ETV Bharat / bharat

ಬುಡಕಟ್ಟು ಸಮುದಾಯದ ಜೀವನ, ಭಾಷೆ, ಸಂಸ್ಕೃತಿ.. ಒಂದು ಅವಲೋಕನ

ಆದಿವಾಸಿಗಳು ಅರಣ್ಯಗಳಲ್ಲಿ, ಗುಡ್ಡಗಳಲ್ಲಿ ಇರುತ್ತಾರೆ ಎಂದು ಒಂದು ಕಾಲದಲ್ಲಿ ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಶಕಗಳಲ್ಲಿ ಅವರು ಅರಣ್ಯಗಳಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ..

civilization-and-culture-of-tribal-society-in-india

author img

By

Published : Jun 27, 2022, 4:40 PM IST

ಡುಮ್ಕಾ(ಜಾರ್ಖಂಡ್) : ಆದಿವಾಸಿ ಸಮಾಜ ಮತ್ತು ಸಂಸ್ಕೃತಿ ಎಷ್ಟು ಹಳೆಯದೋ ಅದರ ಬಗ್ಗೆ ಅಷ್ಟೇ ಕಡಿಮೆ ಮಾಹಿತಿ ನಮಗಿದೆ. ಆದಿವಾಸಿಗಳಲ್ಲಿ ಅದ್ಭುತ ಹಾಗೂ ವಿಶಿಷ್ಟವಾಗಿದ್ದು ಏನಿದೆ, ಅವರ ಜೀವನ ಮತ್ತು ವ್ಯವಹಾರ ನಮಗಿಂತ ಹೇಗೆ ಭಿನ್ನವಾಗಿವೆ ಎಂಬಿತ್ಯಾದಿ ವಿಷಯಗಳು ಸಾಮಾನ್ಯ ಜನತೆಗೆ ಯಾವಾಗಲೂ ಕುತೂಹಲದ ವಿಷಯವಾಗಿವೆ. ಆದಿವಾಸಿಗಳ ಜೀವನ, ರೀತಿ-ನೀತಿ, ಮಾಟ-ಮಂತ್ರ ಹಾಗೂ ಇನ್ನಿತರ ವಿಲಕ್ಷಣ ಆಚರಣೆಗಳ ಬಗ್ಗೆ ಅದೆಷ್ಟೋ ಕತೆಗಳಿವೆ. ಆದರೆ, ಅವರ ಕೌಟುಂಬಿಕ ಜೀವನದಲ್ಲಿರುವ ವ್ಯಥೆಗಳೇನು ಎಂಬುದು ಹೊರ ಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ.

ಬುಡಕಟ್ಟು ಸಮುದಾಯದ ಜೀವನ, ಭಾಷೆ, ಸಂಸ್ಕೃತಿ - ಒಂದು ಅವಲೋಕನ

ಜಾರ್ಖಂಡ್​ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಬುಡಕಟ್ಟು ಸಮುದಾಯದವರ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಆ ಸಮುದಾಯದ ಬಗ್ಗೆ ಗೌರವಾದರಗಳೂ ಇಮ್ಮಡಿಯಾಗಿವೆ.

ಹಾಗಾದರೆ, ಜಾರ್ಖಂಡ್​ನ ಆದಿವಾಸಿಗಳ ಸಮಾಜ ವ್ಯವಸ್ಥೆ ಹೇಗಿದೆ, ಇವರಲ್ಲಿ ಎಷ್ಟು ವರ್ಗಗಳಿವೆ, ಆದಿವಾಸಿಗಳ ಜಾತಿಗಳು ಯಾವುದರ ಮೇಲೆ ಆಧರಿತವಾಗಿವೆ?. ಈ ಎಲ್ಲ ವಿಷಯಗಳ ಬಗ್ಗೆ ಒಂದು ಮಾಹಿತಿ ಇಲ್ಲಿದೆ.

ಬುಡಕಟ್ಟು ಸಮಾಜ 32 ವರ್ಗಗಳಾಗಿ ವಿಂಗಡಿಸಲ್ಪಟ್ಟಿದೆ : ಸಿದೋ-ಕಾನ್ಹು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪ್ರಮೋದಿನೊ ಹನ್ಸದಾ ಬುಡಕಟ್ಟು ಜನರ ಬಗ್ಗೆ ಒಂದಿಷ್ಟು ನಿಖರ ಮಾಹಿತಿ ನೀಡಿದ್ದಾರೆ. ಜಾರ್ಖಂಡ್​ ಆದಿವಾಸಿಗಳಲ್ಲಿ 32 ವರ್ಗಗಳಿವೆ. ಸಂಥಾಲ್, ಮುಂಡಾ, ಹೋ, ಉರಾಂವ್, ಮಹಲಿ, ಬಿರಹೋರ್, ಖಡಿಯಾ ಮುಂತಾದುವು ಇವುಗಳಲ್ಲಿ ಪ್ರಮುಖವಾಗಿವೆ.

ಜಾರ್ಖಂಡ್, ಬಿಹಾರ, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ ಸೇರಿದಂತೆ ನೇಪಾಳ, ಬಾಂಗ್ಲಾದೇಶ, ಮಾರಿಷಸ್ ಹಾಗೂ ಇನ್ನಿತರ ದೇಶಗಳಲ್ಲಿ ಸಂಥಾಲ್​ ಬುಡಕಟ್ಟು ಸಮುದಾಯದವರು ಹೆಚ್ಚಾಗಿದ್ದಾರೆ. ಆದಿವಾಸಿ ಸಮಾಜದವರು ಎಲ್ಲೇ ಇದ್ದರೂ ಅವರು ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ ಎನ್ನುತ್ತಾರೆ ಪ್ರಮೋದಿನಿ ಹನ್ಸದಾ.

ವಿಭಿನ್ನ ಭಾಷೆಗಳನ್ನಾಡುತ್ತಾರೆ : ಆದಿವಾಸಿಗಳ ಭಾಷೆಯ ಬಗ್ಗೆ ನೋಡುವುದಾದರೆ ಸಂಥಾಲ್​ರ ಭಾಷೆ ಸಂಥಾಲಿ ಆಗಿದೆ. ಉರಾಂವ್ ಜನ ಕುಡುಖ್, ಮುಂಡಾ ಜನ ಮುಂಡಾರಿ, ಹೋ ಜನ ಹೋ ಭಾಷೆ, ಖಡಿಯಾ ಜನ ಖಡಿಯಾ ಭಾಷೆಗಳನ್ನು ಮಾತನಾಡುತ್ತಾರೆ. ಮುಂಡಾರಿ ಹಾಗೂ ಸಂಥಾಲಿ ಭಾಷೆಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ. ಇನ್ನು ಉರಾಂವ್ ಜಾತಿಯವರ ಕುಡುಖ್ ಭಾಷೆ ಸಂಪೂರ್ಣ ವಿಭಿನ್ನವಾಗಿದೆ. ಇದು ತೆಲುಗು ಹಾಗೂ ತಮಿಳು ಭಾಷೆಗಳನ್ನು ಹೋಲುತ್ತದೆ ಎನ್ನಲಾಗಿದೆ.

ಅರಣ್ಯದಿಂದ ಹೊರಬಂದು ತಮ್ಮ ಇರುವಿಕೆ ತೋರಿಸುತ್ತಿದ್ದಾರೆ : ಆದಿವಾಸಿಗಳು ಅರಣ್ಯಗಳಲ್ಲಿ, ಗುಡ್ಡಗಳಲ್ಲಿ ಇರುತ್ತಾರೆ ಎಂದು ಒಂದು ಕಾಲದಲ್ಲಿ ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಶಕಗಳಲ್ಲಿ ಅವರು ಅರಣ್ಯಗಳಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ಒಂದು ಕಾಲದಲ್ಲಿ ಗುಡ್ಡದಲ್ಲಿ ಬೆಳೆಯುವ ಗೆಡ್ಡೆ ಗೆಣಸುಗಳನ್ನೇ ತಿಂದು ಬದುಕುತ್ತಿದ್ದ ಇವರು, ಈಗ ಚೌಮೀನ್, ಚಿಕನ್ ಚಿಲ್ಲಿ, ಬರ್ಗರ್, ಪಿಜ್ಜಾ ಮುಂತಾದೆಲ್ಲವನ್ನೂ ಸೇವಿಸುತ್ತಾರೆ ಎಂದು ಹೇಳುತ್ತಾರೆ ಪ್ರಮೋದಿನಿ ಹನ್ಸದಾ. ಅಕ್ಕಿಯೇ ಇವರ ಪ್ರಮುಖ ಆಹಾರವಾಗಿದೆ. ಮಾಂಸಾಹಾರವನ್ನೂ ಇವರು ಇಷ್ಟ ಪಡುತ್ತಾರೆ.

ಪ್ರಕೃತಿಯ ಆರಾಧಕರು : ಸೋಹರಾಯ್ ಪರ್ವ ಇದು ಆದಿವಾಸಿಗಳ ಬಹು ದೊಡ್ಡ ಹಬ್ಬವಾಗಿದೆ. ಕರ್ಮಾ, ಸರಹುಲ್ ಹಬ್ಬಗಳನ್ನೂ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಇವರ ಎಲ್ಲ ಹಬ್ಬ ಹಾಗೂ ಪೂಜೆಗಳು ಮೂಲತಃ ಪ್ರಕೃತಿಯ ಆರಾಧನೆ ಒಳಗೊಂಡಿರುತ್ತವೆ. ಒಟ್ಟಾರೆಯಾಗಿ ಆದಿವಾಸಿಗಳು ಪ್ರಕೃತಿಯ ಆರಾಧಕರಾಗಿದ್ದಾರೆ. ಸಾಕು ಪ್ರಾಣಿಗಳನ್ನು ಸಹ ಇವರು ಪೂಜಿಸುತ್ತಾರೆ.

ಈಗಲೂ ಹಿಂದುಳಿದಿದೆ ಆದಿವಾಸಿ ಸಮಾಜ : ಬದಲಾದ ಸಮಯದೊಂದಿಗೆ ಸಾಕಷ್ಟು ಆದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬಂದು ಏಳಿಗೆ ಸಾಧಿಸಿದ್ದಾರೆ. ಆದರೂ ಇವರ ಸಂಖ್ಯೆ ಕಡಿಮೆ ಎನ್ನಬಹುದು. ವಾಸ್ತವದಲ್ಲಿ ಅವರ ಸಮುದಾಯ ಏಳಿಗೆ ಹೊಂದಬೇಕಾದಲ್ಲಿ ಅವರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ. ಈಗಾಗಲೇ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತಿರುವ, ಅಭಿವೃದ್ಧಿ ಸಾಧಿಸಿರುವ ಆದಿವಾಸಿಗಳು ಹಿಂದುಳಿದವರನ್ನು ಮುಂದಕ್ಕೆ ತರಲು ಪ್ರಯತ್ನ ಪಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.