ETV Bharat / bharat

ಗುಜರಾತ್​ನಲ್ಲಿ ದೀಪಾವಳಿಯಂದೇ ಗುಂಪುಘರ್ಷಣೆ: ಒಬ್ಬನ ಬಂಧನ.. ಉಳಿದವರಿಗಾಗಿ ಶೋಧ - ದೀಪಾವಳಿ ದಿನ ಎರಡು ಗುಂಪುಗಳ ನಡುವೆ ಸಂಘರ್ಷ

ನಗರದ ಪಾಣಿಗೇಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ. ವಡೋದರಾ ಉಪ ಪೊಲೀಸ್ ಆಯುಕ್ತ ಯಸ್ಪಾಲ್ ಜಗನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಹಿಂಸಾಚಾರಕ್ಕೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ.

Communal clashes erupt in Vadodara on Diwali night
ಗುಜರಾತ್​ನಲ್ಲಿ ದೀಪಾವಳಿಯಂದೇ ಗುಂಪುಘರ್ಷಣೆ: ಒಬ್ಬನ ಬಂಧನ.. ಉಳಿದವರಿಗಾಗಿ ಶೋಧ
author img

By

Published : Oct 25, 2022, 9:50 AM IST

ವಡೋದರಾ( ಗುಜರಾತ್): ವಡೋದರಾದಲ್ಲಿ ದೀಪಾವಳಿ ರಾತ್ರಿ ಕೋಮು ಘರ್ಷಣೆಗಳು ನಡೆದಿರುವ ವರದಿಯಾಗಿದೆ. ಮಂಗಳವಾರ ಬೆಳಗಿನ ಜಾವದವರೆಗೆ ಪೊಲೀಸರು ಕನಿಷ್ಠ ಹನ್ನೆರಡು ಗಲಭೆಕೋರರನ್ನು ತಡೆದು ವಿಚಾರಣೆ ನಡೆಸಿದ್ದು, ಗಲಭೆಕೋರರನ್ನು ಗುರುತಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಪಾಣಿಗೇಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ. ವಡೋದರಾ ಉಪ ಪೊಲೀಸ್ ಆಯುಕ್ತ ಯಸ್ಪಾಲ್ ಜಗನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಹಿಂಸಾಚಾರಕ್ಕೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. ದೀಪಾವಳಿ ದಿನ ಎರಡು ಗುಂಪುಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಗರದಾದ್ಯಂತ ಬಿಗಿ ಬಂದೋಬಸ್ತ್​ ಮಾಡಿ ಪರಿಸ್ಥಿತಿಯನ್ನು ತರಲಾಯಿತು ಎಂದು ಹೇಳಿದ್ದಾರೆ.

ಮನೆಯ ಟೆರೇಸ್‌ನಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಘರ್ಷಣೆ ಸಂಭವಿಸುವ ಮೊದಲು ಬೀದಿ ದೀಪಗಳನ್ನು ಬಂದ್​ ಮಾಡಲಾಗಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ, ಕರೆಂಟ್​ ತೆಗೆದ ಬಳಿಕವೇ ಎರಡು ಕಡೆಯಿಂದ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಅಂಶವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾಲೇಜು ಬಳಿ ಪಟಾಕಿ ಸಿಡಿಸುವ ವಿಚಾರವಾಗಿ ಘರ್ಷಣೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

  • Vadodara, Gujarat | An incident of stone pelting occurred near Muslim Medical center in Panigate last night. Police immediately reached the spot & took action; situation completely under control. CCTVs being checked & eyewitnesses' inquiry underway. Probe on: DCP Yashpal Jaganiya pic.twitter.com/fS6SjRIV87

    — ANI (@ANI) October 25, 2022 " class="align-text-top noRightClick twitterSection" data=" ">

ಇದನ್ನು ಓದಿ: ದೀಪಾವಳಿ ಹಬ್ಬದಲ್ಲಿ ದುರಂತ.. ಪಟಾಕಿ ಸಿಡಿಸುತ್ತಿದ್ದ 10 ಮಂದಿಗೆ ಗಾಯ, ಕಣ್ಣು ಕಳೆದುಕೊಂಡ ಬಾಲಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.