ETV Bharat / bharat

ಸಾಮಾನ್ಯ ಶೀತಕ್ಕೂ ಒಮಿಕ್ರಾನ್​ಗೂ ಇರುವ ವ್ಯತ್ಯಾಸ ಗೊತ್ತೇ? - ಕೋವಿಡ್​​ ರೋಗ ಲಕ್ಷಣಗಳು

ಹವಾಮಾನದಲ್ಲಿ ಬದಲಾವಣೆಯಿಂದಾಗಿ ಹೆಚ್ಚಿನ ಜನರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ಆದರೆ ಸಾಮಾನ್ಯ ನೆಗಡಿ ಮತ್ತು ಕೆಮ್ಮಿಗೂ ಮತ್ತು ಕೊರೊನಾ ವೈರಸ್​ ರೂಪಾಂತರಿ ಒಮಿಕ್ರಾನ್​​​ ನಡುವೆ ಇರುವ ವ್ಯತ್ಯಾಸವನ್ನು ಜನರು ಅರ್ಥಮಾಡಿಕೊಳ್ಳಬೇಕು.

Common Cold Or Omicron
ಸಾಮಾನ್ಯ ಶೀತಕ್ಕೂ ಒಮಿಕ್ರಾನ್​ಗೂ ಇರುವ ವ್ಯತ್ಯಾಸ
author img

By

Published : Jan 6, 2022, 8:01 PM IST

ಶೀತ, ಕೆಮ್ಮು, ಗಂಟಲು ನೋವು, ತಲೆನೋವು, ಜ್ವರ - ಇವು ಕೋವಿಡ್​​ ರೋಗಲಕ್ಷಣಗಳೂ ಕೂಡ ಆಗಿರುವುದರಿಂದ ನಮ್ಮಲ್ಲಿ ಇವು ಉಂಟಾದರೆ ನಾವು ಸಂದಿಗ್ಧ ಸ್ಥಿತಿಗೆ ಸಿಲುಕಿ ಬಿಡುತ್ತೇವೆ. ಕೊರೊನಾ ಸೋಂಕು ತಗುಲಿದೆಯೇನೋ ಎಂದು ಗಾಬರಿ ಪಡುತ್ತೇವೆ. ಇನ್ನು ಈಗಂತೂ ಒಮಿಕ್ರಾನ್ ರೂಪಾಂತರಿಯಿಂದಾಗಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿದ್ದು, ಸ್ವಲ್ಪ ನೆಗಡಿ-ಕೆಮ್ಮು ಶುರುವಾದರೂ ಆತಂಕಕ್ಕೆ ಒಳಗಾಗುತ್ತೇವೆ. ಆದರೆ ಬದಲಾಗುತ್ತಿರುವ ಹವಾಮಾನದ ನಡುವೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ಭಾರತದಲ್ಲಿ ಸದ್ಯ ಚಳಿಗಾಲವಿರುವುದರಿಂದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ಆದರೆ ಸಾಮಾನ್ಯ ನೆಗಡಿ ಮತ್ತು ಕೆಮ್ಮಿಗೂ ಮತ್ತು ಕೊರೊನಾ ವೈರಸ್​ ರೂಪಾಂತರಿ ಒಮಿಕ್ರಾನ್​​​ ನಡುವೆ ಇರುವ ವ್ಯತ್ಯಾಸವನ್ನು ಜನರು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಪಡೆಯಬೇಕು.

ಒಮಿಕ್ರಾನ್ ರೋಗಲಕ್ಷಣಗಳು

ಸಾಮಾನ್ಯವಾಗಿ ಶೀತ, ಕೆಮ್ಮು, ಗಂಟಲು ನೋವು, ತಲೆನೋವು, ವಾಸನೆಯ ನಷ್ಟ, ಆಯಾಸ, ಉಸಿರಾಟದ ತೊಂದರೆ, ಸೀನುವಿಕೆ, ಮೈ ಕೈ ನೋವು ಮತ್ತು ಅಧಿಕ ಜ್ವರ- ಇವು ಕೊರೊನಾ ರೋಗಲಕ್ಷಣಗಳಾಗಿವೆ. ಸ್ರವಿಸುವ ಅಥವಾ ಕಟ್ಟಿದ ಮೂಗು, ನಿರಂತರ ಕೆಮ್ಮು, ಆಯಾಸ ಇವು ಒಮಿಕ್ರಾನ್​ ಲಕ್ಷಣಗಳಾಗಿವೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಪಟ್ಟಿ ಮಾಡಿದೆ. ಇನ್ನು ಜೊಯ್ ಹೆಸರಿನ ಅಪ್ಲಿಕೇಶನ್ ಒಂದು ಒಮಿಕ್ರಾನ್​ ಸೋಂಕಿತ ಕೆಲವರಿಗೆ ಇದರ ಜೊತೆ ವಾಕರಿಕೆ ಮತ್ತು ಹಸಿವಿನ ಕೊರತೆ ಕೂಡ ಉಂಟಾಗಬಹುದು ಎಂದು ಪತ್ತೆ ಮಾಡಿದೆ. ಇವನ್ನು ಹೊರತಾಗಿ ಕೆಲವರಲ್ಲಿ ಗಂಟಲು ಮತ್ತು ದೇಹದ ನೋವು, ರಾತ್ರಿ ಬೆವರುವಿಕೆ ಮತ್ತು ಸೀನುವಿಕೆ ಕೂಡ ವರದಿಯಾಗಿದೆ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಈ ಲಕ್ಷಣಗಳು ತೀವ್ರವಾಗಿದ್ದಲ್ಲಿ ಮಾತ್ರ ನೀವು ಒಮಿಕ್ರಾನ್​​ಗೆ ಒಳಗಾಗಿರುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಸೌಮ್ಯವಾಗಿದ್ದರೆ ಅಲ್ಲ.

ಇದನ್ನೂ ಓದಿ: ಒಮಿಕ್ರಾನ್ ವಿರುದ್ಧ​ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್​ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ: ಅಧ್ಯಯನ

ಆದರೂ ಗೊಂದಲವೇ?

ಆದರೆ ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿರಬಹುದು. ಏಕೆಂದರೆ ಸಂಪೂರ್ಣವಾಗಿ ಲಸಿಕೆ ಪಡೆದವರಲ್ಲಿ ಒಮಿಕ್ರಾನ್ ಲಕ್ಷಣಗಳು ಸೌಮ್ಯವಾಗಿರುತ್ತದೆ, ತೀವ್ರವಾದ ಸೋಂಕನ್ನು ಉಂಟುಮಾಡುವುದಿಲ್ಲ ಎಂದು ವರದಿಗಳು ತೋರಿಸಿವೆ. ಆದರೆ ಇತ್ತೀಚಿನ ಹೇಳಿಕೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಮಾರಿಯಾ ವ್ಯಾನ್ ಕೆರ್ಕೋವ್ ಅವರು, ಒಮಿಕ್ರಾನ್​ ಸಾಮಾನ್ಯ ಶೀತವಲ್ಲ. ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್​ನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಿರಬಹುದು. ಆದರೆ, ಒಮಿಕ್ರಾನ್​​ನಿಂದಲೂ ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೀಗಾಗಿ ನೀವು ಗೊಂದಲಕ್ಕೊಳಗಾಗಿ ಗಾಬರಿಪಡುವ ಬದಲು ಸರಿಯಾದ ಚಿಕಿತ್ಸೆ ಪಡೆಯಲು ಕೋವಿಡ್​ ಟೆಸ್ಟ್​ ಮಾಡಿಸಿಕೊಳ್ಳುವುದು ಉತ್ತಮ. ಮನೆಯಲ್ಲಿಯೇ ಚೇತರಿಸಿಕೊಳ್ಳಲು ಹೆಚ್ಚು ನೀರು ಸೇವಿಸುವುದು ಹಾಗೂ ಬೆಡ್ ರೆಸ್ಟ್ ಅಗತ್ಯ ಎಂದು ಆಸ್ಟ್ರೇಲಿಯನ್ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಶೀತ, ಕೆಮ್ಮು, ನೆಗಡಿಗೆ ಇಲ್ಲಿದೆ ಮನೆಮದ್ದು

ಸೌಮ್ಯವಾದ ಸೋಂಕು ಎಂದು ಕರೆಯಲಾಗಿದ್ದರೂ, ಕೆಲವು ದೇಶಗಳಲ್ಲಿ ಒಮಿಕ್ರಾನ್‌ನಿಂದ ಸಾವುಗಳು ವರದಿಯಾಗಿರುವುದರಿಂದ ಜನರು ಜಾಗರೂಕರಾಗಿರಬೇಕು. ಪ್ರಕರಣಗಳ ಸಂಖ್ಯೆಯಲ್ಲಿ ತ್ವರಿತ ಏರಿಕೆ ಕಂಡುಬರುವುದರಿಂದ ಜನರು ಮನೆಯಲ್ಲೇ ಇರಲು ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಆರೋಗ್ಯ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.