ನವದೆಹಲಿ : ಸರ್ಕಾರಿ ಹುದ್ದೆಯಲ್ಲಿದ್ದವರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ನೌಕರನ ಮೇಲೆ ಅವಲಂಬಿತರಾಗಿದ್ದ ಅವಿವಾಹಿತ ಅಥವಾ ಅವರ ಜೊತೆ ವಾಸವಾಗಿರುವ ವಿವಾಹಿತ ಮಗಳು ಮಾತ್ರ ಅವಲಂಬಿತ ಸರ್ಕಾರಿ ಹುದ್ದೆಗೆ ಅರ್ಹರು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿವಾಹಿತ ಮಗಳು, ವಿಧವೆ ಮಗಳು ಅಥವಾ ಅವಿವಾಹಿತ ಮಗಳು ಮಾತ್ರ ಇದಕ್ಕೆ ಅರ್ಹರಾಗಿದ್ದು, ಕರ್ನಾಟಕದ ಕಾನೂನಿನಡಿಯಲ್ಲಿ ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಗೆ ಅರ್ಹರು ಎಂದಿದೆ.
ಕರ್ನಾಟಕ ನಾಗರಿಕ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮ 1996ರ ಅಡಿ ಪರಿಶೀಲನೆ ನಡೆಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ವಿಚ್ಛೇದಿತ ಮಗಳು ಇದಕ್ಕೆ ಅರ್ಹ ಅಲ್ಲ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ಹಿಂದೆ ವಿಚ್ಛೇದಿತ ಮಗಳು ಕೂಡ ಇದಕ್ಕೆ ಅರ್ಹಳು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಇದನ್ನ ತಳ್ಳಿ ಹಾಕಿದೆ.
ಸರ್ಕಾರಿ ಉದ್ಯೋಗಿಗಳು ಮೃತಪಟ್ಟಾಗ ಮೃತ ಉದ್ಯೋಗಿಗಳ ಹತ್ತಿರದ ಸಂಬಂಧಿಗಳಿಗೆ ಉದ್ಯೋಗ ನೀಡುವುದು ಆಯಾ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಇದು ಕುಟುಂಬದ ಹಕ್ಕು ಆಗಿರುವುದಿಲ್ಲ ಎಂದು 2019ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.