ನವದೆಹಲಿ :ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಹಿಂಸಾಚಾರದ ನಂತರ ರಾಜ್ಯದ 100ಕ್ಕೂ ಹೆಚ್ಚು ರೈತರು ಕಾಣೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಚಿವರಾದ ಸುಖ್ಜಿಂದರ್ ರಾಂಧವಾ ಮತ್ತು ಸಂಸತ್ ಸದಸ್ಯ ಮನೀಶ್ ತಿವಾರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮಂತ್ರಿಗಳಾದ ಸುಖಜೀಂದರ್ ರಾಂಧವಾ, ಸುಖ್ ಸರ್ಕರಿಯಾ ಮತ್ತು ರಾಜ್ ಕುಮಾರ್ ಚಾಬೆವಾಲ್ ಅವರೊಂದಿಗೆ ಬಜೆಟ್ ನಂತರ ಅಮಿತ್ ಶಾ ಅವರನ್ನು ಭೇಟಿ ಮಾಡಲಾಯಿತು ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಬಂಧನಕ್ಕೊಳಗಾದವರ ಪಟ್ಟಿಯನ್ನು ಕಾನೂನುಬದ್ಧವಾಗಿ ಪಡೆಯಲು ಸಾಧ್ಯವಾಗುವಂತೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ನಾವು ಅವರಿಗೆ ವಿನಂತಿಸಿದ್ದೇವೆ ಎಂದಿದ್ದಾರೆ. ರ‍್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ ಪಂಜಾಬ್‌ನ 100ಕ್ಕೂ ಹೆಚ್ಚು ರೈತರು ಕಾಣೆಯಾಗಿದ್ದಾರೆ ಎಂದು ಪಂಜಾಬ್ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.