ETV Bharat / bharat

ಜಮ್ಮು- ಕಾಶ್ಮೀರದಲ್ಲಿ ನಿರಂತರ ಮಳೆ, ಹಿಮಪಾತ.. ನದಿಗಳ ನೀರಿನ ಮಟ್ಟ ಏರಿಕೆ!

ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

heavy rain in jammu kashmir
ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ
author img

By

Published : Jun 22, 2022, 1:08 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಯಲು ಸೀಮೆ ಮತ್ತು ಎತ್ತರದ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಪಮಾನದಲ್ಲಿ ಗಮನಾರ್ಹ ಕುಸಿತವಾಗಿದೆ. ಪರಿಣಾಮ, ಝೆಲಂ ನದಿ ಮತ್ತು ಅದರ ಉಪನದಿಗಳ ನೀರಿನ ಮಟ್ಟ ಏರಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು-ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಮೊಘಲ್ ರಸ್ತೆ ಮತ್ತು ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸಹ ಮುಚ್ಚಲಾಗಿದೆ.

ನಿರಂತರ ಮಳೆ, ಹಿಮಪಾತ...ನದಿಗಳ ನೀರಿನ ಮಟ್ಟ ಏರಿಕೆ

ಇನ್ನು ಝೆಲಂ ನದಿ, ಅದರ ಉಪನದಿಗಳು ಮತ್ತು ಇತರ ಕಾಲುವೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬೆಳಗ್ಗೆ 10 ಗಂಟೆ ವೆಳೆ ಝೆಲಂ ನದಿಯ ಮಟ್ಟ ಸಂಗಮ್ ಬಳಿ 18.18 ಅಡಿ, ಪಂಪೋರ್ ಬಳಿ 2.72 ಮೀ, ಮತ್ತು ರಾಮ್ ಮುನ್ಷಿ ಬಾಗ್ ಬಳಿ 12.02 ಅಡಿ ಇತ್ತು.

ಕೆಲ ಪ್ರದೇಶಗಳಲ್ಲಿ ಹಿಮಪಾತ ಕೂಡ ಆಗಿದೆ. ಅದಾಗ್ಯೂ, ಜನರು ಭಯಭೀತರಾಗಬೇಡಿ. ಆದರೆ ಮಳೆ, ನದಿ ನೀರಿನ ಮಟ್ಟ ಏರಿಕೆಯ ಬಗ್ಗೆ ನಿಗಾ ವಹಿಸಿ, ಜಾಗರೂಕರಾಗಿರಿ ಎಂದು ಜನರಲ್ಲಿ ಆಡಳಿತ ವಿನಂತಿಸಿದೆ.

ಇದನ್ನೂ ಓದಿ: ಅಗ್ನಿಪಥ ರೋಷಾಗ್ನಿಗೆ ಕೃಷಿ ಬಿಕ್ಕಟ್ಟಿನ ಕೋಪಾಗ್ನಿಯೇ ಕಾರಣ..?

ಉತ್ತರ ಕಾಶ್ಮೀರದ ಬಾಲ್ಟಾಲ್ (ಗಂದರ್ಬಾಲ್), ಗುರೆಜ್ (ಬಂದಪುರ), ಕೆರಾನ್ (ಕುಪ್ವಾರ) ಬಳಿಯ ಅಮರನಾಥ ಪವಿತ್ರ ಗುಹೆಯಲ್ಲಿ ಲಘು ಹಿಮಪಾತ ದಾಖಲಾಗಿದೆ. ಇನ್ನು ವಾಯವ್ಯ ಜಿಲ್ಲೆಗಳಲ್ಲಿ ಮಳೆ ನಿಂತಿದ್ದು, ದಿನ ಕಳೆದಂತೆ ಮಳೆಯ ತೀವ್ರತೆ ಮತ್ತಷ್ಟು ಕಡಿಮೆಯಾಗಲಿದೆ. ಇಂದು ಮಧ್ಯಾಹ್ನದಿಂದ ವಾತಾವರಣ ಸುಧಾರಿಸಲಿದ್ದು, ನಾಳೆಯಿಂದ ಒಂದು ವಾರ ಹಿಮ ಬೀಳುವ ಸಾಧ್ಯತೆ ಇಲ್ಲ ಎನ್ನುವ ವರದಿಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.