ಜಶ್‌ಪುರ (ಛತ್ತೀಸ್ಗಢ): ಹಾವು ಕಡಿತದಿಂದ ಅನೇಕರು ಸಾವನ್ನಪ್ಪಿರುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಛತ್ತೀಸ್ಗಢದ ಜಶ್‌ಪುರ ಜಿಲ್ಲೆಯಲ್ಲಿ ವಿಚಿತ್ರ, ಅಚ್ಚರಿಯ ಪ್ರಕರಣ ಜರುಗಿದೆ. ಬಾಲಕನಿಗೆ ಹಾವು ಕಚ್ಚಿದ್ದು, ಆ ಬಾಲಕ ತಿರುಗಿ ಹಾವಿಗೆ ಕಚ್ಚಿದ್ದು, ಇದರಿಂದ ಹಾವು ಸಾವನ್ನಪ್ಪಿದೆ.
ಇಲ್ಲಿನ ಪಂಡರಪತ್ ಪ್ರದೇಶದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ 12 ವರ್ಷದ ದೀಪಕ್ ಎಂಬ ಬಾಲಕ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರಿಯ ಮನೆಗೆ ಹೋಗಿದ್ದ. ಈ ವೇಳೆ ಆಟವಾಡುತ್ತಿದ್ದಾಗ ದೀಪಕ್ ಕೈಗೆ ಹಾವು ಕಚ್ಚಿದೆ.
ಹಾವು ಕಚ್ಚಿದ ನಂತರ ಕೋಪಗೊಂಡ ಬಾಲಕ ದೀಪಕ್ ಅದೇ ಹಾವನ್ನು ಹಿಡಿದುಕೊಂಡು ಹಲ್ಲುಗಳಿಂದ ಎರಡು ಬಾರಿ ಗಟ್ಟಿಯಾಗಿ ಕಚ್ಚಿದ್ದಾನೆ. ಇದರಿಂದ ಹಾವಿನ ಚರ್ಮ ಕಿತ್ತು ಬಂದಿದ್ದು, ಅದು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತ, ದೀಪಕ್ ಕೈಗೆ ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಆತನ ಸಹೋದರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಆತನ ಪ್ರಾಣ ಉಳಿಸಿದ್ದಾರೆ. ಜಶ್‌ಪುರ ಜಿಲ್ಲೆಯಲ್ಲಿ ಹಾವು ಕಚ್ಚಿದರೆ ಮನುಷ್ಯರೂ ಮರಳಿ ಹಾವಿಗೆ ಕಚ್ಚುತ್ತಾರೆ ಎಂಬ ಮೂಢನಂಬಿಕೆಯೂ ಇದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಕದ್ದು ಮುಚ್ಚಿ ನಡೆಯುತ್ತಿತ್ತು ಕಚಗುಳಿ.. 24 ವರ್ಷದ ಬಳಿಕ ಸಹೋದರನಿಗೆ ಪತ್ನಿ ತ್ಯಾಗ ಮಾಡಿದ ಪತಿ!