ಐಜ್ವಾಲ್: ಮಿಜೋರಾಂ ಮುಖ್ಯಮಂತ್ರಿಯ ಪುತ್ರಿ ಮಿಲಾರಿ ಚಾಂಗ್ಟೆ ಅವರು ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಶನಿವಾರ ವರದಿಯಾಗಿದೆ. ಮಗಳ ದುರ್ವರ್ತನೆಯ ಮಾಹಿತಿ ಪಡೆದ ಮುಖ್ಯಮಂತ್ರಿ ಝೋರಮ್‌ತಂಗಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
-
#Mizoram CM #Zoramthanga's daughter hits doctor; father apologises pic.twitter.com/lIgXYUwRda
— Aaquil Jameel (@AaquilJameel) August 21, 2022 " class="align-text-top noRightClick twitterSection" data="
">#Mizoram CM #Zoramthanga's daughter hits doctor; father apologises pic.twitter.com/lIgXYUwRda
— Aaquil Jameel (@AaquilJameel) August 21, 2022#Mizoram CM #Zoramthanga's daughter hits doctor; father apologises pic.twitter.com/lIgXYUwRda
— Aaquil Jameel (@AaquilJameel) August 21, 2022
ಇತ್ತೀಚೆಗೆ ಕ್ಲಿನಿಕ್‌ನಲ್ಲಿ ಚರ್ಮರೋಗ ವೈದ್ಯರ ಮೇಲೆ ಮಿಲಾರಿ ಚಾಂಗ್ಟೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಖಂಡಿಸಿ 800ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಿಜೋರಾಂ ವಿಭಾಗದ ವೈದ್ಯರು ಕೂಡಾ ಘಟನೆಯನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದರು.
ಕ್ಲಿನಿಕ್‌ಗೆ ಹಾಜರಾಗುವ ಮೊದಲು ಅಪಾಯಿಂಟ್‌ಮೆಂಟ್ ಪಡೆಯುವಂತೆ ಕೇಳಿದ್ದಕ್ಕಾಗಿ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಸುಮಾರು ಎರಡು ದಿನಗಳ ಹಿಂದೆ ವಿಡಿಯೋ ವೈರಲ್ ಆದ ನಂತರ, ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದ್ದರು.
ಖುದ್ದಾಗಿ ವೈದ್ಯರನ್ನು ಭೇಟಿಯಾಗಿ ಕ್ಷಮೆ ಯಾಚಿಸಿದ್ದೇನೆ. ಅಲ್ಲದೆ ಮಗಳ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸಿಎಂ ಝೋರಮ್‌ತಂಗಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತೆಲುಗು ನಟ ಜೂನಿಯರ್ ಎನ್ಟಿಆರ್ನ ಭೇಟಿ ಮಾಡಿದ ಅಮಿತ್ ಶಾ.. ಬಿಜಿಪಿ ಸೇರ್ತಾರ ತಾರಕ್