ಧನ್ಬಾದ್ (ಜಾರ್ಖಂಡ್): ಸ್ವಾತಂತ್ರ್ಯ ಮತ್ತು ಗಾಂಧೀಜಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೇಶದ್ರೋಹ ಪ್ರಕರಣ (Sedition case against bollywood actress Kangana Ranaut) ದಾಖಲಿಸುವಂತೆ ಕೋರಿ ಜಾರ್ಖಂಡ್ನ ಧನ್ಬಾದ್ ನ್ಯಾಯಾಲಯದಲ್ಲಿ (A court in Jharkhand's Dhanbad) ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಇಝರ್ ಅಹ್ಮದ್ ಅಲಿಯಾಸ್ ಬಿಹಾರಿ (Social activist Izar Ahmad alias Bihari) ಎಂಬವರು ಕಂಗನಾ ವಿರುದ್ಧ ಕೇಸ್ ದಾಖಲಿಸಲು ಆಗ್ರಹಿಸಿ ದೂರು ನೀಡಿದ್ದಾರೆ. ಭಾರತವನ್ನು ಅವಮಾನಿಸುವ, ನಮ್ಮ ದೇಶವನ್ನು ಕೀಳಾಗಿ ಕಾಣುವಂತಹ ನಟಿಯ ದೇಶವಿರೋಧಿ ಹೇಳಿಕೆಗಳು ನೋವುಂಟು ಮಾಡಿದೆ.
ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಮತ್ತು ಹೇಗೆ ಬಂತು ಎಂಬುದು ಎಲ್ಲರಿಗೂ ಗೊತ್ತು. ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅಹ್ಮದ್ ಅಲಿಯಾಸ್ ತಿಳಿಸಿದ್ದಾರೆ. ನವೆಂಬರ್ 20 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದರೆ..: ಮತ್ತೆ ವಿವಾದದಲ್ಲಿ ಕಂಗನಾ ರಣಾವತ್
"ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ. 1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಅದು ಭಿಕ್ಷೆ" (1947 was ‘bheek’ and India got real freedom in 2014) ಎಂದು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕಂಗನಾಗೆ ಕ್ಷಮೆ ಯಾಚಿಸುವಂತೆ, ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಂತೆ ದೇಶಾದ್ಯಂತ ಅನೇಕರು ಆಗ್ರಹಿಸಿದ್ದರು. ಈ ಹೇಳಿಕೆ ಹೊತ್ತಿಸಿದ ಕಿಡಿ ನಂದಿಹೋಗುವ ಮುನ್ನವೇ ನಟಿ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಂಗನಾ ಅವರ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಬರೆದ DCW ಅಧ್ಯಕ್ಷೆ
"ಯಾರಾದರೂ ಒಂದು ಕೆನ್ನೆಗೆ ಹೊಡೆದರೆ, ಮತ್ತೊಂದು ಕೆನ್ನೆ ಕೊಡಿ, ಸ್ವಾತಂತ್ರ್ಯ ಸಿಗುತ್ತದೆ ಎನ್ನಲಾಗುತ್ತಿತ್ತು. ಹಾಗೆ ಮಾಡಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಮಾತ್ರ. ನಿಮ್ಮ ವೀರರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಿ ಎಂದು ಕಂಗನಾ ಪರೋಕ್ಷವಾಗಿ ಮಹಾತ್ಮ ಗಾಂಧಿ ಅವರ ತತ್ತ್ವಗಳ ವಿರುದ್ಧ ಆಕ್ರೋಶ (Kangana targets Mahatma Gandhi) ವ್ಯಕ್ತಪಡಿಸಿದ್ದರು.