ETV Bharat / bharat

ಜಾತಿಗಣತಿ ಬಗ್ಗೆ ಪ್ರಧಾನಿ ಮೌನವೇಕೆ?, ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಿ: ಕಾಂಗ್ರೆಸ್​ ಆಗ್ರಹ - ಜಾತಿಗಣತಿ

ಬಿಹಾರದ ಬಳಿಕ ರಾಜಸ್ಥಾನ ಸರ್ಕಾರ ಜಾತಿಗಣತಿ ನಡೆಸಲು ಆದೇಶಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ.

ಜಾತಿಗಣತಿ
ಜಾತಿಗಣತಿ
author img

By ETV Bharat Karnataka Team

Published : Oct 8, 2023, 4:24 PM IST

ನವದೆಹಲಿ: ಬಿಹಾರ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಇದೀಗ ರಾಜಸ್ಥಾನ ಸರ್ಕಾರ ಕೂಡ ಸಮೀಕ್ಷೆಗೆ ಆದೇಶಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳನ್ನು ಸಮಾನವಾಗಿ ನೀಡಲು ಸಮೀಕ್ಷೆಯನ್ನು ನಡೆಸಬೇಕು. ಈ ಬಗ್ಗೆ ಪ್ರಧಾನಿ ಮೋದಿ ಅವರು ಮೌನ ವಹಿಸಿದ್ದು ಏಕೆ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಸ್ಥಾನದಲ್ಲಿ ಜಾತಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಇದರಂತೆಯೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಬೇಕು. ಅಲ್ಲಿಯ ಜನರಿಗೂ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳನ್ನು ಒದಗಿಸಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ.

  • भारत जोड़ो यात्रा जब राजस्थान में थी, तब कई समुदायों के प्रतिनिधिमंडलों ने @RahulGandhi से मुलाक़ात की थी। उस दौरान ओबीसी के प्रतिनिधिमंडल ने विशेष रूप से जाति जनगणना की मांग उठाई थी। राहुल गांधी ने उनकी बातों को बेहद गंभीरता से लिया था।

    अब राजस्थान सरकार ने उनकी भावनाओं के… pic.twitter.com/We8y5cDagW

    — Jairam Ramesh (@Jairam_Ramesh) October 8, 2023 " class="align-text-top noRightClick twitterSection" data=" ">

ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದಾಗ ರಾಹುಲ್ ಗಾಂಧಿ ಅವರು ಅನೇಕ ಸಮುದಾಯಗಳ ನಿಯೋಗಗಳನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಒಬಿಸಿ ನಿಯೋಗಗಳು ನಿರ್ದಿಷ್ಟವಾಗಿ ಜಾತಿ ಗಣತಿಗಾಗಿ ಬೇಡಿಕೆಯನ್ನು ಮಂಡಿಸಿದ್ದವು. ರಾಹುಲ್ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದರು. ಈಗ ರಾಜಸ್ಥಾನ ಸರ್ಕಾರ ಜನರ ಭಾವನೆಗಳಿಗೆ ಅನುಗುಣವಾಗಿ ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಇದು ಸ್ವಾಗತಾರ್ಹ ನಡೆ ಎಂದು ಪೋಸ್ಟ್ ಮಾಡಿದ್ದಾರೆ.

ಸಮೀಕ್ಷೆಯು ವಿಶೇಷವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಸಾಮಾಜಿಕ ನ್ಯಾಯದ ಖಚಿತತೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳನ್ನು ನೀಡುವುದು ಬಹಳ ಮುಖ್ಯ ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೌನವೇಕೆ?: ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಇಂತಹ ಸಮೀಕ್ಷೆಯನ್ನು ಏಕೆ ಕೈಗೊಳ್ಳುತ್ತಿಲ್ಲ. ಜಾತಿ ಗಣತಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಏಕೆ ಮೌನವಾಗಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜೈರಾಮ್​ ರಮೇಶ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇಂಡಿಯಾ ಕೂಟದ ಹಲವು ವಿಪಕ್ಷಗಳು ದೇಶಾದ್ಯಂತ ಜಾತಿ ಗಣತಿಗೆ ಒತ್ತಾಯಿಸುತ್ತಿವೆ. ಇದೀಗ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಬಿಹಾರ ಈಚೆಗಷ್ಟೇ ಜಾತಿ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದೆ. ಈಗ ರಾಜಸ್ಥಾನವೂ ಗಣತಿಗೆ ಆದೇಶಿಸಿದೆ. ಶೀಘ್ರದಲ್ಲೇ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಅಲ್ಲಿನ ಸರ್ಕಾರ ಸಮೀಕ್ಷೆ ಪೂರೈಸಲು ಮುಂದಾಗಿದೆ. ಹಾಗೊಂದು ನಡೆದಲ್ಲಿ ದೇಶದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಲಿದೆ.

ಇದನ್ನು ಓದಿ: ಬಿಹಾರದಲ್ಲಿ ಶೇಕಡಾ 82ರಷ್ಟು ಹಿಂದೂಗಳಿದ್ದಾರೆ.. ‘ಹಿಂದೂ ರಾಜ್ಯ'ವೆಂದು ಘೋಷಿಸಿ: ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.