ನಾಗ್ಪುರ: ಇಲ್ಲಿನ ಮನೆಯೊಂದರಲ್ಲಿ ಬಾಲಕಿಯೊಬ್ಬಳು ತನ್ನ ಗೊಂಬೆಯೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಜನ್ ನೀಲೇಶ್ ಸಿಹಿರಿಯಾ (ವಯಸ್ಸು 4) ಮೃತಪಟ್ಟ ಬಾಲಕಿ.
ಘಟನೆಯ ವಿವರ: ಮನೆಯಲ್ಲಿ ಇಲಿಗಳು ವಿಪರೀತ ಉಪಟಳ ನೀಡುತ್ತಿದ್ದವು. ಇದನ್ನು ತಡೆಯಲಾರದೆ ತಾಯಿ ಮನೆಯಲ್ಲಿ ಪಾಷಾಣ ಇಟ್ಟಿದ್ದರು. ಗೊಂಬೆಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಅದನ್ನು ನೋಡಿ ಚಾಕೋಲೇಟ್ ಆಗಿರಬೇಕೆಂದು ತಿಳಿದು ಸೇವಿಸಿದ್ದಾಳೆ. ನಂತರ ಆಕೆ ಅಸ್ವಸ್ಥಗೊಂಡಳು. ಅದೇ ಸಮಯದಲ್ಲಿ ವಾಂತಿ ಮಾಡಿಕೊಂಡಿದ್ದಾಳೆ.
ಇದನ್ನು ಗಮನಿಸಿದ ತಾಯಿ ವಿಚಾರಿಸಿದ್ದಾರೆ. ಆಗ ತಾನು ಚಾಕೋಲೆಟ್ ತೆಗೆದುಕೊಂಡಿರುವುದಾಗಿ ಮಗು ಹೇಳಿದೆ. ಇದನ್ನು ಕೇಳಿದ ಪೋಷಕರಿಗೆ ಆಘಾತವಾಗಿದೆ. ಕೂಡಲೇ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ದುರಾದೃಷ್ಟವಶಾತ್ ಮಗು ಮೃತಪಟ್ಟಿದೆ.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆಂದು ಕರೆಸಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕ: ಇಬ್ಬರೂ ಸಾವು