ETV Bharat / bharat

ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಡ್ರೋನ್​ ಪ್ರದರ್ಶನ

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಣಾರ್ಥ; ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಡ್ರೋನ್​ ಪ್ರದರ್ಶನ
commemoration-of-martyred-freedom-fighters-biggest-drone-show-in-uttar-pradesh
author img

By

Published : Dec 19, 2022, 9:09 PM IST

ಗೋರಖ್​ಪುರ(ಉತ್ತರ ಪ್ರದೇಶ): ಕಾಕೋರಿ ರೈಲು ದರೋಡೆಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ರಾಮಗಢಲ್ ಬಳಿಯ ಮಹಂತ್ ದಿಗ್ವಿಜಯನಾಥ್ ಸ್ಮೃತಿ ಪಾರ್ಕ್‌ನಲ್ಲಿ ಇಂದು ಸಂಜೆ ಬೃಹತ್ ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಭಾಗಿಯಾಗಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಡ್ರೋನ್​ ಪ್ರದರ್ಶನ

ಕಾರ್ಯಕ್ರಮದಲ್ಲಿ ಸ್ವದೇಶಿ ತಂತ್ರಜ್ಞಾನದ ಮೂಲಕ ತಯಾರಿಸಲಾದ ಸುಮಾರು 750 ಡ್ರೋನ್‌ಗಳ ಪ್ರದರ್ಶನ ಇರಲಿದೆ. ಈ ವೇಳೆ ದೇಶಭಕ್ತಿ ಗೀತೆಯನ್ನು ಮೊಳಗಿಸುವ ಮೂಲಕ ಪ್ರೇಕ್ಷಕರ ಸೆಳೆಯಲಾಗುವುದು. ಡಿಸೆಂಬರ್​ 15ರಿಂದ 19ರವರೆಗೆ ರಾಜ್ಯ ಸರ್ಕಾರ ಸ್ವಾತಂತ್ರ್ಯ ಚಳವಳಿಯ ಹೋರೋಗಳ ಗೌರವ ಸಲ್ಲಿಕೆ ಮಾಡುತ್ತಿದೆ.

ಈ ಡ್ರೋನ್​ ಶೋನಲ್ಲಿ 1857ರ ಮೊದಲ ಸ್ವಾತಂತ್ರ್ಯ ಮಹಾಸಂಗ್ರಾಮದಿಂದ 1947ರವರೆಗಿನ ಭಾರತದ ಸ್ವಾತಂತ್ರ್ಯದ ಕುರಿತು ಹಲವು ಕ್ರಾಂತಿಕಾರಿಕ ಕಾರ್ಯಕ್ರಮಗಳು ನಡೆಯಲಿವೆ. 2021ರ ಡಿಸೆಂಬರ್​​ ನಲ್ಲಿ ಭಾರತೀಯ ವೀರ ಯೋಧರ ಬಲಿದಾನವನ್ನು ತಿಳಿಸಲು ಲಕ್ನೋದ ರೆಸಿಡೆನ್ಸಿಯಲ್ಲಿ 500 ಡ್ರೋನ್‌ಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಪಠಾಣ್​ ಪೋಸ್ಟರ್​ನಲ್ಲಿ ಯೋಗಿ ಆದಿತ್ಯನಾಥ್​ ಫೋಟೋ ಮಾರ್ಫ್​: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.