ETV Bharat / bharat

'ಯೋಗಿ ಸರ್ಕಾರ್ 2.0' ಕ್ಯಾಬಿನೆಟ್​​ನಲ್ಲಿ 50 ಸಚಿವರು, ಮೂವರು ಉಪ ಮುಖ್ಯಮಂತ್ರಿಗಳು? - ಯೋಗಿ ಕ್ಯಾಬಿನೆಟ್​​ 2

ಯೋಗಿ ಆದಿತ್ಯನಾಥ್​ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಹೊಸ ಕ್ಯಾಬಿನೆಟ್ ರಚನೆಗೆ ಕಸರತ್ತು ಆರಂಭವಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮೂವರು ಡಿಸಿಎಂ, 50 ಸಚಿವರನ್ನೊಳಗೊಂಡ 'ಜಂಬೋ ಕ್ಯಾಬಿನೆಟ್​​' ಅಸ್ತಿತ್ವಕ್ಕೆ ಬರಲಿದೆ ಎಂಬ ಮಾತು ಕೇಳಿ ಬಂದಿದೆ.

Yogi 2.0 cabinet
Yogi 2.0 cabinet
author img

By

Published : Mar 14, 2022, 9:29 PM IST

ಲಖನೌ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಎರಡನೇ ಅವಧಿಯ ಸಚಿವ ಸಂಪುಟ ರಚನೆಗೆ ದಿನಗಣನೇ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ನೂತನ ಕ್ಯಾಬಿನೆಟ್​​​ನಲ್ಲಿ 50 ಸಚಿವರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ.

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಯನ್ನ ಮತ್ತೊಂದು ಅವಧಿಗೆ ಅಧಿಕಾರಕ್ಕೆ ತರಲು ಯಶಸ್ವಿಯಾಗಿರುವ ಯೋಗಿ ಆದಿತ್ಯನಾಥ್ ಸದ್ಯ ದೆಹಲಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖರನ್ನ ಭೇಟಿ ಮಾಡಿ, ಸಚಿವ ಸಂಪುಟ ರಚನೆ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.

ಮೂವರು ಡಿಸಿಎಂಗಳಿಗೆ ಮಣೆ?: ಯೋಗಿ ಆದಿತ್ಯನಾಥ್​​ 2.0 ಕ್ಯಾಬಿನೆಟ್​​ನಲ್ಲಿ ಮೂವರು ಉಪಮುಖ್ಯಮಂತ್ರಿಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, 50 ಶಾಸಕರಿಗೆ ಸಚಿವಗಿರಿ ನೀಡಲು ಮುಂದಾಗಿದ್ದಾಗಿ ತಿಳಿದು ಬಂದಿದೆ. ಈಗಾಗಲೇ ಬೇಬಿ ರಾಣಿ ಮೌರ್ಯಗೆ ಸಚಿವ ಸ್ಥಾನ ನೀಡುವುದು ಕೂಡ ಅಂತಿಮವಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿರಿ: ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಬಿಜೆಪಿ.. ಹೋಳಿ ನಂತರ ಉಚಿತ ಸಿಲಿಂಡರ್?​

2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೂರು ಸಮುದಾಯದ ಪ್ರಮುಖರಿಗೆ ಡಿಸಿಎಂ ಹುದ್ದೆ ನೀಡಲು ನಿರ್ಧರಿಸಲಾಗಿದ್ದು, ಯೋಗಿ ಜೊತೆಗೆ 50 ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಇವರಿಗೆಲ್ಲ ಸಚಿವಗಿರಿ?: ಲಭ್ಯವಾಗಿರುವ ಮಾಹಿತಿ ಪ್ರಕಾರ ಸುರೇಶ್ ಖನ್ನಾ, ಸತೀಶ್ ಮಹಾನಾ, ಬ್ರಜೇಶ್ ಪಾಠಕ್, ದಯಾಶಂಕರ್ ಸಿಂಗ್, ಜಿತಿನ್ ಪ್ರಸಾದ್, ಕುನ್ವರ್ ಕುಶ್ವಾಹ, ಸ್ವತಂತ್ರ ದೇವ್ ಸಿಂಗ್, ಸಿದ್ಧಾರ್ಥ್ ನಾಥ್ ಸಿಂಗ್, ನಂದಿ ಗುಪ್ತಾ, ಸೂರ್ಯ ಪ್ರತಾಪ್ ಶಾಹಿ, ಪಂಕಜ್ ಸಿಂಗ್, ರಾಜೇಶ್ವರ್ ಸಿಂಗ್, ರಾಂಪಾಲ್ ವರ್ಮಾ, ಅದಿತಿ ಸಿಂಗ್, ಅಪರ್ಣಾ ಬಿಷ್ತ್ ಯಾದವ್, ಶ್ರೀಕಾಂತ್ ಶರ್ಮಾ, ಅಶುತೋಷ್ ಟಂಡನ್, ಮೊಹ್ಸಿನ್ ರಜಾ, ಅನಿಲ್ ರಾಜ್‌ಭರ್, ಅಸಿಮ್ ಅರುಣ್ ಅವರು ಅಪ್ನಾ ದಳದ ಇಬ್ಬರು ನಾಯಕರು ಸಂಪುಟದಲ್ಲಿ ಇರಲಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.