ಚಂಡೀಗಢ :1971ರ ಇಂಡೋ-ಪಾಕ್ ಯುದ್ಧದಲ್ಲಿ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದ ನಿವೃತ್ತ ಕರ್ನಲ್ ಪಂಜಾಬ್ ಸಿಂಗ್ ಕೋವಿಡ್ ಸಂಬಂಧಿತ ರೋಗಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ.
ಕರ್ನಲ್ ಪಂಜಾಬ್ ಸಿಂಗ್ಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ನಂತರ ಅವರು ಚಂಡಿ ಮಂದ್ರಾ ಸಿಂಗ್ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದರು.
ಆದರೆ, ಕೆಲವು ದಿನಗಳ ಬಳಿಕ ಕೋವಿಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರ ಹಿರಿಯ ಮಗ ಸಹ ಕೋವಿಡ್ನಿಂದ ಇತ್ತೀಚಿಗಷ್ಟೇ ಸಾವನ್ನಪ್ಪಿದ್ದರು.
ಪಂಜಾಬ್ ಸಿಂಗ್ ಅವರ ಮೃತದೇಹವನ್ನು ಸೆಕ್ಟರ್ 25ರ ಶಮ್‌ಶನ್‌ಘಾಟ್‌ನಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ, ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ, ಸ್ಟೇಷನ್ ಕಮಾಂಡರ್ ಕರ್ನಲ್ ಪುಷ್ಪಿಂದರ್ ಸಿಂಗ್ ಮತ್ತು ಇತರ ಅನೇಕ ಸೇನಾಧಿಕಾರಿಗಳು ಮತ್ತು ಮಾಜಿ ಸೇನಾಧಿಕಾರಿಗಳು ಉಪಸ್ಥಿತರಿದ್ದರು.