ಜೈಪುರ: ರಾಜಸ್ಥಾನದ ಸರ್ದಾರ್ಶಹರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮತಗಳಿಂದ ಗೆಲುವು ಸಾಧಿಸಿದೆ. ಕುತೂಹಲಕಾರಿ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಂಡಿತ್ ಅನಿಲ್ ಶರ್ಮಾ ಗೆಲುವು ಸಾಧಿಸಿದ್ದಾರೆ. ಅನಿಲ್ ಶರ್ಮಾ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದರು. ಈ ಮುನ್ನಡೆ ಗೆಲುವಿನ ವರೆಗೂ ಕಾಯ್ದುಕೊಂಡಿದ್ದರು.
ಭನ್ವರ್ ಲಾಲ್ ಶರ್ಮಾ ಸರ್ದಾರ್ ನಿಧನದ ಹಿನ್ನೆಲೆ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ನಿಂದ ಅವರ ಪುತ್ರ ಪಂಡಿತ್ ಅನಿಲ್ ಶರ್ಮಾ ಚುನಾವಣೆಗೆ ನಿಂತಿದ್ದರು. 2023 ರಲ್ಲಿ ರಾಜಸ್ಥಾನದಲ್ಲಿ ಅಸೆಂಬ್ಲಿ ಚುನಾವಣೆ ಸಹ ನಡೆಯಲಿದೆ. ಹೀಗಾಗಿ ಸರ್ದಾರ್ ಶಹರ್ ಉಪಚುನಾವಣೆ ಅಧಿಕಾರದ ಸೆಮಿಫೈನಲ್ ಎಂದೇ ಬಿಂಬಿತವಾಗಿತ್ತು. ಇದರಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ರಾಜಸ್ಥಾನದಲ್ಲಿ ಇದುವರೆಗೆ ನಡೆಯುತ್ತಿರುವ ಟ್ರೆಂಡ್‌ಗೆ ಕಠಿಣ ಸವಾಲು ನೀಡುವತ್ತ ಇಂಗಿತ ವ್ಯಕ್ತಪಡಿಸಿದೆ.
ಇದನ್ನೂ ಓದಿ: 158 ಸ್ಥಾನಗಳಲ್ಲಿ ಮುನ್ನಡೆ..149 ಸ್ಥಾನ ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ?
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮತ್ತೊಮ್ಮೆ ಸೋಲು ಕಂಡಿದ್ದಾರೆ. ಮತ್ತೊಂದೆಡೆ ಉಸ್ತುವಾರಿ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ದೇವಿ ಸಿಂಗ್ ಭಾಟಿ ಸವಾಲು ಹಾಕಿದ್ದಾರೆ. ಆರ್‌ಎಲ್‌ಪಿಯಿಂದ ಹನುಮಾನ್ ಬೇನಿವಾಲ್ ಕ್ಷೇತ್ರದಲ್ಲಿ ಕಠಿಣ ಹೋರಾಟ ನೀಡಲು ಪ್ರಯತ್ನಿಸಿದ್ದರು.