ಹೈದರಾಬಾದ್: ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಘಟನೆಗೆ ಸಿಎಂ ಕೆಸಿಆರ್ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ರೈಲ್ವೆ ಪೊಲೀಸರ ಗುಂಡಿಗೆ ಬಲಿಯಾದ ವರಂಗಲ್ ಜಿಲ್ಲೆಯ ದಾಮೇರ ರಾಕೇಶ್ ಸಾವಿಗೆ ಸಿಎಂ ಕೆಸಿಆರ್ ಸಂತಾಪ ಸೂಚಿಸಿದರು.
ರಾಕೇಶ್ ಮೃತಪಟ್ಟಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಿಎಂ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದರು. ರಾಕೇಶ್ ಕುಟುಂಬದ ಅರ್ಹರಿಗೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಕೇಂದ್ರ ಅನುಸರಿಸುತ್ತಿರುವ ತಪ್ಪು ನೀತಿಗಳಿಂದ ರಾಕೇಶ್ ಸಾವನ್ನಪ್ಪಿದ್ದಾರೆ. ತೆಲಂಗಾಣದ ಮಕ್ಕಳನ್ನು ಸರ್ಕಾರ ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸಲಿದೆ ಎಂದು ಸಿಎಂ ಕೆಸಿಆರ್ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಸೇನೆ ಸೇರುವ ಬಯಕೆ ಹೊಂದಿದ್ದ ರೈತನ ಮಗ 'ಅಗ್ನಿಪಥ' ಹಿಂಸಾಚಾರಕ್ಕೆ ಬಲಿ
ದೇಶಾದ್ಯಂತ ಅಗ್ನಿಪಥ ಯೋಜನೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಉಗ್ರರೂಪ ಪಡೆದುಕೊಂಡಿದೆ. ಹಲವಾರು ಮಹಾನಗರದಲ್ಲಿ ರೊಚ್ಚಿಗೆದ್ದ ಯುವಕರು ರೈಲಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯೋಜನೆ ರದ್ದುಗೊಳಿಸುವಂತೆ ಸಿಕಂದರಾಬಾದ್‌ನಲ್ಲೂ ಯುವಕರ ರೈಲಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾ ನಿರತರ ಮೇಲೆ ಗುಂಡು ಹಾರಿಸಿದರು. ಈ ಶೀತಲ ಸಮರದಲ್ಲಿ ರಾಕೇಶ್ ಮೃತಪಟ್ಟಿದ್ದರು, ಕನಿಷ್ಠ 13 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.