ನವದೆಹಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಶುಕ್ರವಾರ ಸಂಕುಚಿತ ನೈಸರ್ಗಿಕ ಅನಿಲದ (CNG) ಬೆಲೆಯನ್ನು ಪ್ರತಿ ಕೆಜಿಗೆ 3 ರೂ. ಹೆಚ್ಚಿಸಿದೆ. ಇದರೊಂದಿಗೆ ಇಂದಿನಿಂದ ಜಾರಿಗೆ ಬರುವಂತೆ ಸಿಎನ್‌ಜಿ ದರ ಪ್ರತಿ ಕೆಜಿಗೆ 78.61 ರೂ. ಆಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 81.17 ರೂ. ಮತ್ತು ಗುರುಗ್ರಾಮದಲ್ಲಿ ಪ್ರತಿ ಕೆಜಿಗೆ 86.94 ರೂ. ಆಗಲಿದೆ.
ಏತನ್ಮಧ್ಯೆ, ಉತ್ತರ ಪ್ರದೇಶದ ಮುಜಾಫರ್‌ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಇದು ಪ್ರತಿ ಕೆಜಿಗೆ 85.84 ರೂ. ಮತ್ತು ಅಜ್ಮೀರ್, ಪಾಲಿ ಮತ್ತು ರಾಜಸ್ಥಾನದ ರಾಜಸಮಂದ್‌ನಲ್ಲಿ ಪ್ರತಿ ಕೆಜಿಗೆ 88.88 ರೂ. ಆಗಲಿದೆ. ಅದೇ ರೀತಿ ಯುಪಿಯ ಕಾನ್ಪುರ, ಹಮೀರ್‌ಪುರ ಮತ್ತು ಫತೇಪುರ್‌ನಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 90.40 ರೂ. ಆಗಿದೆ.
ಕಳೆದ ವರ್ಷ ಅಕ್ಟೋಬರ್‌ನಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಲ ದರ ಏರಲು ಪ್ರಾರಂಭಿಸಿದ ನಂತರ ಗ್ಯಾಸ್ ವಿತರಕ ಕಂಪನಿಗಳು ನಿಯತಕಾಲಿಕವಾಗಿ ಬೆಲೆಗಳನ್ನು ಹೆಚ್ಚಿಸುತ್ತಿವೆ.
ಇದನ್ನೂ ಓದಿ: ಭವಿಷ್ಯದಲ್ಲಿ ಅತ್ಯಮೂಲ್ಯವಾದ ಇಂಧನ ಹೈಡ್ರೋಜನ್: ಇಂಧನ ಸಚಿವ