ಹೈದರಾಬಾದ್: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ವಿರುದ್ಧ 45 ವರ್ಷದ ಮಹಿಳೆಯೊಬ್ಬರು ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2020ರಲ್ಲಿ ನಾರಾಯಣಪೇಟೆ ಜಿಲ್ಲೆಯಲ್ಲಿ ಆರೋಪಿ ತಮ್ಮನ್ನು ಭೇಟಿಯಾಗಿದ್ದರು. ಪ್ರೀತಿ ಮಾಡುವ ನೆಪದಲ್ಲಿ ಹತ್ತಿರವಾಗಿದ್ದ ವ್ಯಕ್ತಿ ತಮ್ಮನ್ನು ಮದುವೆಯಾಗವ ಬಯಕೆ ವ್ಯಕ್ತಪಡಿಸಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.
ದೂರಿನಲ್ಲಿ ಇರುವುದೇನು?: ನಿನ್ನನ್ನು ಮದುವೆ ಆಗುತ್ತೇನೆ ಎಂದು ಆರೋಪಿತ ವ್ಯಕ್ತಿ ಹೇಳಿದಾಗ ಮಹಿಳೆ ನಿಮಗೆ ಈಗಾಗಲೇ ಮದುವೆ ಆಗಿದೆಯಲ್ಲ ಎಂದು ಪ್ರಶ್ನಿಸಿದ್ದರಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಹೆಂಡತಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂರು ವರ್ಷಕ್ಕಿಂತ ಅವಳು ಹೆಚ್ಚು ಬದುಕುವುದಿಲ್ಲ, ಆಕೆಯನ್ನು ನೋಡಿಕೊಳ್ಳಲು ಒಬ್ಬರು ಬೇಕು ಎಂದು ಹೇಳಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ
ಅಪಾದಿತ ವ್ಯಕ್ತಿ ಆಶ್ವಾಸನೆ ನೀಡಿದಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ಇದಕ್ಕೆ ಸಾಕ್ಷಿಯಾಗಿ ಅವರು ಹಳದಿ ದಾರವನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲ ಅ ಆ ವ್ಯಕ್ತಿ ತನ್ನನ್ನು ಚರ್ಚೆಗೆಂದು ಹೋಟೆಲ್‌ಗೆ ಕರೆದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆಪಾದಿಸಿದ್ದಾರೆ.
ಫೋಟೋ ತೆಗೆದು ಬ್ಲಾಕ್ ಮೇಲ್ ಆರೋಪ: ಹೋಟೆಲ್ನಲ್ಲಿ ಏಕಾಂತದಲ್ಲಿರುವ ಛಾಯಾಚಿತ್ರಗಳನ್ನು ತೆಗೆದುಕೊಂಡಿರುವ ವ್ಯಕ್ತಿ ತನ್ನ ಬೇಡಿಕೆಗಳಿಗೆ ಮನ್ನಣೆ ಕೊಡದಿದ್ದರೆ ಅವುಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿದ್ದರು ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ನೀಡಿದ ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ:ಆಸ್ತಿ ವಿವಾದ: ಕತ್ತಿಯಿಂದ ಕಡಿದು ತಂಗಿಯ ಕೊಲೆಗೆ ಯತ್ನಿಸಿದ ಅಣ್ಣ!