ETV Bharat / bharat

ನೀರು ಕುಡಿದಿದ್ದಕ್ಕೆ ದಲಿತ ವಿದ್ಯಾರ್ಥಿಯ ಮೇಲೆ ಶಿಕ್ಷಕನಿಂದ ಹಲ್ಲೆ ಆರೋಪ..

author img

By

Published : Jul 7, 2023, 8:15 PM IST

ಶಾಲೆಯಲ್ಲಿದ್ದ ಮಡಿಕೆಯಿಂದ ನೀರು ಕುಡಿದಿದ್ದಕ್ಕೆ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಥಳಿಸಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ನೀರು ಕುಡಿದಿದ್ದಕ್ಕೆ ಅಪ್ರಾಪ್ತ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಶಿಕ್ಷಕ

ಬಾರ್ಮರ್ : ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಶಾಲೆಯಲ್ಲಿ ಇರಿಸಲಾಗಿದ್ದ ಮಡಕೆಯಿಂದ ನೀರು ಕುಡಿದ ದಲಿತ ವಿದ್ಯಾರ್ಥಿಯ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಆರೋಪಿ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾರ್ಮರ್ ಜಿಲ್ಲೆಯ ನೆಟ್ರಾಡ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಯ ಜಾತಿ ನಿಂದನೆ ಮಾಡಿರುವ ಆರೋಪ : 12 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿ (17ವರ್ಷ) ಕುಟುಂಬ ಸೋಮವಾರ ಬೆಳಗ್ಗೆ ತನ್ನ ಮಗ ಶಾಲೆಯಲ್ಲಿ ಇರಿಸಲಾಗಿದ್ದ ಪಾತ್ರೆಯಲ್ಲಿ ನೀರು ಕುಡಿಯುತ್ತಿದ್ದಾಗ ಶಿಕ್ಷಕರು ವಿದ್ಯಾರ್ಥಿಯನ್ನು ಕಂಡು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಶಿಕ್ಷಕ ವಿದ್ಯಾರ್ಥಿಯನ್ನು ಕರೆದು ಜಾತಿ ನಿಂದನೆ ಮಾಡಿದ್ದಾರೆ. ಕಪಾಳಮೋಕ್ಷ ಮಾಡಿ ಹೊಡೆದಿದ್ದಾರೆ ಮತ್ತು ಆತನ ಗುಪ್ತಾಂಗಕ್ಕೂ ಒದ್ದಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ.

ಹೊಡೆತದ ರಭಸಕ್ಕೆ ಮಗ ನೆಲಕ್ಕೆ ಬಿದ್ದಿದ್ದಾನೆ. ಅದೇ ಶಾಲೆಯಲ್ಲಿ ಓದುತ್ತಿರುವ ಆತನ ಸಹೋದರಿ ಸೇರಿದಂತೆ ಇತರ ವಿದ್ಯಾರ್ಥಿಗಳು ಆತನನ್ನು ರಕ್ಷಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಆದರೆ ತಮ್ಮ ಮಗ ಒಂದು ದಿನ ಈ ವಿಷಯವನ್ನು ನಮ್ಮ ಬಳಿ ಹೇಳಲೇ ಇಲ್ಲ. ಆದರೆ ಅವನು ನೋವನ್ನು ತಾಳಲಾರದೇ ದೂರು ನೀಡಿದಾಗ ಮರುದಿನ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿ ರಚಿಸಲಾಗಿದೆ: ಥಳಿಸಿದ ವಿಷಯ ತಿಳಿದ ಸಂತ್ರಸ್ತೆಯ ತಂದೆ ಜುಲೈ 6 ರಂದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಬಂದು ಆರೋಪಿ ಶಿಕ್ಷಕನ ವಿರುದ್ಧ ಚೌಹ್ತಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 'ಪ್ರಕರಣದ ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಬಗ್ಗೆ ಪೊಲೀಸರಿಂದ ಯಾವುದೇ ಮಾಹಿತಿ ಬಂದಿಲ್ಲ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ' ಎಂದು ಚೌಹ್ತಾನ್ ಬ್ಲಾಕ್ ಶಿಕ್ಷಣಾಧಿಕಾರಿ ಅಮ್ರಾರಾಮ್ ಅವರು ತಿಳಿಸಿದ್ದಾರೆ.

ಹೊಲಕ್ಕೆ ಆಕಳು ನುಗ್ಗಿತೆಂದು ದಲಿತ ಮಹಿಳೆಗೆ ಹಲ್ಲೆ: ಇನ್ನೊಂದೆಡೆ ಹುಲ್ಲು ಮೇಯುತ್ತಾ ಹೊಲಕ್ಕೆ ಆಕಳು ನುಗ್ಗಿತ್ತು ಎಂದು ಜಮೀನು ಮಾಲೀಕ ದಲಿತ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ಇದೀಗ (ಫೆಬ್ರವರಿ 9-2023) ರಂದು ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಕನಕಗಿರಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕನಕಗಿರಿ ತಾಲ್ಲೂಕಿನ ರಾಂಪೂರ ಗ್ರಾಮದ ಅಮರೇಶಪ್ಪ ಕಲ್ಲಪ್ಪ ಕುಂಬಾರ ಪ್ರಕರಣದ ಆರೋಪಿ ಎಂಬುದು ತಿಳಿದುಬಂದಿತ್ತು.

ಮಹಿಳೆ ನೀಡಿದ ಹಲ್ಲೆ, ಜಾತಿ ನಿಂದನೆ ದೂರಿನ ಹಿನ್ನೆಲೆ ಕಾರ್ಯಪ್ರವೃತ್ತರಾಗಿದ್ದ ಕನಕಗಿರಿ ಪೊಲೀಸರು ಆರೋಪಿ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಗಾಯಾಳು ಮಹಿಳೆಯನ್ನು ಶೋಭಾ ರಮೇಶ ಪೂಜಾರ (30) ಎಂದು ಗುರುತಿಸಲಾಗಿತ್ತು. ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಗಂಗಾವತಿ: ಹೊಲಕ್ಕೆ ಆಕಳು ನುಗ್ಗಿತೆಂದು ದಲಿತ ಮಹಿಳೆಗೆ ಹಲ್ಲೆ, ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.