ಪಾಟ್ನಾ(ಬಿಹಾರ್): ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ನಾವು ಬಯಸುತ್ತೇವೆ. ಈ ದಿಸೆಯಲ್ಲಿ ಸಕಾರಾತ್ಮಕ ಕೆಲಸಗಳೂ ನಡೆಯುತ್ತಿವೆ. ಮೊದಲು ಬಿಹಾರದ ಅಭಿವೃದ್ಧಿ ಪರ ಕೆಲಸ ಮಾಡಿ ನಂತರ ನಾವು ಪ್ರತಿಪಕ್ಷಗಳ ಒಗ್ಗಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದರು.
ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ನಿತೀಶ್ ಕುಮಾರ್ ಹೇಳಿಕೆ: ವಾಸ್ತವವಾಗಿ, 'ಬಿಹಾರ ವೃಕ್ಷ ಸಂರಕ್ಷಣಾ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿತೀಶ್ ಕುಮಾರ್ ಅವರು ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಮರಕ್ಕೆ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ರಕ್ಷಣಾ ದಿನಾಚರಣೆಯಂದು ಸಹೋದರಿಯನ್ನು ರಕ್ಷಿಸಲು ಎಲ್ಲರೂ ಈ ಹಬ್ಬವನ್ನು ಆಚರಿಸುತ್ತೇವೆ. ಆದರೆ ಅದರೊಂದಿಗೆ ಮರವನ್ನು ಸಹ ರಕ್ಷಿಸಬೇಕು ಎಂದು ಹೇಳಿದರು. ಈ ವೇಳೆ ವಿಪಕ್ಷಗಳ ಒಗ್ಗಟ್ಟಿನ ಬಗ್ಗೆಯೂ ಸಿಎಂ ದೊಡ್ಡ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿಗೆ ನಿತೀಶ್ ಉತ್ತರವೇ?: ನಿಮಗೆ ಪ್ರಧಾನಿ ಮುಖ ನೋಡಿ ಹೇಳುತ್ತಿದ್ದಾರಾ ಎಂದು ಸಿಎಂ ನಿತೀಶ್ ಅವರನ್ನು ಪ್ರಶ್ನಿಸಿದಾಗ, ನನ್ನ ಮನಸ್ಸಿನಲ್ಲಿ ಅಂಥದ್ದೇನೂ ಇಲ್ಲ ಎಂದು ಕೈ ಮುಗಿದು ಹೇಳುತ್ತಿದ್ದೇವೆ. ಎಲ್ಲರ ಸೇವೆ ಸಲ್ಲಿಸುವುದು ನನ್ನ ಕೆಲಸ. ಪ್ರತಿಪಕ್ಷಗಳು ಒಟ್ಟಾಗಿ ಮುಂದೆ ನಡೆಯಲು ಪ್ರಯತ್ನಿಸುತ್ತೇವೆ. ಅದು ಬಹಳ ಒಳ್ಳೆದಾಗಿರುತ್ತದೆ. ಜನರ ಸಮಸ್ಯೆಗಳ ಬಗ್ಗೆ ಎಲ್ಲರೂ ಒಟ್ಟಾಗಿ ಮಾತನಾಡುತ್ತೇವೆ. ಸಮಾಜದಲ್ಲಿ ಉತ್ತಮ ವಾತಾವರಣವನ್ನು ಕಾಪಾಡಿಕೊಳ್ಳಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದರು.
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ: ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂದು ಹೇಳಿದ್ದಾರೆ. ಆಗಸ್ಟ್ 15ರ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ನಿತೀಶ್ ಕುಮಾರ್ ಹೇಳಿದರು.
ಬಿಜೆಪಿ ಆರೋಪಕ್ಕೆ ಸಿಎಂ ನಿತೀಶ್ ಕೊಟ್ಟ ಉತ್ತರವೇನು?: ಎನ್ಡಿಎ ಮೈತ್ರಿಕೂಟದಿಂದ ಬೇರ್ಪಟ್ಟ ಬಳಿಕ ಬಿಜೆಪಿ ನಿತೀಶ್ ಕುಮಾರ್ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಇದಕ್ಕೆ ನಿತೀಶ್ ಪ್ರತಿಕ್ರಿಯಿಸಿದ್ದಾರೆ. ಸುಶೀಲ್ ಮೋದಿ ಹೆಸರು ಹೇಳದೇ, ನನ್ನ ವಿರುದ್ಧ ಮಾತನಾಡುವುದರಿಂದ ಅವರ ಪಕ್ಷದಲ್ಲಿ ಜನರಿಗೆ ಸ್ವಲ್ಪ ಲಾಭವಾಗುತ್ತದೆ. ಪಕ್ಷದಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟವರು ಏನಾದರೂ ಹೇಳಿದರೆ ಅದು ನನಗೆ ಸಂತೋಷದ ವಿಷಯ. ಅವರಿಗೆ ಸ್ವಲ್ಪ ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇವೆ. ನಾವು ಏನನ್ನೂ ಹೇಳುವುದಿಲ್ಲ. ಏಕೆಂದರೆ ಎನ್‌ಡಿಎಯಿಂದ ಹೊರಬಂದ ನಿರ್ಧಾರ ಬಗ್ಗೆ ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದರು.
10 ಲಕ್ಷ ಉದ್ಯೋಗದ ತೇಜಸ್ವಿ ಭರವಸೆಯ ಬಗ್ಗೆ ನಿತೀಶ್ ಹೇಳಿದ್ದೇನು?: ನಾವು ಪ್ರಯತ್ನಿಸುತ್ತಿದ್ದೇವೆ. ನಾವು ನಮ್ಮ ಕೈಲಾದಷ್ಟು ಮಾಡುತ್ತೇವೆ. 2015-2016ರಲ್ಲೂ ನಾವು ಹೇಳಿದ್ದನ್ನು ಮಾಡಿದ್ದೇವೆ. ಅದರ ಎರಡನೇ ಹಂತವನ್ನೂ ತರಲಾಯಿತು. ಇದಲ್ಲದೇ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಹೆಚ್ಚೆಚ್ಚು ಉದ್ಯೋಗ ನೀಡಬೇಕು ಎಂದೂ ಹೇಳಿದ್ದೇವೆ ಎಂದು ಉಪ ಮುಖ್ಯಮಂತ್ರಿಯ ನೀಡಿರುವ ಭರವಸೆ ಬಗ್ಗೆ ಹೇಳಿದರು.
ಪ್ರಧಾನಿ ಮುಖದ ಪ್ರಶ್ನೆಗೆ ತೇಜಸ್ವಿ ಯಾದವ್ ಹೇಳಿದ್ದೇನು?: ಪ್ರತಿಪಕ್ಷಗಳ ಒಗ್ಗಟ್ಟು ಮತ್ತು 2024ರಲ್ಲಿ ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಅವರ ಹಕ್ಕುಗಳ ಕುರಿತು ಆರ್‌ಜೆಡಿ ನಾಯಕ ಯಾದವ್ ಮಾತನಾಡಿ, ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು ಎಂದು ಹೇಳಿದರು. ನಿತೀಶ್ ಕುಮಾರ್ ಅವರು ಪ್ರಧಾನಿಯ ಮುಖವಾಗುತ್ತಾರೋ, ಇಲ್ಲವೋ ಎಂಬುದು ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ನಿತೀಶ್ ಕುಮಾರ್ ಕೇಂದ್ರದಲ್ಲಿ ಸಚಿವರಾಗಿದ್ದರು. ಅನುಭವಿ ಮುಖ್ಯಮಂತ್ರಿ. ಕೆಲಸ ಮಾಡುವ ಸಾಮರ್ಥ್ಯವಿದೆ. ನರೇಂದ್ರ ಮೋದಿ ಅವರೇ ಪ್ರಧಾನಿ ಆಗ್ತಾರಂದ್ರೆ, ಆಗ ಯಾರು ಬೇಕಾದರೂ ಈ ದೇಶದ ಪ್ರಧಾನಿಯಾಗಬಹುದು ಎಂದು ಹೇಳಿದರು.
ಓದಿ: ಇಡಿ-ಸಿಬಿಐಗೆ ಮನೇಲಿ ಜಾಗ ಕೊಡುವೆ, ಕಚೇರಿ ಮಾಡಿಕೊಳ್ಳಲಿ: ತೇಜಶ್ವಿ ಯಾದವ್ ವ್ಯಂಗ್ಯ