ETV Bharat / bharat

ಟಿಎಂಸಿ ಬಿಜೆಪಿ ಮಧ್ಯೆ ಮಾರಾಮಾರಿ.. ಆರು ಜನರಿಗೆ ಗುಂಡೇಟು, ಕಾರ್ಯಕರ್ತ ಸಾವು! - ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾರಾಮಾರಿ

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್​ ಚುನಾವಣೆಗೆ ಇನ್ನು ಕೆಲವು ದಿನಗಳ ಬಾಕಿ ಇರುವಾಗಲೇ ಹಿಂಸಾಚಾರ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ಇಂದು ಸಹ ಹಿಂಸಾಚಾರ ಘಟನೆ ನಡೆದಿದ್ದು, ಗುಂಡೇಟಿಗೆ ಟಿಎಂಸಿ ಕಾರ್ಯಕರ್ತ ಬಲಿಯಾಗಿದ್ದಾನೆ.

Panchayat Polls  West Bengal Panchayat Polls  Clash Between TMC and BJP  Clash Between TMC and BJP at Dinhata  ಟಿಎಂಸಿ ಬಿಜೆಪಿ ಮಧ್ಯೆ ಮಾರಾಮಾರಿ  ಆರು ಜನರಿಗೆ ಗುಂಡೇಟು  ಗುಂಡೇಟಿಗೆ ಟಿಎಂಸಿ ಕಾರ್ಯಕರ್ತ ಬಲಿ  ಪಶ್ಚಿಮ ಬಂಗಾಳದಲ್ಲಿ ಪಂಚಾಯತ್​ ಚುನಾವಣೆ  ಹಿಂಸಾಚಾರ ಘಟನೆಗಳು ಮುನ್ನೆಲೆಗೆ  ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾರಾಮಾರಿ  ಳೀಯ ಗುಂಪುಗಳ ನಡುವೆ ಮಾರಾಮಾರಿ
ಆರು ಜನರಿಗೆ ಗುಂಡೇಟು, ಕಾರ್ಯಕರ್ತ ಸಾವು!
author img

By

Published : Jun 27, 2023, 1:08 PM IST

ದಿನ್ಹತಾ, ಪಶ್ಚಿಮ ಬಂಗಾಳ: ಜುಲೈ 8 ರಂದು ನಿಗದಿಯಾಗಿದ್ದ ಹೈ - ಆ್ಯಕ್ಷನ್ ಪಂಚಾಯತ್ ಚುನಾವಣೆಗೂ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಕೂಚ್ ಬೆಹಾರ್‌ನ ದಿನ್ಹತಾ ಪೊಲೀಸ್ ಠಾಣೆ ವ್ಯಾಪ್ತಿಯ ಗಿಟಾಲ್ಡಾಹ್‌ನ ಜರಿಧರ್ಲಾ ಗ್ರಾಮದಲ್ಲಿ ಮಂಗಳವಾರ ನಸುಕಿನ ಜಾವ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಇಂದು ಮುಂಜಾನೆ ಜರಿಧರ್ಲಾ ಗ್ರಾಮ ಪಂಚಾಯಿತಿಯ ಪ್ರಕ್ಷುಬ್ಧ ಪ್ರದೇಶಕ್ಕೆ ಪೊಲೀಸ್​ ಪಡೆಗಳನ್ನು ಕಳುಹಿಸಲಾಗಿದೆ ಎಂದು ಕೂಚ್ ಬೆಹಾರ್ ಪೊಲೀಸ್ ವರಿಷ್ಠಾಧಿಕಾರಿ ಸುಮಿತ್ ಕುಮಾರ್ ತಿಳಿಸಿದ್ದಾರೆ.

ಎರಡು ಸ್ಥಳೀಯ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ನಡೆದ ಜಗಳದಲ್ಲಿ ಗುಂಡಿನ ಸದ್ದು ಮೊಳಗಿದೆ. ಈ ಘಟನೆಯ ಹಿಂದಿನ ಕಾರಣವನ್ನು ಇನ್ನು ತಿಳಿದುಬಂದಿಲ್ಲ. ಸ್ಥಳದಲ್ಲಿ ಪೊಲೀಸ್​ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಸುಮಿತ್ ಕುಮಾರ್ ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಪ್ರದೇಶದಲ್ಲಿ ಈ ಘಟನೆ ಸಂಭವಿಸಿರುವುದು ಗಮನಾರ್ಹ..

ಸ್ಥಳೀಯ ಮೂಲಗಳ ಪ್ರಕಾರ, ಆರು ವ್ಯಕ್ತಿಗಳು ಗುಂಡೇಟಿನಿಂದ ಗಾಯಗೊಂಡಿದ್ದರಿಂದ ಹಿಂಸಾಚಾರವು ಮಾರಣಾಂತಿಕವಾಗಿದೆ. ದುರಂತವೆಂದರೆ, ಅವರಲ್ಲಿ ಒಬ್ಬನನ್ನು ಬಾಬು ಹಕ್ ಎಂದು ಗುರುತಿಸಲಾಗಿದ್ದು, ಗಾಯಗೊಂಡು ಸಾವನ್ನಪ್ಪಿದ್ದಾನೆ. ಆದರೆ, ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಘರ್ಷಣೆಗೆ ಕಾರಣವಾಯಿತು ಎಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಬಿಜೆಪಿ ನಿರಂತರವಾಗಿ ನಮ್ಮನ್ನು ಪ್ರಚೋದಿಸುತ್ತಿದೆ ಮತ್ತು ಘರ್ಷಣೆಯಲ್ಲಿ ತೊಡಗಿದೆ. ಅವರು ಜನರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ನಮ್ಮ ಜನರನ್ನು ಪ್ರಚಾರ ಮಾಡದಂತೆ ತಡೆಯುತ್ತಿದ್ದಾರೆ. ನಿನ್ನೆಯೂ ಅವರು ನಮ್ಮ ಮೇಲೆ ಅಪ್ರಚೋದಿತ ದಾಳಿ ನಡೆಸಿದರು ಮತ್ತು ನಮ್ಮ ನಿರಾಯುಧ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡರು ಎಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದರು. ಆದರೆ, ಬಿಜೆಪಿ ಕಾಂಗ್ರೆಸ್ ಮಾಡಿರುವ ಆರೋಪ ತಳ್ಳಿಹಾಕಿದ್ದು, ತೃಣಮೂಲ ಕಾಂಗ್ರೆಸ್‌ನ ಆಂತರಿಕ ಪೈಪೋಟಿಯಿಂದ ಈ ಘರ್ಷಣೆ ನಡೆದಿದೆ ಮತ್ತು ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಈ ಘರ್ಷಣೆಯು ಜೂನ್ 8 ರಂದು ಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರೇರಿತ ಹಿಂಸಾತ್ಮಕ ಘಟನೆಗಳ ಬೆಳೆಯುತ್ತಲೇ ಇವೆ. ದುರಂತ ಎಂದರೆ, ಇಲ್ಲಿಯವರೆಗೆ ಒಟ್ಟು ಒಂಬತ್ತು ವ್ಯಕ್ತಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ TMC ಯ ಐದು ಕಾರ್ಯಕರ್ತರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷದಿಂದ ಇಬ್ಬರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಬಿಜೆಪಿಯಿಂದ ತಲಾ ಒಬ್ಬರು ಇಲ್ಲಿಯವರಿಗೆ ನಡೆದ ಗಲಾಟೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಓದಿ: ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಪತ್ನಿ; ನಡೀತು ಹೈಡ್ರಾಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.