ETV Bharat / bharat

ಮಕ್ಕಳ ಸ್ಮಾರ್ಟ್​ಫೋನ್ ವ್ಯಸನ ತಡೆಗೆ ಬೇಕಿದೆ ಕಾನೂನು ಅಸ್ತ್ರ - ಸಾಮಾಜಿಕ ಮಾಧ್ಯಮ ವ್ಯಸನವು ಮಕ್ಕಳ ಜೀವನ

ಮಕ್ಕಳು ಅತಿಯಾದ ಸ್ಮಾರ್ಟ್​ಫೋನ್ ಬಳಕೆ ಮಾಡುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಗತ್ತಿನ ಎಲ್ಲೆಡೆ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ಎ. ಪ್ರಭಾಕರ ರೆಡ್ಡಿ ಅವರ ಲೇಖನ ಇಲ್ಲಿದೆ.

Childhood Held Captive by the Clutches of social media.

author img

By ETV Bharat Karnataka Team

Published : Oct 5, 2023, 2:31 PM IST

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್​ಪೋನ್​ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯು ಆತಂಕ ಮೂಡಿಸುತ್ತಿದೆ. ವಿಶೇಷವಾಗಿ ಯುವ ಪೀಳಿಗೆಯ ವಿಷಯದಲ್ಲಿ ಇದು ತೀರಾ ಕಳವಳಕಾರಿಯಾಗಿದೆ. ಇಂದಿನ ಮಕ್ಕಳು ನಾಳೆಯ ಉತ್ತಮ ನಾಗರಿಕರು ಎಂಬ ಮಾತು ಸತ್ಯವಾಗಿದೆ. ಆದರೆ, ಬಹುತೇಕ ಮಕ್ಕಳು ಇಂದು ಸಾಮಾಜಿಕ ಮಾಧ್ಯಮಗಳ ಆಕರ್ಷಣೆಗೆ ಬಲಿಯಾಗುತ್ತಿದ್ದು, ಇದು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತಿದೆ.

ಮೊಬೈಲ್ ಫೋನ್​ಗಳು ಮತ್ತು ಸಾಮಾಜಿಕ ನೆಟ್​ವರ್ಕಿಂಗ್​ ಪ್ಲಾಟ್​ಫಾರ್ಮ್​ಗಳ ಅತಿಯಾದ ಬಳಕೆಯಿಂದ ಮಕ್ಕಳು ವರ್ಚುಯಲ್ ಜಗತ್ತಿನಲ್ಲಿ ತಮಗೆ ಗೊತ್ತಿಲ್ಲದಂತೆ ಸಿಲುಕುತ್ತಿದ್ದಾರೆ. ಇದರ ಪರಿಣಾಮವಾಗಿ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತಿದ್ದು, ಅವರಿಂದ ಅಪರಾಧ ಚಟುವಟಿಕೆಗಳು ನಡೆಯುವುದು ಹೆಚ್ಚಾಗುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಶಾಲಾ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸಲು ಪ್ರತಿಪಾದಿಸುವ ಕರ್ನಾಟಕ ಹೈಕೋರ್ಟ್​ನ ಇತ್ತೀಚಿನ ನಿಲುವು ಮಹತ್ವ ಪಡೆದಿದೆ.

ಸ್ಮಾರ್ಟ್​ಫೋನ್​ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಈಗ ದೈನಂದಿನ ಜೀವನದ ಅನಿವಾರ್ಯ ಭಾಗವಾಗುತ್ತಿವೆ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಆನ್ಲೈನ್ ತರಗತಿಗಳು ದೈನಂದಿನ ಜೀವನದ ಭಾಗವಾದವು. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಬಿಟ್ಟು ವಿಡಿಯೋ ಗೇಮ್​ಗಳು, ವೆಬ್ ಸರಣಿಗಳು ಮತ್ತು ಒಟಿಟಿಗಳಲ್ಲಿ ಅಪರಾಧ ಸಂಬಂಧಿತ ಕಾರ್ಯಕ್ರಮಗಳನ್ನು ನೋಡುವುದು ಹೆಚ್ಚಾಯಿತು.

ಹೀಗಾಗಿ ಸ್ಮಾರ್ಟ್​ಪೋನ್ ಮತ್ತು ಸಾಮಾಜಿಕ ಮಾಧ್ಯಮ ವ್ಯಸನವು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಬಗ್ಗೆ ತಜ್ಞರು ಇತ್ತೀಚೆಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಪರಿಗಣಿಸಿ, ಸಾಮಾಜಿಕ ಮಾಧ್ಯಮ ಖಾತೆ ನೋಂದಣಿಗೆ 21 ಅಥವಾ 18 ವರ್ಷಗಳ ವಯಸ್ಸಿನ ಮಿತಿ ನಿಗದಿಪಡಿಸುವಂತೆ ಕರ್ನಾಟಕ ಹೈಕೋರ್ಟ್ ಶಿಫಾರಸು ಮಾಡಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ.

'ಲೋಕಲ್ ಸರ್ಕಲ್ಸ್' ಎಂಬ ಸಮೀಕ್ಷಾ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯು ಮಕ್ಕಳು ಡಿಜಿಟಲ್ ಮಾಧ್ಯಮದ ಅತಿಯಾದ ಬಳಕೆಯ ಬಗ್ಗೆ ಪೋಷಕರ ಆತಂಕದ ಮೇಲೆ ಬೆಳಕು ಚೆಲ್ಲಿದೆ. ನಗರ ಪ್ರದೇಶದ ಶೇ 61ರಷ್ಟು ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮ, ಆನ್ಲೈನ್ ಗೇಮಿಂಗ್ ಮತ್ತು ಒಟಿಟಿ ಪ್ಲಾಟ್​ಫಾರ್ಮ್​ಗಳತ್ತ ವ್ಯಸನಕಾರಿ ವರ್ತನೆಗಳನ್ನು ಬೆಳೆಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ವ್ಯಸನಕ್ಕೆ ಅಂಟಿಕೊಂಡ ಪ್ರತಿ ಮೂವರು ವ್ಯಕ್ತಿಗಳ ಪೈಕಿ ಒಬ್ಬರಲ್ಲಿ ಪ್ರಚೋದನೆ ಮತ್ತು ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ.

18 ವರ್ಷಕ್ಕಿಂತ ಕೆಳಗಿನ ಮಕ್ಕಳು ಡಿಜಿಟಲ್ ಪ್ಲಾಟ್​ಫಾರ್ಮ್​ಗಳನ್ನು ಬಳಸಬೇಕಾದರೆ ಪೋಷಕರು ಅನುಮತಿ ನೀಡುವ ಅಧಿಕಾರ ನೀಡುವ ಕಾನೂನು ರೂಪಿಸುವ ಪ್ರಸ್ತಾವನೆಯನ್ನು ಶೇ 73 ಕ್ಕಿಂತ ಹೆಚ್ಚು ಪೋಷಕರು ಬೆಂಬಲಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳುತ್ತದೆ. 9-17 ವರ್ಷ ವಯಸ್ಸಿನವರ ಪೈಕಿ ಬಹುತೇಕರು ಸಾಮಾಜಿಕ ಮಾಧ್ಯಮ, ವೀಡಿಯೊ / ಒಟಿಟಿ ಪ್ಲಾಟ್​ಫಾರ್ಮ್​ಗಳ ಮೇಲೆ ಗಣನೀಯ ಪ್ರಮಾಣದ ಸಮಯ ಕಳೆಯುತ್ತಿದ್ದಾರೆ.

ಇದರ ಪೈಕಿ ಶೇ 46 ರಷ್ಟು ಮಕ್ಕಳು ಪ್ರತಿದಿನ 3-6 ಗಂಟೆಗಳಷ್ಟು ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ನಡೆಸಿದ ಮತ್ತೊಂದು ಸಮೀಕ್ಷೆ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಲಗುವ ಮುನ್ನ ಸ್ಮಾರ್ಟ್​ಫೋನ್ ಬಳಸುತ್ತೇವೆ ಎಂಬುದನ್ನು ಶೇ 23 ಕ್ಕಿಂತ ಹೆಚ್ಚು ಮಕ್ಕಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಲಗುವ ಮುನ್ನ ಯಾವುದಾದರೂ ರೀತಿಯಲ್ಲಿ ತಾವು ಸ್ಮಾರ್ಟ್​ಫೋನ್ ಬಳಸುವುದಾಗಿ ಶೇ 76 ರಷ್ಟು ಮಕ್ಕಳು ಹೇಳಿಕೊಂಡಿದ್ದಾರೆ. ಇದು ಅವರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹೀಗೆ ಅತಿಯಾದ ಸ್ಮಾರ್ಟ್​ಫೋನ್ ಬಳಕೆಯ ಪರಿಣಾಮಗಳು ಭೀಕರವಾಗಿವೆ. ಇದರಿಂದ ಮಾನಸಿಕ ಕಾಯಿಲೆಗಳು ಹೆಚ್ಚುತ್ತಿವೆ, ದೈಹಿಕ ಚಟುವಟಿಕೆಯ ಕೊರತೆಯಿಂದ ಬೊಜ್ಜು ಉಲ್ಬಣಗೊಳ್ಳುತ್ತಿದೆ ಮತ್ತು ಯುವಕರಲ್ಲಿ ಕಣ್ಣಿನ ಕಾಯಿಲೆಗಳು ಹೆಚ್ಚುತ್ತಿವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೀರ್ಘಕಾಲ ಫೋನ್ ಬಳಸಿರುವುದು ಈ ಪರಿಣಾಮಗಳಿಗೆ ಕಾರಣವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.

ಪೋಷಕರ ಮೇಲ್ವಿಚಾರಣೆಯನ್ನು ಬಲಪಡಿಸುವ ಮತ್ತು ಮಕ್ಕಳಲ್ಲಿ ಇಂಟರ್ನೆಟ್ ಮತ್ತು ಸ್ಮಾರ್ಟ್​ಫೋನ್​ಗಳ ಬಳಕೆಯನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ವಯಸ್ಸಿನ ಅವಶ್ಯಕತೆಯ ಮಿತಿ ಹೇರುವುದರೊಂದಿಗೆ ಮಕ್ಕಳು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯುವುದನ್ನು ನಿಷೇಧಿಸಲು ಕಠಿಣ ಶಾಸನ ಜಾರಿಗೆ ತರುವುದು ಅಗತ್ಯವಾಗಿದೆ. ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಮಾರ್ಟ್​ಫೋನ್​ಗಳನ್ನು ಬಳಸಲು ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ನಿಬಂಧನೆಗಳು ಜಾರಿಯಾಗಲಿ ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಪೋಷಕರು ಸಹ ತಮ್ಮ ಮಕ್ಕಳ ಸ್ಮಾರ್ಟ್​ಫೋನ್ ಬಳಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿರ್ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಕಿದೆ. ಕಲಿಕೆಯನ್ನು ಉತ್ತೇಜಿಸುವ ಮತ್ತು ಗೊತ್ತುಪಡಿಸಿದ ಸಮಯದಲ್ಲಿ ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಕಾರ್ಯಕ್ರಮಗಳನ್ನು ಮಾತ್ರ ತಮ್ಮ ನೋಡುತ್ತಿದ್ದಾರೆ ಎಂದು ಅವರು ಖಚಿತಪಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ಚೀನಾ ಕೈಗೊಂಡಿರುವ ಕಠಿಣ ಕ್ರಮಗಳ ಮಾದರಿಯಲ್ಲಿಯೇ ನಮ್ಮ ದೇಶದಲ್ಲೂ ನಿಯಮ ರೂಪಿಸಬೇಕಿದೆ.

ಮಕ್ಕಳು ದಿನನಿತ್ಯ ಎಷ್ಟು ಹೊತ್ತು ಸ್ಮಾರ್ಟ್​ಪೋನ್ ನೋಡಬಹುದು ಎಂಬ ಬಗ್ಗೆ ಚೀನಾ ಸರ್ಕಾರ ಈಗಾಗಲೇ ಮಿತಿಗಳನ್ನು ವಿಧಿಸಿದೆ ಮತ್ತು ಈ ವಿಧಾನವನ್ನು ಪರಿಣಾಮಕಾರಿಯಾಗಿ ಅನುಕರಿಸಬಹುದು. ಇದಲ್ಲದೆ, ಇತ್ತೀಚಿನ ಯುನೆಸ್ಕೋ ಅಧ್ಯಯನವು ಸ್ಮಾರ್ಟ್ಫೋನ್​ಗಳು, ಟ್ಯಾಬ್ಲೆಟ್​ಗಳು ಮತ್ತು ಕಂಪ್ಯೂಟರುಗಳ ಮೂಲಕ ಅತಿಯಾದ ಆನ್ಲೈನ್ ಬೋಧನೆಯ ನ್ಯೂನತೆಗಳನ್ನು ಎತ್ತಿ ತೋರಿಸಿದೆ. ಈ ಅನಾನುಕೂಲತೆಗಳನ್ನು ಎದುರಿಸಲು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಮಗ್ರ ಬೆಂಬಲವನ್ನು ಒದಗಿಸಲು ಸಾಕಷ್ಟು ಸಂಖ್ಯೆಯ ಶಿಕ್ಷಕರು ಮತ್ತು ವೃತ್ತಿಪರರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡಬೇಕು. ಆನ್ಲೈನ್ ಕಲಿಕೆಯ ವೇದಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು.

ಮಕ್ಕಳ ಜೀವನದ ಮೇಲೆ ಡಿಜಿಟಲ್ ಮಾಧ್ಯಮ ಬೀರುತ್ತಿರುವ ಪ್ರಭಾವವು ಆತಂಕಕಾರಿಯಾಗಿದೆ. ಇದು ಹಲವಾರು ಆರೋಗ್ಯ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಉಂಟು ಮಾಡಬಹುದಾಗಿದೆ. ಮಕ್ಕಳು ಸ್ಮಾರ್ಟ್​ಫೋನ್ ವ್ಯಸನ ಮತ್ತು ಅತಿಯಾದ ಇಂಟರ್ನೆಟ್ ಬಳಕೆಯ ಬಲೆಗೆ ಬೀಳದಂತೆ ತಡೆಯಲು ದೃಢವಾದ ಸುರಕ್ಷತಾ ಕ್ರಮಗಳನ್ನು ವಿಧಿಸುವುದು ಕಡ್ಡಾಯವಾಗಿದೆ. ಇದಕ್ಕೆ ಸರ್ಕಾರಗಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಸಂಯೋಜಿತ ಪ್ರಯತ್ನದ ಅಗತ್ಯವಿದೆ. ಯುವ ಪೀಳಿಗೆಗೆ ಸಮತೋಲಿತ ಮತ್ತು ಆರೋಗ್ಯಕರ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

(ಲೇಖನ: ಎ. ಪ್ರಭಾಕರ ರೆಡ್ಡಿ)

ಇದನ್ನೂ ಓದಿ : ಈ ವರ್ಷ 5G ಫೋನ್​ ಖರೀದಿಸಲಿದ್ದಾರೆ 3 ಕೋಟಿ ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.