ETV Bharat / bharat

ರಾತ್ರೋರಾತ್ರಿ ಪದತ್ಯಾಗ ಮಾಡಿದ ಮಹಾ ಸಿಎಂ: ರಾಜೀನಾಮೆ​​ ಅಂಗೀಕರಿಸಿದ ರಾಜ್ಯಪಾಲರು.. ವಿಶೇಷ ಅಧಿವೇಶನ ರದ್ದು - ಉದ್ದವ್​ ರಾಜೀನಾಮೆ​​ ಅಂಗೀಕರಿಸಿದ ರಾಜ್ಯಪಾಲರು

ಅದಾರ ಮರು ಗಳಿಗೆಯಲ್ಲಿ ತಾವೇ ಕಾರು ಚಾಲನೆ ಮಾಡಿಕೊಂಡು ರಾಜಭವನಕ್ಕೆ ಬಂದ ಸಿಎಂ ಉದ್ದವ್​ ಠಾಕ್ರೆ ರಾಜ್ಯಪಾಲ ಭಗತ್​ಸಿಗ್ ಕೋಶಿಯಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಅವರ ಪತ್ನಿ ರಶ್ಮಿ ಮತ್ತು ಮಾಜಿ ಸಚಿವರು ಹಾಜರಿದ್ದರು.

CM Thackeray submits resignation to Governor

author img

By

Published : Jun 30, 2022, 6:30 AM IST

Updated : Jun 30, 2022, 9:05 AM IST

ಮುಂಬೈ: ಸಂಜೆ ಐದು ಗಂಟೆಯಿಂದಲೇ ಸುಪ್ರೀಂಕೋರ್ಟ್​ನಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರು ನೀಡಿದ್ದ ಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಸತತ ನಾಲ್ಕುಗಂಟೆಗಳ ಕಾಲ ನಡೆದ ವಾದ- ಪ್ರತಿವಾದದ ಬಳಿಕ ಸುಪ್ರೀಂಕೋರ್ಟ್​ ರಾತ್ರಿ 9.15 ರ ಸುಮಾರಿಗೆ ತನ್ನ ತೀರ್ಪು ನೀಡಿತು.

CM Thackeray submits resignation to Governor
CM Thackeray submits resignation to Governor

ರಾಜ್ಯಪಾಲರ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್​, ಶಿವಸೇನಾ ಉದ್ದವ್ ಬಣ ಸಲ್ಲಿಸಿದ ಅರ್ಜಿಯನ್ನ ವಜಾ ಮಾಡಿ, ಇಂದು 11 ಗಂಟೆಗೆ ನಿಗದಿಯಂತೆ ಸಿಎಂ ಉದ್ದವ್ ಠಾಕ್ರೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿತು. ಈ ತೀರ್ಪು ಹೊರ ಬೀಳುತ್ತಿದ್ದಂತೆ ಸಿಎಂ ಉದ್ದವ್​ ಠಾಕ್ರೆ ರಾತ್ರಿ 9:30ಕ್ಕೆ ಫೇಸ್​ಬುಕ್​ ಲೈವ್​ಗೆ ಬಂದರು. ಸರ್ಕಾರ ರಚನೆ ಉದ್ದೇಶ, ಅನುಭವಿಸಿದ ಸವಾಲುಗಳು, ಪಕ್ಷದವರಿಂದಲೇ ಆದ ವಿಶ್ವಾಸಘಾತುಕ ತನದ ಬಗ್ಗೆ ಹೇಳಿಕೊಂಡರು. ಅಲ್ಲೇ ಸಿಎಂ ಸ್ಥಾನದ ಪದತ್ಯಾಗ ಘೋಷಿಸಿದರು. ಅದೇ ಗಳಿಗೆಯಲ್ಲಿ ಅವರ ವಿಧಾನ ಪರಿಷತ್​ ಸ್ಥಾನಕ್ಕೂ ರಾಜೀನಾಮೆ ಘೋಷಣೆ ಮಾಡಿದರು.

ಉದ್ದವ್​ ರಾಜೀನಾಮೆ​​ ಅಂಗೀಕರಿಸಿದ ರಾಜ್ಯಪಾಲರು

ಅದಾರ ಮರು ಗಳಿಗೆಯಲ್ಲಿ ತಾವೇ ಕಾರು ಚಾಲನೆ ಮಾಡಿಕೊಂಡು ರಾಜಭವನಕ್ಕೆ ಬಂದ ಸಿಎಂ ಉದ್ದವ್​ ಠಾಕ್ರೆ ರಾಜ್ಯಪಾಲ ಭಗತ್​ಸಿಗ್ ಕೋಶಿಯಾರಿಗೆ ತಮ್ಮ ರಾಜೀನಾಮೆಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಅವರ ಪತ್ನಿ ರಶ್ಮಿ ಮತ್ತು ಮಾಜಿ ಸಚಿವರು ಹಾಜರಿದ್ದರು.

ಮಧ್ಯೆ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು. ಮುಂದಿನ ವ್ಯವಸ್ಥೆ ಆಗುವವರೆಗೂ ಉಸ್ತುವಾರಿ ನೋಡಿಕೊಳ್ಳುವಂತೆಯೂ ಸೂಚಿಸಿದರು. ಇನ್ನು ಉದ್ದವ್​ ಠಾಕ್ರೆ ಶಿವಸೇನೆ ಶಾಸಕರು ಬಂಡಾಯ ಎದ್ದು ಗುವಾಹಟಿ ಸೇರಿಕೊಂಡಗಲೇ ಸಿಎಂ ಅಧಿಕೃತ ನಿವಾಸ ವರ್ಷಾ ಖಾಲಿ ಮಾಡಿ ಮಾತೋಶ್ರೀ ಗೆ ತೆರಳಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ

  • Maharashtra Assembly Secretary Rajendra Bhagwat informs all state MLAs that as per Governor's orders, there's no need for a floor test now, so today's special session will not be convened

    Uddhav Thackeray announced his resignation as Maharashtra CM & from his MLC post, yesterday

    — ANI (@ANI) June 30, 2022 " class="align-text-top noRightClick twitterSection" data=" ">

ವಿಶೇಷ ಅಧಿವೇಶನ ರದ್ದು: ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶದ ಪ್ರಕಾರ ಈಗ ವಿಶ್ವಾಸಮತ ಪರೀಕ್ಷೆಯ ಅಗತ್ಯವಿಲ್ಲ, ಆದ್ದರಿಂದ ಇಂದಿನ ವಿಶೇಷ ಅಧಿವೇಶನವನ್ನು ಕರೆಯಲಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು, ಎಲ್ಲ ರಾಜ್ಯದ ಶಾಸಕರಿಗೆ ಮಾಹಿತಿ ರವಾನಿಸಿದ್ದಾರೆ.

ಇದನ್ನು ಓದಿ:ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ

Last Updated : Jun 30, 2022, 9:05 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.