ETV Bharat / bharat

14ರ ಬಾಲಕಿಯ ಮೇರು ಸಾಧನೆ.. ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಬಾಲಕಿಗೆ ಗೌರವ ಡಾಕ್ಟರೇಟ್​! - Junior Yoga Teacher Award

ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಕೊಲಂಬಿಯಾ ಮತ್ತು ಘಾನಾದಿಂದ ನಾಸಿಕ್​ನ ಬಾಲಕಿ ಗೀತ್ ಪರಾಗ್ ಪಟ್ನಿ (14) ಅವರಿಗೆ ಗೌರವ ಡಾಕ್ಟರೇಟ್​ ಪದವಿ ನೀಡಲಾಗಿದೆ.

ನಾಸಿಕ್‌ನ 14 ವರ್ಷದ ಬಾಲಕಿ
ನಾಸಿಕ್‌ನ 14 ವರ್ಷದ ಬಾಲಕಿ
author img

By

Published : Oct 12, 2022, 9:08 PM IST

ಅಮೆರಿಕ (ಕೊಲಂಬಿಯಾ): ನಾಸಿಕ್​ನ ಬಾಲಕಿ ಗೀತ್ ಪರಾಗ್ ಪಟ್ನಿ (14) ಅವರು ಕಿರಿಯ ಯೋಗ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಕೊಲಂಬಿಯಾ ಮತ್ತು ಘಾನಾದಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.

ಗೀತ್ ಯೋಗ ಫಿಟ್‌ನೆಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷೆ ಕಾಜಲ್ ಪಟ್ನಿ ಮತ್ತು ಡಾ ಪರಾಗ್ ಪಟ್ನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೀತ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎರಡು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದ ದೇಶದ ಮೊದಲ ಬಾಲಕಿಯಾಗಿದ್ದಾರೆ.

ಮಹಾಮಾರಿಯಿಂದ ಎಲ್ಲ ಕ್ಷೇತ್ರಗಳು ತತ್ತರಿಸಿರುವುದು ಕಂಡುಬಂತು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೊರೊನಾ ಭೀಕರ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಈ ಸಮಯದಲ್ಲಿ ಅನೇಕ ಜನರು ಉತ್ತಮ ಅಭ್ಯಾಸಗಳನ್ನು ಪಡೆದಿದ್ದಾರೆ. ಅದರಲ್ಲಿ ಕೆಲವರು ಕೆಟ್ಟ ಅಭ್ಯಾಸಗಳನ್ನು ಸಹ ಹೊಂದಿದ್ದಾರೆ.

ವಿಶೇಷವಾಗಿ ಮಕ್ಕಳು ಹೊರಾಂಗಣ ಕ್ರೀಡೆಗಳ ಮೇಲೆ ತಮ್ಮ ಗಮನವನ್ನು ಕಳೆದುಕೊಂಡಿದ್ದು, ಅನಗತ್ಯ ಗ್ಯಾಜೆಟ್‌ಗಳಿಗೆ ವ್ಯಸನಿಯಾಗುತ್ತಿದ್ದಾರೆ. ಇದನ್ನು ಪರಿಗಣಿಸಿ ಗೀತ್ ಅವರು 'ಕೊರೊನಾ ಅವಧಿಯಲ್ಲಿ ಮಕ್ಕಳು ಮೊಬೈಲ್ ಮತ್ತು ಇತರ ಗ್ಯಾಜೆಟ್‌ಗಳ ಬಳಕೆ ಮತ್ತು ಅವರ ಮನಸ್ಥಿತಿಯ ಮೇಲೆ ಅದರ ಪರಿಣಾಮ ಮತ್ತು ಯೋಗಾಭ್ಯಾಸದ ಮೂಲಕ ಪರಿಹಾರ' ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು.

ಅವರು ಈ ಪ್ರಬಂಧವನ್ನು ಪ್ರಪಂಚದಾದ್ಯಂತದ ಏಳು ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಪ್ರಸ್ತುತಪಡಿಸಿದ್ದಾರೆ. ಅವುಗಳಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಾದ ಕೊಲಂಬಿಯಾ ಮತ್ತು ಘಾನಾ ಆ ಪ್ರಬಂಧವನ್ನು ಒಪ್ಪಿಕೊಂಡಿದ್ದು, ಅದಕ್ಕಾಗಿ ಗೀತ್ ಅವರಿಗೆ ‘ಡಾಕ್ಟರೇಟ್’ ಗೌರವ ಪದವಿ ನೀಡಲಾಗಿದೆ. ಈ ಕುರಿತು ಇತ್ತೀಚೆಗೆ ಪ್ರಮಾಣ ಪತ್ರ ನೀಡಲಾಗಿದೆ.

14 ನೇ ವಯಸ್ಸಿನಲ್ಲಿ ಎರಡು ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪಡೆದ ದೇಶದ ಮೊದಲ ಬಾಲಕಿ ಗೀತ್ ಅವರಾಗಿದ್ದಾರೆ.

ಓದಿ: ಭಾರತದ ಆರ್ಥಿಕತೆ ವೇಗ ಬಜೆಟ್​ನಲ್ಲಿ ಉಳಿಯಲಿದೆ: ನಿರ್ಮಲಾ ಸೀತಾರಾಮನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.