ETV Bharat / bharat

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ: 40 ಮಂದಿ ಅಭ್ಯರ್ಥಿಗಳ ಘೋಷಿಸಿದ ಕಾಂಗ್ರೆಸ್​ - ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ

ಅಸ್ಸಾಂನಲ್ಲಿ 2001ರಿಂದ 2016ರವೆಗೆ ಕಾಂಗ್ರೆಸ್ ಆಡಳಿತ ನಡೆಸಿದ್ದು, 2016ರಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ನಡೆಸುತ್ತಿದೆ.

Congress releases list for Assam Assembly elections
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ: 40 ಮಂದಿ ಅಭ್ಯರ್ಥಿಗಳ ಘೋಷಿಸಿದ ಕಾಂಗ್ರೆಸ್​
author img

By

Published : Mar 7, 2021, 2:36 AM IST

Updated : Mar 7, 2021, 5:26 AM IST

ಹೈದರಾಬಾದ್: ಅಸ್ಸಾಂ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಲ್ಲಿನ 40 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲು ಅಭ್ಯರ್ಥಿಗಳನ್ನು ಶನಿವಾರ ಘೋಷಿಸಿದೆ.

ಬಿಡುಗಡೆಯಾದ ಪಟ್ಟಿಯಲ್ಲಿನ ಮಾಹಿತಿಯಂತೆ, ಪಕ್ಷದ ರಾಜ್ಯಾಧ್ಯಕ್ಷ ತಿಪುನ್ ಬೊರಾ ಗೋಹ್​ಪುರದಿಂದ, ಜೊರ್ಹಾತ್​ನಲ್ಲಿ ರಾಣಾ ಗೋಸ್ವಾಮಿ, ಸಿಬ್ಸಾಗರ್​ನಲ್ಲಿ ಸುಭ್ರಮಿತ್ರ, ದಿಬ್ರೂಗಢದಿಂದ ರಾಜ್​ಕುಮಾರ್ ನೀಲನೇತ್ರ ಮತ್ತು ದಿಗ್ಭಾಯ್​ನಿಂದ ಸಿಬ್ನಾಟ್ ಚೇಟಿಯಾ ಸ್ಪರ್ಧೆ ನಡೆಸಲಿದ್ದಾರೆ.

ಇದನ್ನೂ ಓದಿ: 'ರಾಮಮಂದಿರಕ್ಕೆ ಸಂಗ್ರವಾಗುವ ನಿಧಿ ಎರಡೂವರೆ ಸಾವಿರ ಕೋಟಿ ಮೀರಬಹುದು'

ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಾರಿ ಚುನಾವಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮಾರ್ಚ್​ 1ರಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಅಸ್ಸಾಂನಲ್ಲಿ 2001ರಿಂದ 2016ರವೆಗೆ ಕಾಂಗ್ರೆಸ್ ಆಡಳಿತ ನಡೆಸಿದ್ದು, 2016ರಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಕಾಂಗ್ರೆಸ್​ ನೇತೃತ್ವದಲ್ಲಿ ಕೆಲವೊಂದು ಪಕ್ಷಗಳು ಮಹಾಘಟಬಂಧನ್ ರೂಪಿಸಿವೆ. ಇವುಗಳನ್ನು ಹೊರತುಪಡಿಸಿದರೆ ಅಸ್ಸಾಂನಲ್ಲಿ ಎಐಯುಡಿಎಫ್​, ಅಂಚಲಿಕ್ ಗಣ ಮೋರ್ಚಾ,ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮುಂತಾದ ಸ್ಥಳೀಯ ಪಕ್ಷಗಳೂ ಇದ್ದು, ಅಲ್ಲಿನ ಸ್ಥಳೀಯರ ಮತಗಳ ಕಡೆಗೆ ಗಮನ ಹರಿಸುತ್ತವೆ.

Last Updated : Mar 7, 2021, 5:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.