ETV Bharat / bharat

ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ: ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹೇಳಿದ್ದು ಹೀಗೆ.. - ಈಟಿವಿ ಭಾರತ್ ಕನ್ನಡ ಸುದ್ದಿ

ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಉಭಯ ದೇಶಗಳಲ್ಲಿ ವ್ಯಾಪಾರ ಸಂಬಂಧವನ್ನು ದ್ವಿಗುಣಗೊಳಿಸಲಿದೆ ಎಂದು ಬ್ರಿಟನ್​ ಪ್ರಧಾನಿ ರಿಶಿ ಸುನಕ್ ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿ ರಿಶಿ ಸುನಕ್
ಬ್ರಿಟನ್ ಪ್ರಧಾನಿ ರಿಶಿ ಸುನಕ್
author img

By ETV Bharat Karnataka Team

Published : Sep 6, 2023, 8:22 PM IST

ನವದೆಹಲಿ : ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಅಂತಿಮ ನಿರ್ಧಾರಕ್ಕೆ ಇನ್ನೂ ಕೆಲವು ಮಾರ್ಗಗಳಿವೆ ಎಂದು ಬುಧವಾರ ಬ್ರಿಟನ್ ಪ್ರಧಾನಿ ರಿಶಿ ಸುನಕ್​​ ತಿಳಿಸಿದ್ದಾರೆ. ಆದರೆ ಅಂತಿಮ ಫಲಿತಾಂಶವು 'ಆಧುನಿಕ' ಹಾಗೂ 'ಎದುರು ನೋಡುವ' ಆತ್ಮವಿಶ್ವಾಸವಾಗಿ ಕಂಡುಬರುತ್ತಿದೆ. ಈ ಒಪ್ಪಂದದಿಂದ 2030ರ ವೇಳೆಗೆ ಎರಡು ಕಡೆಯವರಿಗೆ ವ್ಯಾಪಾರವನ್ನು ದ್ವಿಗುಣಗೊಳಿಸುವ ಪ್ರಯೋಜನದ ಗುರಿ ಸುಗಮಗೊಳಿಸುತ್ತದೆ ಎಂದು ತಿಳಿಸಿದರು.

ಪಿಟಿಐ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ವ್ಯಾಪಾರ ಒಪ್ಪಂದವು ಭಾರತದ 48 ಮಿಲಿಯನ್​ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳು ಸೇರಿದಂತೆ ಭಾರತದ ರಫ್ತುದಾರರಿಗೆ ಬ್ರಿಟಿಷ್​ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಈ ಆಧುನಿಕ ಹಾಗೂ ಎದುರು ನೋಡುವ ಮುಕ್ತ ವ್ಯಾಪಾರ ಒಪ್ಪಂದವು 2030ರ ವೇಳೆಗೆ ಇಂಗ್ಲೆಂಡ್​ ಹಾಗೂ ಭಾರತದ ವ್ಯಾಪಾರವನ್ನು ದ್ವಿಗುಣಗೊಳಿಸುವ ಮಾರ್ಗಕ್ಕೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ವ್ಯಾಪಾರ ಸಂಬಂಧವನ್ನು ವಿಸ್ತರಿಸುವಲ್ಲಿ ಈ ಒಪ್ಪಂದ ಸಹಕಾರಿಯಾಗಲಿದೆ. ಅಲ್ಲದೇ ಯರೋಪ್​ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದೊಂದಿಗೆ ಮಾತುಕತೆ ನಡೆಸಿದ ಮೊದಲ ದೇಶವಾಗಲಿದೆ ಎಂದು ತಿಳಿಸಿದರು. ಪಿಟಿಐ ಪ್ರಶ್ನೆಗಳಿಗೆ ಪ್ರಧಾನಿ ಇಮೇಲ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಉಭಯ ದೇಶಗಳು ಮುಕ್ತ ಮಾರುಕಟ್ಟೆ ವ್ಯಾಪಾರದ ಕುರಿತು ಒಪ್ಪಂದದ ಬಗ್ಗೆ ಮಾತುಕತೆ ನಡೆಸಿವೆ. ಇದು ಮುಂದೆ ಎರಡು ದೇಶಗಳ ನಡುವೆ ಮಾರುಕಟ್ಟೆಯನ್ನು ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ 48 ಮಿಲಿಯನ್​ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳು ಸೇರಿದಂತೆ ಭಾರತದ ರಫ್ತುದಾರರಿಗೆ ಬ್ರಿಟಿಷ್ ಮಾರುಕಟ್ಟೆಗೆ ಈ ಒಪ್ಪಂದವು ಪ್ರವೇಶವನ್ನು ಕಲ್ಪಿಸಲಿದೆ. ನಾವು ವ್ಯಾಪಾರದಲ್ಲಿ ಟಾರಿಫ್ ಹಾಗೂ ರೆಡ್​ ಟೇಪ್​ಗಳನ್ನು ಕಡಿತಗೊಳಿಸಲಿದ್ದೇವೆ. ಇದರಿಂದಾಗಿ ಈಗಾಗಲೇ ಯುಕೆ ಸರಕುಗಳನ್ನು ಪಡೆದುಕೊಂಡು ಸಂಭ್ರಮಿಸುತ್ತಿರುವ ಭಾರತೀಯ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಯುಕೆ ಮಾರುಕಟ್ಟೆಗೆ ಪ್ರವೇಶಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಅಲ್ಲದೇ ವ್ಯಾಪಾರದ ಬಗ್ಗೆ ಉತ್ತಮ ಮಾತುಕತೆ ನಡೆದಿದೆ. ಅಲ್ಲದೇ, ಒಪ್ಪಂದದ ಅಂತಿಮಕ್ಕೆ ಇನ್ನು ಕೆಲವೇ ಮಾರ್ಗಗಳಿವೆ ಎಂದು ತಿಳಿಸಿದ್ದಾರೆ.

12 ಸುತ್ತಿನ ಮಾತುಕತೆ ನಡೆದಿದೆ : ಈಗಾಗಲೇ ನಾವು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಧ್ಯಾಯಗಳನ್ನು ಮುಚ್ಚುವಲ್ಲಿ ಉತ್ತಮ ಪ್ರಗತಿಯನ್ನು ಕಂಡುಕೊಂಡಿದ್ದೇವೆ. ಕಳೆದ ತಿಂಗಳಿನಲ್ಲಿ ಈ ಬಗ್ಗೆ 12 ಸುತ್ತಿನ ಮಾತುಕತೆಗಳು ನಡೆದಿವೆ. ಅವು ಇನ್ನೂ ಕಠಿಣವಾಗಿವೆ. ಅವು ಸರಕು, ಸೇವೆ ಹಾಗೂ ಹೂಡಿಕೆ ಸೇರಿದಂತೆ ಸೂಕ್ಷ್ಮ, ಸಂಕೀರ್ಣ ಹಾಗೂ ಅರ್ಥಪೂರ್ಣ ವಾಣಿಜ್ಯಿಕ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ಸಂಬಂಧ ಹೆಚ್ಚಿಸಲಿದೆ: ಇದರೊಂದಿಗೆ ಭಾರತವು ಯುರೋಪ್ ದೇಶದೊಂದಿಗೆ ಒಪ್ಪಿಕೊಂಡಿರುವ ಮೊದಲ ಮುಕ್ತ ವ್ಯಾಪಾರ ಒಪ್ಪಂದವನ್ನು ನಾವು ಅಂತಿಮಗೊಳಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಇದಲ್ಲದೇ ಎರಡು ಉಭಯ ದೇಶಗಳಿಗೂ ಈ ಒಪ್ಪಂದವು ಪ್ರಯೋಜನವಾಗಲಿದೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದಿದ್ದಾರೆ. ಒಪ್ಪಂದವು ಎರಡು ದೇಶಗಳ ವ್ಯಾಪಾರ, ಹೊಸ ಉದ್ಯೋಗ, ಗ್ರಾಹಕರು ಹಾಗೂ ಎರಡು ದೇಶಗಳ ಜನರ ಸಂಬಂಧವನ್ನು ಉತ್ತಮಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬ್ರಿಟನ್​ ಪ್ರಧಾನಿ ರೇಸ್​​​​​​​​​​ನಲ್ಲಿ ಮತ್ತೆ ಮುಂಚೂಣಿಗೆ ಬಂದ ಸುನಕ್​​..100 ಸಂಸದರ ಬೆಂಬಲ ಪಡೆದು ಮುನ್ನಡೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.