ಚಿತ್ತೋರ್‌ಗಢ (ರಾಜಸ್ಥಾನ): ಕ್ರೂಸರ್ ಹಿಂದಿಕ್ಕುವ ಭರದಲ್ಲಿ ಟ್ರಕ್, ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಸಮೀಪದ ಉದಯ್‌ಪುರ್-ನಿಂಬಹೆರಾ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಕೂಡಲೇ ಗಾಯಾಗಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೂಸರ್‌ನ ಅರ್ಧದಷ್ಟು ಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಜೆಸಿಬಿಯ ಸಹಾಯದಿಂದ ಹೊರ ತೆಗೆಯಲಾಗಿದೆ. ಮಂಗಲ್‌ವಾಡ್‌ನಿಂದ ನಿಂಬಾಹೇರಾಕ್ಕೆ ಹೋಗುತ್ತಿದ್ದ ಟ್ರಕ್ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನಿಕುಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.