ಸುರ್ಗುಜ (ಛತ್ತೀಸ್ಗಢ): ಇಲ್ಲಿನ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದಾಗಿ ಎಸ್ಎನ್ಸಿಯುನಲ್ಲಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯುತ್ ಕಡಿತದ ನಂತರ ಬ್ಯಾಟರಿ ಬ್ಯಾಕಪ್‌ನಲ್ಲಿಯೂ ಸಮಸ್ಯೆ ಉಂಟಾಗಿದ್ದು ವೆಂಟಿಲೇಟರ್ ಸ್ಥಗಿತಗೊಂಡು ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ, ಈ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ ಇತರ ಕಾರಣದಿಂದ ಇನ್ನೂ ಇಬ್ಬರು ಮಕ್ಕಳು ಅಸುನೀಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೈಸೂರು: ತಾಲೂಕಾಸ್ಪತ್ರೆಯಲ್ಲಿ ಕರೆಂಟ್ ಕಡಿತ.. ಕತ್ತಲಿನಲ್ಲೇ ದಿನ ದೂಡಿದ ರೋಗಿಗಳು
ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಟಿ ಎಸ್ ಸಿಂಗ್‌ದೇವ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಆರೋಗ್ಯ ಸಚಿವರು ಆರೋಗ್ಯ ಕಾರ್ಯದರ್ಶಿ ಆರ್. ಪ್ರಸನ್ನ ಅವರಿಗೆ ಸೂಚಿಸಿದ್ದಾರೆ.