ನವದೆಹಲಿ: ಇಂದಿನಿಂದ ಸಂಸತ್ ಕಲಾಪ ಆರಂಭವಾಗಿದ್ದು, ರಾಜ್ಯಸಭೆ ಸದಸ್ಯರಾಗಿರುವ ಪಿಟಿ ಉಷಾ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಡೆಗಣಿಸಲ್ಪಟ್ಟಿರುವ ಸಮುದಾಯಗಳ ಬಗ್ಗೆ ಕಾಳಜಿ ಹೊಂದಿರುವ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಬುಡಕಟ್ಟು ಸಮುದಾಯದವರು ದೇಶದ ರಾಷ್ಟ್ರಪತಿಯಾಗಿರುವುದಕ್ಕೆ ಇಡೀ ರಾಷ್ಟ್ರಕ್ಕೆ ಒಂದು ಕಳೆ ಬಂದಿದೆ. ಇದು ಬುಡಕಟ್ಟು ಸಮುದಾಯಕ್ಕೆ ನೀಡಿದ ದೊಡ್ಡ ಗೌರವ. ರೈತರೊಬ್ಬರ ಮಗ ಇದೀಗ ಉಪರಾಷ್ಟ್ರಪತಿ ಆಗಿದ್ದಾರೆ. ಇದು ದೇಶದ ಎಲ್ಲಾ ಸಮುದಾಯಗಳಿಗೆ ಸಿಗುತ್ತಿರುವ ಅವಕಾಶ ಮತ್ತು ಮಾನ್ಯತೆಯನ್ನು ತೋರಿಸುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯದ ಉತ್ಸಾಹ ಇದೀಗ ರಿಪಬ್ಲಿಕನ್ ಮನೋಭಾವ ವಸ್ತುನಿಷ್ಟ ಸ್ವರೂಪಕ್ಕೆ ತಿರುಗುತ್ತಿದೆ ಎಂದು ಅವರು ಪಿಟಿ ಉಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ 17 ದಿನ ಚಳಿಗಾಲದ ಅಧಿವೇಶನ.. ಹಳೆಯ ಸಂಸತ್ನಲ್ಲಿ ಕೊನೆಯ ಕಲಾಪ?