ETV Bharat / bharat

ವ್ಯಾಕ್ಸಿನೇಷನ್ ನೀತಿ'ಅಸಮಾನತೆಯಿಂದ' ಕೂಡಿದೆ ಎಂದ ಕಾಂಗ್ರೆಸ್.. 'ಒಂದು ರಾಷ್ಟ್ರ, ಒಂದು ಬೆಲೆ'ಗೆ ಆಗ್ರಹ - ಹಿಂಜರಿತ ಮತ್ತು ಅಸಮಾನತೆ

ಹೊಸ ವ್ಯಾಕ್ಸಿನೇಷನ್ ನೀತಿಯು ಈಗಾಗಲೇ ತತ್ತರಿಸಿರುವ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೇರುತ್ತದೆ. ಪಿಎಂ ಕೇರ್ಸ್‌ನಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆಯೋ ಅದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ರಾಷ್ಟ್ರ, ಒಂದು ತೆರಿಗೆಯನ್ನು ನಂಬುವ ಈ ಸರ್ಕಾರ, 'ಒಂದು ರಾಷ್ಟ್ರ, ಒಂದು ಬೆಲೆ'ಯನ್ನು ನಂಬುವುದಿಲ್ಲ..

price
ಮಾಜಿ ಹಣಕಾಸು ಸಚಿವ ಪಿ ಚಿದಂಬರಂ
author img

By

Published : Apr 20, 2021, 8:01 PM IST

ನವದೆಹಲಿ : ಕೇಂದ್ರ ಸರ್ಕಾರವು ಕೋವಿಡ್​ ಲಸಿಕಾ ಅಭಿಯಾನದ ಮೂರನೇ ಹಂತಕ್ಕೆ ಚಾಲನೆ ನೀಡಿದ ಕೇವಲ ಒಂದು ದಿನದ ನಂತರ, ಈ ಕ್ರಮವು ಅನಾರೋಗ್ಯಕರ ಬಿಡ್ಡಿಂಗ್ ಮತ್ತು ಲಾಭದಾಯಕತೆಗೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು "ಹಿಂಜರಿತ ಮತ್ತು ಅಸಮಾನತೆಯ'' ನಿರ್ಧಾರ ಎಂದೂ ಕರೆದಿದೆ.

ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, "ಕೇಂದ್ರದ ನೀತಿಯಲ್ಲಿ ಮಾಡಿರುವ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು" ಸ್ವಾಗತಿಸಿದರು. ಆದಾಗ್ಯೂ, ಈಗ ಘೋಷಿಸಿದ ಲಸಿಕೆ ನೀತಿ ಹಿಂಜರಿತ ಮತ್ತು ಅಸಮಾನತೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.

"ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯಗಳು ಈ ನೀತಿಯಿಂದಾಗಿ ಸಾಕಷ್ಟು ಅನಾನುಕೂಲತೆ ಎದುರಿಸುತ್ತವೆ. ಜಿಎಸ್​ಟಿ ಆದಾಯ ಕೊರತೆ, ಕಡಿಮೆ ತೆರಿಗೆ ಹಂಚಿಕೆ, ಅನುದಾನ ಕಡಿತ ಮುಂತಾದವುಗಳಿಂದ ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯಗಳು ಈ ಹೆಚ್ಚುವರಿ ಹೊರೆಗಳನ್ನು ಭರಿಸಬೇಕಾಗುತ್ತದೆ" ಎಂದು ಚಿದಂಬರಂ ಹೇಳಿದರು.

ಮಾರ್ಪಡಿಸಿದ ಲಸಿಕೆ ನೀತಿ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದನ್ನು ತೋರುತ್ತಿದೆ ಮತ್ತು ರಾಜ್ಯಗಳಿಗೆ ಹೊರೆಯಾಗಲಿದೆ. ಲಸಿಕೆ ತಯಾರಕರನ್ನು ಲಾಭದಾಯಕವಾಗಿಸಲು ಪ್ರೋತ್ಸಾಹಿಸುತ್ತದೆ ಮತ್ತು ರಾಜ್ಯಗಳ ನಡುವೆ ಬಡ ಮತ್ತು ಶ್ರೀಮಂತ ಭಾರತೀಯರ ನಡುವಿನ ಅಸಮಾನತೆ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಆರೋಪಿಸಿದ್ರು. ಇದೇ ವೇಳೆ ಪಿಎಂ-ಕೇರ್ಸ್ ಅಡಿಯಲ್ಲಿ ಸಂಗ್ರಹಿಸಲಾದ ಸಾವಿರಾರು ಕೋಟಿ ಹಣವನ್ನು ಎಲ್ಲಿ ಬಳಸಲಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ" ಎಂದು ಅವರು ಹೇಳಿದರು.

ಮಾರ್ಪಡಿಸಿದ ಲಸಿಕೆ ನೀತಿಯು ಲಸಿಕೆ ತಯಾರಕರಿಗೆ ಉತ್ಪಾದನೆಯನ್ನು ಹೆಚ್ಚಿಸಲು ಬಂಡವಾಳ ಹೂಡಿಕೆಗೆ ಹಣ ಒದಗಿಸುವುದಿಲ್ಲ ಮತ್ತು ಇತರ ದೇಶೀಯ ಲಸಿಕೆ ತಯಾರಕರಿಗೆ ಅನುಮೋದಿತ ಲಸಿಕೆಗಳನ್ನು ತಯಾರಿಸಲು ಮತ್ತು ಒಟ್ಟು ಮೊತ್ತ ಹೆಚ್ಚಿಸಲು ಕಡ್ಡಾಯ ಪರವಾನಿಗೆಗಾಗಿ ಕಾನೂನಿನಲ್ಲಿರುವ ನಿಬಂಧನೆಗಳನ್ನು ಅದು ಆಹ್ವಾನಿಸುವುದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾರ್ಪಡಿಸಿದ ನೀತಿಯು ವಿದೇಶಿ ನಿರ್ಮಿತ ಅನುಮೋದಿತ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಯಾವುದೇ ವಿದೇಶಿ ತಯಾರಕರು ಅದರ ಲಸಿಕೆ ರಫ್ತು ಮಾಡಲು ಒಪ್ಪಿಕೊಂಡಿದ್ದಾರೆಯೇ ಎಂಬ ಬಗ್ಗೆ ಯಾಕೆ ಸ್ಪಷ್ಟತೆ ಇಲ್ಲ ಎಂದು ಚಿದಂಬರಂ ಪ್ರಶ್ನಿಸಿದರು.

ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, "ಹೊಸ ವ್ಯಾಕ್ಸಿನೇಷನ್ ನೀತಿಯು ಈಗಾಗಲೇ ತತ್ತರಿಸಿರುವ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೇರುತ್ತದೆ.

ಪಿಎಂ ಕೇರ್ಸ್‌ನಲ್ಲಿ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆಯೋ ಅದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ರು. "ಒಂದು ರಾಷ್ಟ್ರ, ಒಂದು ಚುನಾವಣೆ," ಒಂದು ರಾಷ್ಟ್ರ, ಒಂದು ತೆರಿಗೆ "ಯನ್ನು ನಂಬುವ ಈ ಸರ್ಕಾರ, 'ಒಂದು ರಾಷ್ಟ್ರ, ಒಂದು ಬೆಲೆ'ಯನ್ನು ನಂಬುವುದಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕಾ ಉತ್ಪಾದಕರಿಂದಲೇ ಡೋಸೇಜ್ ಪಡೆಯಲು ಅವಕಾಶ ನೀಡಿದೆ. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ಹಾಕುವಂತೆ ಸೋಮವಾರ ಕೇಂದ್ರ ಸರ್ಕಾರ ಘೋಷಿಸಿತು.

ಇದು ವ್ಯಾಕ್ಸಿನೇಷನ್ ಅಭಿಯಾನವನ್ನು "ಉದಾರೀಕರಣಗೊಳಿಸಿತು" ಯಾಕೆಂದರೆ, ವ್ಯಾಕ್ಸಿನ್​ ತಯಾರಕರು ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯಸರ್ಕಾರಗಳಿಗೆ ಈಗ 50 ಪ್ರತಿಶತ ಪ್ರಮಾಣವನ್ನು ಪೂರೈಸಲು ಮುಕ್ತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.