರ್ಮಿಕರ ವಿಷಯದಲ್ಲಿ ಇದು 11 ರಾಜ್ಯಗಳಲ್ಲಿ 1ರಿಂದ 20 ಪಾಯಿಂಟ್‌ಗಳ ಹೆಚ್ಚಳವನ್ನು ಮತ್ತು ಎಂಟು ರಾಜ್ಯಗಳಲ್ಲಿ 1ರಿಂದ 12 ಪಾಯಿಂಟ್‌ಗಳ ಇಳಿಕೆಯನ್ನು ಸೂಚ್ಯಂಕ ದಾಖಲಿಸಿದೆ.
ಒಡಿಶಾದಲ್ಲಿ ಸೂಚ್ಯಂಕ ಸ್ಥಿರವಾಗಿದೆ. ಸೂಚ್ಯಂಕ ಪಟ್ಟಿಯಲ್ಲಿ ತಮಿಳುನಾಡು 1,290 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಿಮಾಚಲ ಪ್ರದೇಶ 861 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಗ್ರಾಮೀಣ ಕಾರ್ಮಿಕರ ವಿಷಯದಲ್ಲಿ, ಇದು 11 ರಾಜ್ಯಗಳಲ್ಲಿ 1ರಿಂದ 20 ಪಾಯಿಂಟ್‌ಗಳ ಹೆಚ್ಚಳವನ್ನು ಮತ್ತು ಎಂಟು ರಾಜ್ಯಗಳಲ್ಲಿ 1ರಿಂದ 14 ಪಾಯಿಂಟ್‌ಗಳ ಇಳಿಕೆಯನ್ನು ದಾಖಲಿಸಿದೆ.
ಇಲ್ಲಿಯೂ ಒಡಿಶಾದ ಸೂಚ್ಯಂಕ ಸ್ಥಿರವಾಗಿದೆ. ಸೂಚ್ಯಂಕ ಪಟ್ಟಿಯಲ್ಲಿ ತಮಿಳುನಾಡು 1,276 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 915 ಅಂಕಗಳೊಂದಿಗೆ ಹಿಮಾಚಲ ಪ್ರದೇಶವು ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ:ಅಮರ ಜವಾನ್ ಜ್ಯೋತಿ ನಂದಿಸಲ್ಲ, ವಿಲೀನವಷ್ಟೇ: ಕೇಂದ್ರ ಸರ್ಕಾರದ ಸ್ಪಷ್ಟನೆ