ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಆಯ್ಕೆ ಮತ್ತು ಸರ್ಕಾರ ರಚನೆ ಕಸರತ್ತು ಆರಂಭಿಸಿದೆ. ಇಂದು ಬೆಂಗಳೂರಿನಲ್ಲಿ ಮಹತ್ವದ ಶಾಸಕಾಂಗ ಪಕ್ಷದ ನಡೆಯಲಿದೆ. ಮತ್ತೊಂದೆಡೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತಲುಪಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ಬಳಿಕ ಮುಂದಿನ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
-
#WATCH | Delhi: Huge number of supporters gathered outside the residence of Congress president Mallikarjun Kharge to welcome him. pic.twitter.com/odICqk8dyS
— ANI (@ANI) May 14, 2023 " class="align-text-top noRightClick twitterSection" data="
">#WATCH | Delhi: Huge number of supporters gathered outside the residence of Congress president Mallikarjun Kharge to welcome him. pic.twitter.com/odICqk8dyS
— ANI (@ANI) May 14, 2023#WATCH | Delhi: Huge number of supporters gathered outside the residence of Congress president Mallikarjun Kharge to welcome him. pic.twitter.com/odICqk8dyS
— ANI (@ANI) May 14, 2023
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಳಿಕ ಮೊದಲು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಗೆ ಖರ್ಗೆ ಮರಳಿದ್ದಾರೆ. ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅದ್ದೂರಿ ಸ್ವಾಗತ ಕೋರಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಖರ್ಗೆ ಅವರಿಗೆ ಹಿರಿಯ ನಾಯಕರು ಹೂಗುಚ್ಛ ನೀಡಿ ಬರ ಮಾಡಿಕೊಂಡರು. ನಂತರ ತಮ್ಮ ನಿವಾಸಕ್ಕೆ ತಲುಪಿಸಿದ ನಂತರವೂ ಕಾರ್ಯಕರ್ತರು ಸಂಭ್ರಮಾಚರಣೆ ಮೂಲಕ ಖರ್ಗೆ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು, ನಮ್ಮ ವೀಕ್ಷಕರು ಮೂವರು ಬೆಂಗಳೂರಿಗೆ ತೆರಳಿದ್ದಾರೆ. ಅವರು ತಲುಪಿದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇರುತ್ತದೆ. ಈ ಸಭೆಯ ನಂತರ ಅವರು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ನಂತರ ಹೈಕಮಾಂಡ್ ತನ್ನ ನಿರ್ಧಾರವನ್ನು ಇಲ್ಲಿಂದ ರವಾನಿಸುತ್ತದೆ ಎಂದು ಹೇಳಿದರು.
-
#WATCH | Delhi: CLP meeting will be held today and will hand over the report to the high command after which the high command will take its time to declare the name of the CM: Congress president Mallikarjun Kharge pic.twitter.com/aN73izKr8G
— ANI (@ANI) May 14, 2023 " class="align-text-top noRightClick twitterSection" data="
">#WATCH | Delhi: CLP meeting will be held today and will hand over the report to the high command after which the high command will take its time to declare the name of the CM: Congress president Mallikarjun Kharge pic.twitter.com/aN73izKr8G
— ANI (@ANI) May 14, 2023#WATCH | Delhi: CLP meeting will be held today and will hand over the report to the high command after which the high command will take its time to declare the name of the CM: Congress president Mallikarjun Kharge pic.twitter.com/aN73izKr8G
— ANI (@ANI) May 14, 2023
ಇದೇ ವೇಳೆ, ಕರ್ನಾಟಕದ ಜನತೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಜನರು ನಮಗೆ ದಾಖಲೆಯ ಮತಗಳನ್ನು ನೀಡಿದ್ದಾರೆ. ನಾವು ನಮ್ಮ ಸಂಪುಟ ರಚನೆಯ ನಂತರ ನಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿರುವ ಎಲ್ಲ ಐದು ಭರವಸೆಗಳನ್ನು ನಾವು ಜಾರಿಗೊಳಿಸುತ್ತೇವೆ ಎಂದು ಖರ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!