ETV Bharat / bharat

ಮಗುವನ್ನು ರಕ್ಷಿಸಲು ರೈಲಿನಿಂದ ಹಾರಿದ ತಂದೆ: ಅಪ್ಪ-ಮಗಳ ದಾರುಣ ಸಾವು

author img

By

Published : Nov 14, 2022, 9:07 AM IST

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮೂರು ವರ್ಷದ ಮಗುವನ್ನು ಕಾಪಾಡಲು ಹೋಗಿ ಇಬ್ಬರೂ ದಾರುಣ ದುರಂತ ಅಂತ್ಯ ಕಂಡ ಘಟನೆ ವಾರಣಾಸಿಯಲ್ಲಿ ನಡೆದಿದೆ.

Child falls off train  Child falls off train father jumps out to save her  father jumps running train  ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗು  ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಲು ಹೋದ ತಂದೆ  ರೈಲಿನಿಂದ ಬಿದ್ದ ಮೂರು ವರ್ಷದ ಮಗು  ಮಗುವನ್ನು ರಕ್ಷಿಸಲು ಆಕೆಯ ತಂದೆ  ರನ್ನಿಂಗ್​ ಟ್ರೈನ್​ನಿಂದ ಜಂಪ್  ತಂದೆ ಮಗಳು ಇಬ್ಬರೂ ಮೃತ
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಲು ಹೋದ ತಂದೆ

ವಾರಣಾಸಿ(ಉತ್ತರ ಪ್ರದೇಶ): ಚಲಿಸುತ್ತಿದ್ದ ರೈಲಿನಿಂದ 3 ವರ್ಷದ ಮಗು ಹೊರಬಿದ್ದಿದೆ. ತಕ್ಷಣ ಮಗುವನ್ನು ರಕ್ಷಿಸಲು ತಂದೆ ಹಾರಿದ್ದಾರೆ. ಈ ದುರಂತದಲ್ಲಿ ತಂದೆ-ಮಗಳು ಇಬ್ಬರೂ ಮೃತಪಟ್ಟಿದ್ದಾರೆ. ಮಿರ್ಜಾಮುರಾದ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, 32 ವರ್ಷದ ಹೀರಾ ರೈನ್ ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಕಿಕ್ಕಿರಿದು ತುಂಬಿದ್ದರಿಂದ ಸೀಟು ಸಿಗದೇ ಬಾಗಿಲ ಬಳಿಯೇ ಕುಳಿತಿದ್ದರು. ಈ ವೇಳೆ ಮಗು ರೈಲಿನಿಂದ ಬಿದ್ದಿದ್ದು, ಹೀರಾ ರೈನ್ ತಕ್ಷಣ ಆಕೆಯನ್ನು ರಕ್ಷಿಸಲು ಹೊರಗೆ ಹಾರಿದ್ದಾರೆ. ಇದನ್ನು ಗಮನಿಸಿದ ಹೆಂಡತಿ ತಕ್ಷಣವೇ ಟ್ರೈನ್​ ಚೈನ್ ಎಳೆದು ರೈಲು ನಿಲ್ಲಿಸಿದರು.

ಈ ಸಂದರ್ಭದಲ್ಲಿ ಕೆಲವು ಪ್ರಯಾಣಿಕರು ತಂದೆ-ಮಗಳ ಸಹಾಯಕ್ಕೆ ದೌಡಾಯಿಸಿದ್ದಾರೆ. ಆದ್ರೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಗಂಭೀರವಾಗಿ ಗಾಯಗೊಂಡು ಹೀರಾ ರೈನ್‌ ಸಾವು-ಬದುಕಿನ ಮಧ್ಯೆ ನರಳಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಮಾಹಿತಿಯನ್ನು ಕುಟುಂಬದ ಸ್ಥಳೀಯ ಸಂಬಂಧಿಕರಿಗೆ ತಿಳಿಸಲಾಗಿದೆ ಎಂದು ಮಿರ್ಜಾಮುರಾದ್ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದರು.

ಇದನ್ನೂ ಓದಿ: ಗ್ಯಾಂಗ್​ಮನ್​ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ರೈಲು ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.