ETV Bharat / bharat

ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ರಕ್ಷಣೆಗೆ ಬೆಂಬಲ ಘೋಷಿಸಿದ ಕಾಂಗ್ರೆಸ್​: ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ

author img

By PTI

Published : Oct 9, 2023, 6:48 PM IST

Updated : Oct 10, 2023, 10:15 AM IST

ಇಸ್ರೇಲ್​ ಮತ್ತು ಪ್ಯಾಲೆಸ್ಟೀನಿಯನ್ನರ ಸಂಘರ್ಷದಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಪ್ಯಾಲೆಸ್ಟೀನಿಯನ್ನರಿಗೆ ತನ್ನ ಬೆಂಬಲ ಘೋಷಿಸಿತು.

ಪ್ಯಾಲಿಸ್ಟೀನಿಯನ್ನರಿಗೆ ಬೆಂಬಲ ಘೋಷಿಸಿದ ಕಾಂಗ್ರೆಸ್​

ನವದೆಹಲಿ: ಇಸ್ರೇಲ್​ ಮೇಲಿನ ದಾಳಿಯನ್ನು ಭಾನುವಾರವಷ್ಟೇ ಖಂಡಿಸಿದ್ದ ಕಾಂಗ್ರೆಸ್​, ಸೋಮವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡಿ ನಿರ್ಣಯಗಳನ್ನು ಅಂಗೀಕರಿಸಿದೆ. ಅಲ್ಲಿನ ಜನರು ತಮ್ಮ ಭೂಮಿಯ ರಕ್ಷಣೆ ಮಾಡಿಕೊಳ್ಳುವ ಹಾಗೂ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂದು ತನ್ನ ಹಿಂದಿನ ನಿಲುವಿನಂತೆ ಬೆಂಬಲ ಘೋಷಿಸಿದೆ.

ಕಳೆದೆರಡು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಮಧ್ಯಪ್ರಾಚ್ಯ ಸಂಘರ್ಷ ಕಾರಣವಾಗಿದೆ. ಈ ಯುದ್ಧದ ಬಗ್ಗೆ ಸಿಡಬ್ಲ್ಯೂಸಿ ತೀವ್ರ ಆತಂಕ ಮತ್ತು ನಿರಾಶೆ ವ್ಯಕ್ತಪಡಿಸಿದೆ. ಇಸ್ರೇಲ್‌ನಂತೆಯೇ ಪ್ಯಾಲೆಸ್ಟೀನೀಯನ್ನರು ತಮ್ಮ ಭೂಮಿಯ ರಕ್ಷಣೆ, ತಮ್ಮದೇ ಸರ್ಕಾರ ಮತ್ತು ಘನತೆಯಿಂದ ಬದುಕುವ ಹಕ್ಕು ಹೊಂದಿದ್ದಾರೆ. ಕದನ ವಿರಾಮ ಘೋಷಿಸಿ, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ.

ನಿನ್ನೆಯಷ್ಟೇ ಇಸ್ರೇಲ್​ ಮೇಲಿನ ದಾಳಿಗೆ ಖಂಡನೆ: ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ನಡೆಸಿದ ಭೀಕರ ದಾಳಿಯನ್ನು ಕಾಂಗ್ರೆಸ್​ ಭಾನುವಾರಷ್ಟೇ ಖಂಡಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ರಕ್ಷಣೆಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂಸಾಚಾರವು ಎಂದಿಗೂ ಪರಿಹಾರ ನೀಡುವುದಿಲ್ಲ. ಅದುವೇ ಪ್ರಮುಖ ಅಸ್ತ್ರವಾಗಬಾರದು ಎಂದು ಕಾಂಗ್ರೆಸ್​ ಹೇಳಿದೆ.

"ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳನ್ನು ಖಾತ್ರಿಪಡಿಸುವ ಮೂಲಕ, ಪ್ಯಾಲೆಸ್ಟೀನಿಯನ್ನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ತಮ್ಮ ಪಕ್ಷದ ನಿಲುವು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಭಾನುವಾರ ಪೋಸ್ಟ್ ಹಂಚಿಕೊಂಡಿದ್ದರು.

ಗಾಜಾ ಪಟ್ಟಿಯನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಆಳ್ವಿಕೆ ನಡೆಸುತ್ತಿರುವ ಹಮಾಸ್‌ ಉಗ್ರರು ಅಕ್ಟೋಬರ್​ 7 ರಂದು ಏಕಾಏಕಿ ಇಸ್ರೇಲ್​ ಮೇಲೆ ಸಾವಿರಾರು ರಾಕೆಟ್​ಗಳಿಂದ ದಾಳಿ ಮಾಡಿದ್ದರು. ಈ ಮಾರಕ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಕನಿಷ್ಠ 700 ಜನರು ಸಾವನ್ನಪ್ಪಿದ್ದಾರೆ ಮತ್ತು 2,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್​ನ ಪ್ರತಿದಾಳಿಯಲ್ಲಿ ಗಾಜಾ ಪಟ್ಟಿಯಲ್ಲೂ ವಿಧ್ವಂಸಕ ಸೃಷ್ಟಿಯಾಗಿದ್ದು, 500 ಸಾವು ಮತ್ತು 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಸ್ರೇಲ್​ಗೆ ಭಾರತ ಬೆಂಬಲ: ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಸ್ರೇಲ್​ ಜನರಿಗೆ ನಮ್ಮ ಬೆಂಬಲ ಇರಲಿದೆ ಎಂದು ಘೋಷಿಸಿದ್ದರು. ಅಲ್ಲದೇ, ಅಗತ್ಯ ನೆರವಿಗೂ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರು.

ಈ ಮಧ್ಯೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನಟಿ ಸ್ವರಾ ಭಾಸ್ಕರ್​ ಅವರು ಹಮಾಸ್​ ಮೇಲಿನ ಇಸ್ರೇಲ್​ ದಾಳಿಯನ್ನು ಖಂಡಿಸಿ ಪ್ಯಾಲಿಸ್ಟೀನಿಯನ್ನರಿಗೆ ಬೆಂಬಲ ನೀಡಿದ್ದರು.

ಇದನ್ನೂ ಓದಿ: ಇಸ್ರೇಲ್ ಮೇಲಿನ ಹಮಾಸ್‌ ಉಗ್ರರ ದಾಳಿಯ ಪ್ಲಾನ್ ತಯಾರಾಗಿದ್ದು​ ಇರಾನ್​ನಲ್ಲಿ: ವರದಿಯಲ್ಲಿ ಬಹಿರಂಗ!

Last Updated : Oct 10, 2023, 10:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.