ETV Bharat / bharat

ಐಸಿಸ್‌ ಜೊತೆ ಹಿಂದುತ್ವದ ಹೋಲಿಕೆ: ಕಾಂಗ್ರೆಸ್ ನಾಯಕ ಖುರ್ಷಿದ್‌ ವಿರುದ್ಧ ಪೊಲೀಸರಿಗೆ ದೂರು - ಸಲ್ಮಾನ್‌ ಖುರ್ಷಿದ್‌ ವಿರುದ್ಧ ದೆಹಲಿ ಪೊಲೀಸರಿಗೆ ದೂರು

ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ ಅವರು ಬರೆದಿರುವ 'ಸನ್‌ರೈಸ್ ಓವರ್ ಅಯೋಧ್ಯೆ-ನೇಷನ್‌ಹುಡ್ ಇನ್ ಅವರ್ ಟೈಮ್ಸ್' ಪುಸ್ತಕದಲ್ಲಿ ಹಿಂದೂ ಧರ್ಮವನ್ನು ಐಸಿಸ್‌ ಭಯೋತ್ಪಾದನೆಗೆ ಹೋಲಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇಬ್ಬರು ವಕೀಲರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

Complaints filed against Salman Khurshid for allegedly defaming Hinduism in his book
ಪುಸ್ತಕದಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಆರೋಪ; ಕಾಂಗ್ರೆಸ್ ನಾಯಕ ಸಲ್ಮಾನ್‌ ಖುರ್ಷಿದ್‌ ವಿರುದ್ಧ ಪೊಲೀಸರಿಗೆ ದೂರು
author img

By

Published : Nov 11, 2021, 4:18 PM IST

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ಗೆ (Salman Khurshid) ಸಂಕಷ್ಟ ಎದುರಾಗಿದೆ.

ಖುರ್ಷಿದ್‌ ಅವರು ಬರೆದಿರುವ 'Sunrise over Ayodhya--Nationhood in our times' ಪುಸ್ತಕದಲ್ಲಿ ಹಿಂದೂ ಧರ್ಮವನ್ನು ಐಸಿಸ್‌ ಭಯೋತ್ಪಾದನೆಯೊಂದಿಗೆ ಹೋಲಿಸಿದ ಆರೋಪದಲ್ಲಿ ದೆಹಲಿಯ ಇಬ್ಬರು ವಕೀಲರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಲ್ಮಾನ್‌ ಖುರ್ಷಿದ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ವಕೀಲ ವಿವೇಕ್ ಗರ್ಗ್, ವಿನೀತ್ ಜಿಂದಾಲ್ ಎಂಬುವವರು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಅಯೋಧ್ಯೆ ತೀರ್ಪನ್ನು ಆಧರಿಸಿರುವ ಕಳೆದ ವಾರ ಬಿಡುಗಡೆಯಾದ ಹೊಸ ಪುಸ್ತಕದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಭಯೋತ್ಪಾದಕ ಗುಂಪುಗಳಿಗೆ ಹೋಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸನಾತನ ಧರ್ಮದ ಬಗ್ಗೆ ಋಷಿಗಳು ಹಾಗೂ ಸಂತರಿಗೆ ತಿಳಿದಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಪಕ್ಕಕ್ಕೆ ತಳ್ಳಿದೆ. ಎಲ್ಲಾ ಮಾನದಂಡಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಐಸಿಸ್ ಮತ್ತು ಬೊಕೊ ಹರಾಮ್‌ನಂತಹ ಗುಂಪುಗಳ ಜಿಹಾದಿಸ್ಟ್ ಇಸ್ಲಾಂನಂತೆಯೇ ಇದು ರಾಜಕೀಯ ಆವೃತ್ತಿಯಾಗಿದೆ ಅಂತ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಕಾಂಗ್ರೆಸ್‌ನ ನಿಜವಾದ ಮನಸ್ಥಿತಿ'

ಐಸಿಸ್‌ನ ಮೂಲಭೂತ ಅಂಶಗಳನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ನ ನಿಜವಾದ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಪುಸ್ತಕದಲ್ಲಿ ಮುದ್ರಿತವಾಗಿರುವ ಅವರ ಹೇಳಿಕೆಯು ಸ್ವಯಂ ವಿವರಣಾತ್ಮಕವಾಗಿದೆ. ಪುಸ್ತಕದ ಉದ್ದೇಶವು ದೇಶದ್ರೋಹ, ಭಾರತದ ವಿರುದ್ಧ ಯುದ್ಧ ನಡೆಸಲು ಪಿತೂರಿ, ಹಿಂದೂ-ಮುಸ್ಲಿಮರ ನಡುವೆ ದ್ವೇಷವನ್ನು ಉತ್ತೇಜಿಸುವುದು ಇತ್ಯಾದಿಗಳ ಮುಕ್ತ ಪ್ರಕರಣವಾಗಿದೆ ಎಂದು ಗರ್ಗ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಪುಸ್ತಕದಲ್ಲಿ ಪ್ರಕಟವಾದ ಹೇಳಿಕೆಯು ಹಿಂದೂ ಧರ್ಮದ ಅನುಯಾಯಿಗಳಲ್ಲಿ ಪ್ರಚೋದನೆ ಹಾಗೂ ಭಾವನೆಗಳನ್ನು ಕೆರಳಿಸುವಂತಿದೆ ಎಂದು ಮತ್ತೊಬ್ಬ ವಕೀಲ ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.